/newsfirstlive-kannada/media/post_attachments/wp-content/uploads/2024/08/pawan-kalyan-on-gandhadgudi.jpg)
ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ಹಾಗೂ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ಪವನ್ ಕಲ್ಯಾಣ್ ಬಳಿಕ ಸುದ್ದಿಗೋಷ್ಟಿ ನಡೆಸಿದರು. ಮಾಧ್ಯಮಗಳೊಂದಿ ಮಾತನಾಡಿದ ಅವರು ತಮ್ಮ ಮಾತಿನುದ್ದಕ್ಕೂ ಕನ್ನಡ ನಾಡಿನ ಗುಣಗಾನ ಮಾಡಿದರು.
ಇದನ್ನೂ ಓದಿ: ಖ್ಯಾತ ಸಿಂಗರ್​ ಪಲಕ್ ಹಾಡಿದ್ದಕ್ಕೆ ಬಡಿದುಕೊಳ್ತಿವೆ 3 ಸಾವಿರ ಮಕ್ಕಳ ಹೃದಯ; ಮನಮಿಡಿಯುವ ಸ್ಟೋರಿ ಇದು!
ಕುವೆಂಪು ಅವರ ಕವನದಿಂದಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್ ನನಗೆ ಕುವೆಂಪು ಅವರ ಪುಸ್ತಕಗಳ ಬಗ್ಗೆ ತುಂಬಾ ಗೌರವವಿದೆ ಎಂದು ಹೇಳಿದರು. ಅರಣ್ಯಕ್ಕೆ ಹಾಡು ಹಾಡುವ ಮುನ್ನ ನನ್ನ ಮನದು ಮುಂದೆ ನಾನು ನಿಲ್ಲುತ್ತೇನೆ ಎಂಬ ಕುವೆಂಪು ವಿರಚಿತ ಕವನವನ್ನು ಪವನ್ ಕಲ್ಯಾಣ್ ಹಾಡಿದರು.
/newsfirstlive-kannada/media/post_attachments/wp-content/uploads/2024/08/pawan-kalyan-on-gandhadgudi.jpg)
ಅಷ್ಟು ಮಾತ್ರವಲ್ಲ ನನಗೆ ಕನ್ನಡ ಭಾಷೆಯ ಬಗ್ಗೆ ಗೌರವ ಇದೆ. ಕನ್ನಡದಲ್ಲಿ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಡಾ. ರಾಜ್​ಕುಮಾರ್ 40 ವರ್ಷಗಳ ಹಿಂದೆಯೇ ಗಂಧದ ಗುಡಿ ಎಂಬ ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಒಂದು ಸಂದೇಶವಿದೆ ಗಂಧದಗುಡಿ ಸಿನಿಮಾ ಇರಬಹುದು ಆದ್ರೆ ಅದರಲ್ಲಿ ತಿಳಿಸಿರುವ ಅರಣ್ಯ ಸಂಪತ್ತಿನ ರಕ್ಷಣೆಯ ಸಂದೇಶ ಬಹಳ ಮುಖ್ಯ ಎಂದು ಹೇಳಿದ್ದಾರೆ.
ಕನ್ನಡ ಭಾಷೆ ಕಲಿಯಬೇಕೆಂಬ ಉತ್ಸಾಹವಿದೆ
ಇನ್ನೂ ತಮ್ಮ ಮಾತಿನದ್ದುಕ್ಕೂ ಕನ್ನಡದ ಪರಂಪರೆ ಸಂಸ್ಕೃತಿಯನ್ನು ಹಾಡಿ ಹೊಗಳಿದೆ ಪವನ್ ಕಲ್ಯಾಣ್, ನನಗೆ ಕನ್ನಡ ಭಾಷೆಯ ಬಗ್ಗೆ ತುಂಬಾ ಗೌರವವಿದೆ. ಈ ಒಂದು ಭೇಟಿ ನನಗೆ ಕನ್ನಡ ಕಲಿಯಲು ಪ್ರೇರಣೆ ನೀಡಿದೆ. ಮುಂದಿನ ದಿನಗಳಲ್ಲಿ ನಾನು ಕನ್ನಡ ಕಲಿಯುತ್ತೇನೆ ಎಂದು ಹೇಳಿದ್ದಾರಲ್ಲದೇ, ನಾನು ಡಿಸಿಎಂ ಎನ್ನುವುದಕ್ಕಿಂತ ಹೆಚ್ಚು ಪರಿಸರ ಸಂರಕ್ಷಣೆ ಬಗ್ಗೆ ಗಮನ ಹರಿಸುತ್ತೇನೆ. ವಸುದೈವ ಕುಟುಂಬಕಂ ಎಂಬ ಹಾಗೆ ನಾವು ನಮ್ಮ ಭೂಮಿ ತಾಯಿಯನ್ನು ರಕ್ಷಣೆ ಮಾಡಬೇಕಿದೆ. ರಕ್ತ ಚಂದನ ಸಂರಕ್ಷಣೆಗೆ ಸಂಬಂಧಿಸಿದ ಸುದ್ದಿಯನ್ನು ನಾನು ನೋಡಿದ್ದೇನೆ. 140 ಕೋಟಿ ಮೌಲ್ಯದ ರಕ್ತ ಚಂದನ ಕರ್ನಾಟಕದಲ್ಲಿ ಸಂರಕ್ಷಣೆ ಮಾಡಲಾಗಿದೆ. ಶ್ರೀಶೈಲಂ ಹಾಗೂ ತಿರುಮಲದಲ್ಲಿ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ವಿಚಾರವನ್ನು ನಾನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿಗೆ ಪಾಕಿಸ್ತಾನದಿಂದ ಭರ್ಜರಿ ಉಡುಗೊರೆ..? ಹೊಸ ವಿವಾದ..!
ಈಶ್ವರ್ ಖಂಡ್ರೆಯವರ ಭೇಟಿ ಖುಷಿ ನೀಡಿದೆ ಎಂದು ಹೇಳಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಕರ್ನಾಟಕ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ, ಆನೆಗಳ ಸೆರೆ, ಮಾವುತರ ತರಬೇತಿ ಹಾಗೂ ರಕ್ತ ಚಂದನದ ಸಂರಕ್ಷಣೆ ಬಗ್ಗೆ ಚರ್ಚಿಸಿದ್ದೇವೆ. ಒಟ್ಟು ಏಳು ವಿಚಾರಗಳನ್ನಿಟ್ಟುಕೊಂಡು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಅದರಲ್ಲಿ ಪ್ರಮುಖ ಉದ್ದೇಶ ರಕ್ತಚಂದನದ ಸಂರಕ್ಷಣೆಗೆ ಆದ್ಯತೆ ನೀಡುವುದು ಆಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us