newsfirstkannada.com

Video; ತಲೆಗೊಂದು ಕೋಳಿ, ಎಣ್ಣೆ ಬಾಟಲ್‌.. ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕ

Share :

Published January 17, 2024 at 12:48pm

    ಕೋಳಿ, ಎಣ್ಣೆ ಬಾಟಲ್ ನೀಡಿರುವ ವಿಡಿಯೋ ಫುಲ್ ವೈರಲ್

    ಮಕರ ಸಂಕ್ರಾಂತಿ ಹಬ್ಬವನ್ನ ಎಲ್ಲೆಡೆ ಸಂಭ್ರಮಾದಿಂದ ಆಚರಿಸಿದರು

    ಮದ್ಯದ ಬಾಟಲ್, ಕೋಳಿಗಳನ್ನ ಪಡೆದುಕೊಂಡ ಜನ ಫುಲ್ ಖುಷ್

ಹೈದರಾಬಾದ್: ಮಕರ ಸಂಕ್ರಾಂತಿ ಹಬ್ಬವನ್ನ ಎಲ್ಲೆಡೆ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಹಲವೆಡೆ ಏರ್ಪಡಿಸಲಾಗಿದ್ದ ಹೋರಿಗಳನ್ನು ಓಡಿಸುವುದು, ಹಿಡಿಯುವ ಸ್ಪರ್ಧೆಯಲ್ಲಿ ಜನ ಸಂಭ್ರಮದಿಂದ ಪಾಲ್ಗೊಂಡು ಖುಷಿ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಸಂಕ್ರಾಂತಿ ಹಬ್ಬಕ್ಕಾಗಿ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿನ ಕೆಲವರಿಗೆ ಮದ್ಯದ ಬಾಟಲ್ ಹಾಗೂ ಕೋಳಿ ಉಡುಗೊರೆಯಾಗಿ ನೀಡಿದ್ದಾರೆ.

ಶಾಸಕರಾದ ವಾಸುಪಲ್ಲಿ ಗಣೇಶ್ ಕುಮಾರ್ ಅವರು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೋಳಿ ಹಾಗೂ ಮದ್ಯದ ಬಾಟಲ್ ಅನ್ನು ಗಿಫ್ಟ್​ ನೀಡಿದ್ದಾರೆ. ಗಣೇಶ್ ರಾಮಬಾಣಂ ಜೂನಿಯರ್ ಕಾಲೇಜಿನಲ್ಲಿ, ಸುಮಾರು 400 ಮಂದಿಗೆ ಕೋಳಿ ಮತ್ತು ಮದ್ಯದ ಫುಲ್ ಬಾಟಲಿಗಳನ್ನು ನೀಡಿದ್ದಾರೆ. ಸದ್ಯ ಹೀಗೆ ಶಾಸಕರು ಕೋಳಿ ಹಾಗೂ ಮದ್ಯದ ಬಾಟಲ್ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

ಮದ್ಯದ ಬಾಟಲ್ ಹಾಗೂ ಕೋಳಿಗಳನ್ನು ವಿತರಣೆ ಮಾಡಿರುವ ವಾಸುಪಲ್ಲಿ ಗಣೇಶ್ ಕುಮಾರ್ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣದ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಮೊದಲು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷದಿಂದ ಗುರುತಿಸಿಕೊಂಡಿದ್ದರು. ಆದರೆ ನಂತರ YSRCPಯಲ್ಲಿ ಗುರುತಿಸಿಕೊಂಡು 2019ರ ಎಲೆಕ್ಷನ್​ ಗೆದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video; ತಲೆಗೊಂದು ಕೋಳಿ, ಎಣ್ಣೆ ಬಾಟಲ್‌.. ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕ

https://newsfirstlive.com/wp-content/uploads/2024/01/AP_MLA.jpg

Load More