Advertisment

ಕಷ್ಟಗಳಿಗೆ ಮಿಡಿಯುವ ಹೃದಯ ಇವರದ್ದು; Jr NTR, ಮಹೇಶ್ ಬಾಬು, ಪವನ್ ಕಲ್ಯಾಣ್ ಕೋಟಿ ಕೋಟಿ ಹಣ ಕೊಟ್ರು

author-image
Ganesh
Updated On
ಕಷ್ಟಗಳಿಗೆ ಮಿಡಿಯುವ ಹೃದಯ ಇವರದ್ದು; Jr NTR, ಮಹೇಶ್ ಬಾಬು, ಪವನ್ ಕಲ್ಯಾಣ್ ಕೋಟಿ ಕೋಟಿ ಹಣ ಕೊಟ್ರು
Advertisment
  • ಪೆಟ್ಟಿಗೆಯಲ್ಲಿ ಪುಟ್ಟ ಕಂದಮ್ಮನನ್ನ ಹೊತ್ತೊಯ್ದು ರಕ್ಷಣೆ
  • ರೈಲ್ವೆ ಅಧಿಕಾರಿಗಳ ದಾಖಲೆ.. ರೈಲು ಹಳಿಗಳ ಮರುಸ್ಥಾಪನೆ
  • ಪ್ರವಾಹದಲ್ಲಿ ನಾಪತ್ತೆ.. ಬದುಕಿ ಬಂದ ಮಗ.. ಒಂದಾದ ಕುಟುಂಬ

ರಣಭೀಕರ ಮಳೆಗೆ ತೆಲುಗು ರಾಜ್ಯಗಳು ತತ್ತರಿಸಿವೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಒಂದೊಂದು ದೃಶ್ಯಗಳು ಕರುಳನ್ನ ಹಿಂಡುತ್ತಿವೆ. ರಸ್ತೆಗಳೆಲ್ಲ ಹಳ್ಳಗಳಂತಾಗಿ ಜನರ ಆಪೋಷನ ತೆಗೆದುಕೊಳ್ಳುತ್ತಿವೆ. ಮಳೆಗೆ ಜನರ ಕಣ್ಣೀರು ಪೈಪೋಟಿ ಕೊಡ್ತಿದೆ.

Advertisment

ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತ, 82 ಜನರ ರಕ್ಷಣೆ
ವಿಜಯವಾಡದ ಸಿಂಗ್ ನಗರದಲ್ಲಿ ಪ್ರವಾಹ ಅಪ್ಪಳಿಸಿದೆ. ಪುಟ್ಟ ಕಂದಮ್ಮನನ್ನ ಪೆಟ್ಟಿಗೆಯಲ್ಲಿ ಹೊತ್ತ ಸಂತ್ರಸ್ತರು ಸಾಗಿಸಿರುವ ದೃಶ್ಯವೊಂದು ಎಲ್ಲರ ಕರಳು ಹಿಂಡುವಂತೆ ಮಾಡಿದೆ. ಇಂತಿಕನ್ನೆ ರೈಲ್ವೆ ನಿಲ್ದಾಣದ ಬಳಿಯ ರೈಲು ಹಳಿಗಳ ಮರುಸ್ಥಾಪನೆ ಪೂರ್ಣಗೊಂಡಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ದಾಖಲೆ ಸೃಷ್ಟಿಸಿ 36 ಗಂಟೆಯಲ್ಲಿ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿದ್ದಾರೆ. ಸಿಂಗ್ ನಗರದಲ್ಲಿ ಪ್ರವಾಹದಲ್ಲಿ ಕಳೆದುಹೋದ ಎರಡು ದಿನಗಳ ನಂತರ ಮಗ ಮತ್ತೆ ಬದುಕಿ ಬಂದಿದ್ದಾನೆ. ಬದುಕಿ ಬಂದ ಮಗನನ್ನ ಕಂಡು ತಂದೆ ಭಾವುಕರಾಗಿ ಕಣ್ಣೀರಿದ್ದಾರೆ.

ಇದನ್ನೂ ಓದಿ:ದರ್ಶನ್ ಕೇಸ್​ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

publive-image

ಪ್ರವಾಹದಿಂದಾಗಿ ನೂಜಿವೀಡು ಸಮೀಪದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದ್ದು, ಎಂಟು ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ 82 ಮಂದಿಯನ್ನ ಉಳಿಸಲಾಗಿದೆ. ವಿಜಯವಾಡ ಪ್ರವಾಹದಲ್ಲಿ ಜನರು ಪ್ರಾಣಿಗಳು ಮಾತ್ರವಲ್ಲ 300ಕ್ಕೂ ಹೆಚ್ಚು ಕಾರುಗಳು ಮುಳುಗಿ ಹೋಗಿವೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಪ್ರವಾಹಕ್ಕೆ ತುತ್ತಾಗಿದ್ದು, ನೀರಿನ ಪ್ರಮಾಣ ಇಳಿಕೆಯಾಗಿದೆ.. ಸದ್ಯ ಪರಿಸ್ಥಿತಿ ಹೇಗಿದೆ ಅಂದ್ರೆ ಕೆಸರು ಗದ್ದೆ ಯಾವುದು.. ಜನ ವಾಸವಿರೋ ಜಾಗ ಯಾವುದು ಅನ್ನೋ ಸ್ಥಿತಿ ಸೃಷ್ಟಿಯಾಗಿದೆ.

Advertisment

ಆಂಧ್ರಪ್ರದೇಶ, ತೆಲಂಗಾಣ ಜನರ ನೆರವಿಗೆ ನಿಂತ ಸೆಲಬ್ರಿಟಿಗಳು
ತೆಲುಗು ರಾಜ್ಯಗಳ ಪ್ರವಾಹ ಸಂತ್ರಸ್ತರಿಗೆ ಜೂನಿಯರ್ ಎನ್​ಟಿಆರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಎಪಿ ಮತ್ತು ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತೆಲಂಗಾಣ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಲಚಿ ರೆಡ್ಡಿ 100 ಕೋಟಿ ರೂಪಾಯಿ ದೇಣಿಗೆ. ಡಿಜೆ ತೆಳ್ಳು ಖ್ಯಾತಿಯ ಸಿದ್ದು ಜೊನ್ನಲಗಡ್ಡ 30 ಲಕ್ಷ ರೂಪಾಯಿ ಆರ್ಥಿಕ ನೆರವು ಕೊಟ್ಟಿದ್ದಾರೆ.. ನಟ ಬಾಲಕೃಷ್ಣ ಆಂಧ್ರಪ್ರದೇಶಕ್ಕೆ 50 ಲಕ್ಷ.. ತೆಲಂಗಾಣಕ್ಕೆ 50 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

publive-image

ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಂಧ್ರಪ್ರದೇಶಕ್ಕೆ ಸುಮಾರು 1 ಕೋಟಿ ದೇಣಿಗೆ ನೀಡಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಎರಡು ತೆಲುಗು ರಾಜ್ಯಗಳಿಗೆ ತಲಾ 50 ಲಕ್ಷದಂತೆ 1 ಕೋಟಿ ರೂಪಾಯಿಯನ್ನ ಘೋಷಿಸಿದ್ದಾರೆ. ಆಂಧ್ರದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಒಟ್ಟಾರೆ, ಹೀಗೆ ಹರಿದು ಬಂದ ದೇಣಿಗೆ ಜನರ ಜೊತೆಗೆ ನಾವಿದ್ದೀವಿ ಅನ್ನೋ ಸೆಲೆಬ್ರಿಟಿಗಳ ಮನೋಭಾವ ತೋರಿಸುತ್ತಿದೆ.

ಇದನ್ನೂ ಓದಿ:200 ವರ್ಷಗಳಲ್ಲಿಯೇ ದಾಖಲೆಯ ಮಳೆ.. 19 ಮಂದಿ ಸಾವು, ಶಾಲೆಗಳಿಗೆ ರಜೆ ಘೋಷಣೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment