newsfirstkannada.com

ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ.. ಆರೋಪಿ ಸ್ವಾಮಿ ಪೂರ್ಣಾನಂದ ಅರೆಸ್ಟ್​!

Share :

20-06-2023

  ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ

  ವಿಶಾಖಪಟ್ಟಣದ ಆಶ್ರಮದ ಸ್ವಾಮಿ ಪೂರ್ಣಾನಂದ ಎಂಬಾತ ಅರೆಸ್ಟ್​

  ಅತ್ಯಾಚಾರ ಕೇಸ್​ ಸಂಬಂಧ ಆಂಧ್ರ ಪೊಲೀಸರಿಂದ ತೀವ್ರ ವಿಚಾರಣೆ

ಹೈದರಾಬಾದ್​: ವಿಶಾಖಪಟ್ಟಣದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸ್ವಾಮಿ ಪೂರ್ಣಾನಂದ ಎಂಬುವರು ಜೈಲು ಸೇರಿದ್ದಾರೆ. ಕಳೆದ 5 ವರ್ಷಗಳಿಂದ ಸ್ವಾಮಿ ಪೂರ್ಣಾನಂದ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಇದರ ಆಧಾರದ ಮೇರೆಗೆ ಆರೋಪಿ ಸ್ವಾಮಿ ಪೂರ್ಣಾನಂದ ಅವರನ್ನು ಅರೆಸ್ಟ್​ ಮಾಡಲಾಗಿದೆ.

12 ವರ್ಷದ ಬಾಲಕಿ ಇತ್ತೀಚೆಗೆ ಆಶ್ರಮದಿಂದ ನಾಪತ್ತೆಯಾಗಿದ್ದಳು. ಬಳಿಕ ಬಾಲಕಿಯನ್ನು ಪೊಲೀಸ್ರು ಹುಡುಕಿ ತಂದಿದ್ದಾರೆ. ಯಾಕೆ ಆಶ್ರಮ ಬಿಟ್ಟು ಹೋದೆ ಎಂದಾಗ ಸ್ವಾಮಿ ಪೂರ್ಣಾನಂದ ಕರ್ಮಕಾಂಡ ಬಯಲಿಗೆ ಬಂದಿದ್ದೆ. ತನ್ನ ಮೇಲೆ 2016 ರಿಂದ ಅತ್ಯಾಚಾರ ನಡೆಸುತ್ತಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ.

ಸಂತ್ರಸ್ತ ಬಾಲಕಿ ಕಳೆದ ಆರು ವರ್ಷಗಳಿಂದ ಆಶ್ರಮದಲ್ಲಿ ವಾಸಿಸುತ್ತಿದ್ದಾಳೆ. ಇದೇ ತಿಂಗಳು ಜೂನ್​​ 13ನೇ ತಾರೀಕಿನಂದು ಬಾಲಕಿ ನಾಪತ್ತೆ ಆಗಿದ್ದಳು. ಜೂನ್​​ 15ನೇ ತಾರೀಕು ಆಶ್ರಮದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಕೇಸ್​ ದಾಖಲಿಸಿಕೊಂಡು ಹುಡುಕಾಟ ನಡೆಸಿದರು. ಈಗ ಪೊಲೀಸರಿಗೆ ಬಾಲಕಿ ಸಿಕ್ಕಿದ್ದಾಳೆ.

ಮತ್ತೊಂದು ಪ್ರಕರಣ ಬೆಳಕಿಗೆ

ಈ ಹಿಂದೆಯೇ ಸ್ವಾಮಿ ಪೂರ್ಣಾನಂದ ವಿರುದ್ಧ ಮತ್ತೋರ್ವ ಅಪ್ರಾಪ್ತ ಬಾಲಕಿ ಅತ್ಯಾಚಾರದ ಆರೋಪ ಮಾಡಿದ್ದಳು. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಸ್ವಾಮಿ ಪೂರ್ಣಾನಂದ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್​ ದಾಖಲಾಗಿದೆ. ಈತನ ಆಶ್ರಮದ 9.5 ಎಕರೆ ಭೂಮಿಯೂ ವಿವಾದದಲ್ಲಿದೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ.. ಆರೋಪಿ ಸ್ವಾಮಿ ಪೂರ್ಣಾನಂದ ಅರೆಸ್ಟ್​!

https://newsfirstlive.com/wp-content/uploads/2023/06/Seer-Pornananda.jpg

Load More