ಪವನ್​ ಕಲ್ಯಾಣ್​ಗಾಗಿ 487 km ಸೈಕಲ್​ನಲ್ಲಿ ಮಹಿಳೆ ಪ್ರಯಾಣ.. ಇದಕ್ಕೆ ಡಿಸಿಎಂ ಹೇಳಿದ್ದು ಏನು?

author-image
Bheemappa
Updated On
ಇನ್​ಸ್ಟಾಗ್ರಾಮ್​ನಲ್ಲಿ ಪವನ್ ಕಲ್ಯಾಣ್ ಸುನಾಮಿ.. ಖಾತೆ ಓಪನ್ ಮಾಡಿ ಗಂಟೆ ಕಳೆಯೋದ್ರಳ್ಗೆ ಲಕ್ಷ ಲಕ್ಷ ಫಾಲೋವರ್ಸ್​..!
Advertisment
  • ಪವನ್ ಕಲ್ಯಾಣ್​ರನ್ನ ನೋಡಲು ಸೈಕಲ್​ನಲ್ಲಿ ಬರುತ್ತಿದ್ದಾರಾ?
  • ಜನಸೇನಾ ಪಕ್ಷದ ಮುಖ್ಯ ಕಚೇರಿಗೆ ಭೇಟಿ ನೀಡಲಿರೋ ಮಹಿಳೆ
  • ಯಾವ ಜಿಲ್ಲೆಯಲ್ಲಿ ಜನಸೇನಾ ಪಕ್ಷದ ಮುಖ್ಯ ಕಚೇರಿ ಇದೆ..?

ಹೈದರಾಬಾದ್: ನಟ ಕಮ್ ರಾಜಕಾರಣಿ ಪ್ರಸ್ತುತ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲು ಮಹಿಳೆಯೊಬ್ಬರು ನೂರಾರು ಕಿಲೋ ಮೀಟರ್​ನಿಂದ ಸೈಕಲ್​ ಮೂಲಕ ಪ್ರಯಾಣಿಸುತ್ತಿದ್ದಾರೆ.

publive-image

ಇದನ್ನೂ ಓದಿ:ಹೆಂಡತಿ ಮುಂದೆ ‘ಅಂಕಲ್’ ಅಂತ ಕರೆದಿದ್ದಕ್ಕೆ ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

ರಾಜೇಶ್ವರಿ ಎನ್ನುವ ಮಹಿಳೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿಯಿಂದ ಡಿಸಿಎಂ ಪವನ್​ ಕಲ್ಯಾಣರನ್ನ ಭೇಟಿ ಮಾಡಲು ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಮುಖ್ಯ ಕಚೇರಿಗೆ ಮಹಿಳೆ ಭೇಟಿ ನೀಡಲಿದ್ದಾರೆ. ಆದೋನಿಯಿಂದ ಮಂಗಳಗಿರಿಗೆ ಒಟ್ಟು 487 ಕಿಲೋ ಮೀಟರ್ ಇದ್ದು ಸೈಕಲ್​ ಮೂಲಕವೇ ಮಹಿಳೆ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ರಾಜೇಶ್ವರಿ ಅವರು ರಸ್ತೆಯಲ್ಲಿ ಸೈಕಲ್​ನಲ್ಲಿ ಹೋಗುತ್ತಿರುವಾಗ ದಾರಿ ಮಧ್ಯೆ ಜನಸೇನಾ ಪಕ್ಷದ ಮುಖಂಡರು ಅವರನ್ನು ಸ್ವಾಗತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಿಡಿಯೋಯೊಂದು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಅನ್ನು ಡಿಸಿಎಂ ಪವನ್ ಕಲ್ಯಾಣ್ ಅವರು ನೋಡಿದ್ದು ಸೈಕಲ್​ನಲ್ಲಿ ನಮ್ಮ ಪಕ್ಷದ ಮುಖ್ಯ ಕಚೇರಿಗೆ ಬರುವ ಮಹಿಳೆಯನ್ನು ಭವ್ಯವಾದ ಸ್ವಾಗತ ಕೋರಿ ಎಂದು ಮುಖಂಡರಿಗೆ, ಸದಸ್ಯರಿಗೆ ತಿಳಿಸಿದ್ದಾರೆ. ಈ ಸಂಬಂಧ ಪವನ್​ ಕಲ್ಯಾಣ್ ಅವರು ತಮ್ಮ ಅಧಿಕೃತ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.


">November 3, 2024

ಪವನ್ ಕಲ್ಯಾಣ್ ಕಳೆದ ಜೂನ್ 12 ರಂದು ಆಂಧ್ರಪ್ರದೇಶದ 10ನೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆಂಧ್ರಪ್ರದೇಶದ ಎಲೆಕ್ಷನ್​ನಲ್ಲಿ ಜನಸೇನಾ ಪಕ್ಷ 21 ಸ್ಥಾನಗಳನ್ನು ಗೆದ್ದು ಎನ್.ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿದೆ. ಟಿಡಿಪಿ 135 ಸ್ಥಾನಗಳಲ್ಲಿ ವಿಜಯವಾಗಿತ್ತು. ಈ ಎರಡು ಪಕ್ಷಗಳು 175 ಸ್ಥಾನಗಳಲ್ಲಿ ಒಟ್ಟು 156 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment