ದೈತ್ಯ ರಸೆಲ್ ದೊಡ್ಡ ಯಡವಟ್ಟು.. ವಿಶ್ವಕಪ್​ನಿಂದ ಹೊರಬಿದ್ದ ವೆಸ್ಟ್​ ವಿಂಡೀಸ್​!

author-image
Bheemappa
Updated On
ದೈತ್ಯ ರಸೆಲ್ ದೊಡ್ಡ ಯಡವಟ್ಟು.. ವಿಶ್ವಕಪ್​ನಿಂದ ಹೊರಬಿದ್ದ ವೆಸ್ಟ್​ ವಿಂಡೀಸ್​!
Advertisment
  • ಕಗಿಸೊ ರಬಾಡ ಮೊದಲ ಎಸೆತದಲ್ಲಿ ರನ್​ಗೆ ಓಡುವುದು ಬೇಕಿತ್ತಾ?
  • ಒಂದು ರನ್​ ಕದಿಯಲು ದೊಡ್ಡ ತಪ್ಪು ಮಾಡಿದ ಆಂಡ್ರೆ ರಸೆಲ್
  • ಪಂದ್ಯ ಗೆದ್ದು ಐಡೆಮ್ ಮಾರ್ಕ್ರಾಮ್ ತಂಡ ಸೆಮಿಫೈನಲ್​ಗೆ ಎಂಟ್ರಿ

ಟಿ20 ವಿಶ್ವಕಪ್​ನಲ್ಲಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರೋವ್‌ಮನ್ ಪೊವೆಲ್ ನೇತೃತ್ವದ ವೆಸ್ಟ್ ಇಂಡೀಸ್ 3 ವಿಕೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ಆಂಡ್ರೆ ರಸೆಲ್ ಮಾಡಿದ ಆ ಒಂದೇ ಒಂದು ತಪ್ಪಿನಿಂದ ವೆಸ್ಟ್​ ಇಂಡೀಸ್​ ಟೀಮ್ ಬಹುದೊಡ್ಡ ಆಘಾತಕ್ಕೆ ಒಳಗಾಗಿದೆ.

ಆಂಡ್ರೆ ರಸೆಲ್ ರನ್ ಔಟ್ ಆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ದಕ್ಷಿಣ ಆಫ್ರಿಕಾ ಪರ 18ನೇ ಓವರ್ ಮಾಡಲು ಬಂದ ಕಗಿಸೊ ರಬಾಡ ಅವರು ಮೊದಲ ಬಾಲ್ ಅನ್ನು ಹಾಕಿದರು. ಸ್ಟ್ರೈಕ್​ನಲ್ಲಿದ್ದ ವಿಂಡೀಸ್​ನ ಅಕಿಲ್ ಹೌಸೆನ್ ಬಾಲ್​ ಅನ್ನು ಶಾಟ್ ಮಾಡಿದರು. ಬಾಲ್ ಹೋಗಿ ನೇರ ಎನ್ರಿಚ್ ನಾರ್ಕಿಯಾ ಕೈಗೆ ಸಿಕ್ಕಿತು. ಈ ವೇಳೆ 1 ರನ್​ಗಾಗಿ ಆಂಡ್ರೆ ರಸೆಲ್ ಹಾಗೂ ಅಕಿಲ್ ಹೌಸೆನ್ ಓಡಿದರು. ಆದರೆ ಎನ್ರಿಚ್ ಎಸೆದ ಬಾಲ್ ನೇರ ವಿಕೆಟ್​​ಗೆ ಬಿದ್ದಿದ್ದರಿಂದ ಆಂಡ್ರೆ ರಸೆಲ್ ಅವರು ಸ್ವಲ್ಪದರಲ್ಲೇ ಔಟ್​ ಆದರು. ಇದೇ ವೆಸ್ಟ್​​ ಇಂಡೀಸ್​​ ಟೀಮ್​ಗೆ ದೊಡ್ಡ ಪೆಟ್ಟು ಕೊಟ್ಟಿತು. ಈ ರನ್​ ತೆಗೆದುಕೊಳ್ಳುವುದು ರಿಸ್ಕ್​ ಎಂದು ಗೊತ್ತಿದ್ದರು ರಸೆಲ್ ಮಾಡಿದ್ದು ಬಹುದೊಡ್ಡ ನಷ್ಟ ಉಂಟು ಮಾಡಿತು. ಒಂದು ವೇಳೆ ಆಂಡ್ರೆ ರಸೆಲ್ ಕೊನೆ ಓವರ್​ವರೆಗೂ ಇದ್ದಿದ್ರೆ ವೆಸ್ಟ್ ಇಂಡೀಸ್ 150 ರನ್‌ಗಳವರೆಗೆ ತಲುಪಬಹುದಿತ್ತು. ಹೀಗೆ ಆಗಿದ್ದರೇ ವಿಂಡೀಸ್ ಗೆಲ್ಲುತ್ತಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ ಬಳಿಕ ಟೀಂ ಇಂಡಿಯಾಗೆ ಹೊಸ ಕ್ಯಾಪ್ಟನ್.. ಪಾಂಡ್ಯ, ಸೂರ್ಯ, ಅಯ್ಯರ್​​ಗೆ ಬಿಗ್ ಶಾಕ್..!

View this post on Instagram

A post shared by ICC (@icc)

ಆಂಟಿಗುವಾದ ನಾರ್ತ್ ಸೌಂಡ್​ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ವೆಸ್ಟ್​ ಇಂಡೀಸ್ ಮೊದಲ ಬ್ಯಾಟಿಂಗ್ ಮಾಡಿ ಸೋಲು ಕಂಡಿದೆ. ಈ ಸೋಲಿನ ನಂತರ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಪ್ರವೇಶಿಸಿದೆ. ರಸೆಲ್ ಮಾಡಿದ ತಪ್ಪಿನಿಂದ ವಿಂಡೀಸ್​ ಟೀಮ್ ವಿಶ್ವಕಪ್‌ನಿಂದ ಹೊರಬಿದ್ದಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment