/newsfirstlive-kannada/media/post_attachments/wp-content/uploads/2025/07/CHANDRABAABU-NAIDU.jpg)
ಕೃತಕ ಬುದ್ದಿಮತ್ತೆಯು (AI) ಊಹೆಗೂ ಮೀರಿ ತನ್ನ ಕ್ಷೇತ್ರಗಳನ್ನು ವಿಸ್ತರಿಸಿಕೊಳ್ತಿದೆ. ಇದೀಗ ಆಂಧ್ರ ಪ್ರದೇಶ ಸರ್ಕಾರ AI ಕುರಿತು ಮಹತ್ವದ ಮಾಹಿತಿಯೊಂದನ್ನು ದೇಶಕ್ಕೆ ನೀಡಿದೆ.
ನಾನಾ ರೋಗ ರುಜಿನಗಳಿಗೆ ಕಾರಣವಾಗುವ ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು AI ಬಳಸಲು ಆಂಧ್ರಪ್ರದೇಶ ಮುಂದಾಗಿದೆ. ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ಸೊಳ್ಳೆಗಳ ಪ್ರಭೇದ, ಲಿಂಗ ಮತ್ತು ಸಾಂದ್ರತೆಯನ್ನು ಪತ್ತೆಹಚ್ಚಲು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಎಐ ಚಾಲಿತ ಸೆನ್ಸಾರ್ ಮತ್ತು ಡ್ರೋನ್ಗಳನ್ನು ನಿಯೋಜಿಸಲಿದೆ. ಇವುಗಳನ್ನು 6 ಮಹಾ ನಗರ ಪಾಲಿಕೆಗಳ 66 ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO
/newsfirstlive-kannada/media/post_attachments/wp-content/uploads/2025/07/Mosquito.jpg)
ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳ ನೈಜ ಸಮಯದ ಮೇಲ್ವಿಚಾರಣೆಯನ್ನು ನಡೆಸಲಾಗುವುದು. ಇದರಿಂದ ರಾಸಾಯನಿಕವನ್ನು ಸುಮ್ಮನೆ ಎಲ್ಲೆಡೆ ಸಿಂಪಡಿಸುವುದು ತಪ್ಪುತ್ತದೆ. ಅಂತೆಯೇ ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸುವುದರಿಂದ ಸಮಯ, ರಾಸಾಯನಿಕ ಪ್ರಮಾಣ, ವೆಚ್ಚಗಳು ಇಳಿಕೆಯಾಗುತ್ತವೆ ಅನ್ನೋ ಲೆಕ್ಕಾಚಾರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us