newsfirstkannada.com

×

‘ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ -CM ನಾಯ್ಡು ಆರೋಪ ಬೆನ್ನಲ್ಲೇ, ಭಾರೀ ವಿವಾದ

Share :

Published September 19, 2024 at 10:29am

    ಲಡ್ಡುವಿನಲ್ಲಿ ತುಪ್ಪದ ಬದಲು ಪ್ರಾಣಿಯ ಕೊಬ್ಬು ಬಳಕೆ

    ಹಾಲಿ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ

    ಭಕ್ತರಲ್ಲಿ ಹೆಚ್ಚಿದ ಆತಂಕ, ಆಂಧ್ರದಲ್ಲಿ ಭಾರೀ ವಿವಾದ

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಿಂದಿನ ಜಗನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಗತ್ಪ್ರಸಿದ್ಧ ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಕೆಗೆ ತುಪ್ಪದ ಬದಲು ಪ್ರಾಣಿಯ ಕೊಬ್ಬು ಬಳಕೆ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು. ಅವರ ಅವಧಿಯಲ್ಲಿ ತಿರುಮಲ ಲಡ್ಡು ಕೂಡ ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ. ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಭಾರತ ಫಸ್ಟ್ ಬ್ಯಾಟಿಂಗ್; ಬಲಿಷ್ಠ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಚಾನ್ಸ್..? KL ರಾಹುಲ್ ಕತೆ ಏನು?

‘ಅನ್ನದಾನ’ (ಉಚಿತ ಆಹಾರ) ವಿಚಾರದಲ್ಲೂ ಗುಣಮಟ್ಟವನ್ನು ರಾಜಿ ಮಾಡಿಕೊಂಡರು. ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿ ಪವಿತ್ರ ತಿರುಮಲ ಲಡ್ಡುವನ್ನು ಕಲುಷಿತಗೊಳಿಸಿದರು. ಆದರೆ ನಾವೀಗ ಶುದ್ಧ ತುಪ್ಪವನ್ನು ಬಳಸುತ್ತಿದ್ದೇವೆ. ನಾವು ಟಿಟಿಡಿಯ ಪಾವಿತ್ರ್ಯತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆ ಬೆನ್ನಲ್ಲೇ ಭಕ್ತ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಕನ್ನಡಿಗರಿಗೆ ಗುಡ್​​ನ್ಯೂಸ್​​; ತಿರುಪತಿ ಲಡ್ಡು ವಿಚಾರದಲ್ಲಿ ಒಂದೊಳ್ಳೆ ಸುದ್ದಿ

ಈ ಆರೋಪಕ್ಕೆ ತಿರುಗೇಟು ನೀಡಿರುವ ವೈಎಸ್‌ಆರ್‌ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ.. ನಾಯ್ಡು ತಿರುಮಲ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ. ಚಂದ್ರಬಾಬು ನಾಯ್ಡು, ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಯನ್ನು ಗಂಭೀರವಾಗಿ ಹಾನಿಗೊಳಿಸಿದ್ದಾರೆ. ತಿರುಮಲ ಪ್ರಸಾದ್ ಕುರಿತು ಅವರು ಮಾಡಿರುವ ಕಾಮೆಂಟ್‌ಗಳು ಅತ್ಯಂತ ದುರುದ್ದೇಶಪೂರಿತ. ಯಾವುದೇ ವ್ಯಕ್ತಿ ಇಂತಹ ಮಾತುಗಳನ್ನಾಡುವುದಿಲ್ಲ, ಆರೋಪ ಮಾಡುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ -CM ನಾಯ್ಡು ಆರೋಪ ಬೆನ್ನಲ್ಲೇ, ಭಾರೀ ವಿವಾದ

https://newsfirstlive.com/wp-content/uploads/2024/09/ANDRA.jpg

Load More