ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ
ನೆಕ್ರೋ ಟ್ರೋಜನ್ ವೈರಸ್ಗಳ ಹಾವಳಿಯಿಂದ ಚಿಂತೆ
ವಾಟ್ಸ್ಆ್ಯಪ್ ಮಾತ್ರವಲ್ಲ ಈ ಆ್ಯಪ್ಗಳಲ್ಲಿಯೂ ಇದೆಯಾ?
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್ಲೋಡ್ ಮಾಡುತ್ತಾರೆ. ತಮಗೆ ಬೇಕೆನಿಸಿದ ಮತ್ತು ವಿವಿಧ ಆ್ಯಪ್ಗಳನ್ನು ಸ್ಮಾರ್ಟ್ಫೋನ್ಗೆ ಡೌನ್ಲೋಡ್ ಮಾಡುತ್ತಾರೆ. ಆದರೀಗ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಕೆಯೊಂದು ಬಂದಿದ್ದು. ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಹಲವು ಅಪ್ಲಿಕೇಶನ್ಗಳಲ್ಲಿ ನೆಕ್ರೊ ಟ್ರೋಜನ್ ವೈರಸ್ ಇರುವುದು ಪತ್ತೆಯಾಗಿದೆ. ಇದು ಸ್ಮಾರ್ಟ್ಫೋನನ್ನು ಹ್ಯಾಕ್ ಮಾಡುವ ಸಂಭವವಿದ್ದು, ಕೂಡಲೇ ಕೆಲವು ಆ್ಯಪ್ಗಳನ್ನು ಡಿಲೀಟ್ ಮಾಡಿ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ.
ನೆಕ್ರೋ ಟ್ರೋಜನ್ ವೈರಸ್ಗಳು ಸ್ಮಾರ್ಟ್ಫೋನ್ನಲ್ಲಿರುವ ಡೇಟಾ ಕದಿಯಲು ಮತ್ತು ಅದನ್ನು ಹ್ಯಾಕರ್ಗಳಿಗೆ ರವಾನಿಸುವ ಸಾಧ್ಯತೆಗಳಿವೆ. ಡೇಟಾ ಕಳ್ಳತನದ ಜೊತೆಗೆ ಮಾಲ್ವೇರ್ಗಳನ್ನು ರಹಸ್ಯವಾಗಿರಿಸುವ ಸಾಧ್ಯತೆಯು ಹೆಚ್ಚಿದೆ. ಸದ್ಯ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಸ್ಫೋಟಿಫೈ (Spotify) ಮತ್ತು ವಾಟ್ಸ್ಆ್ಯಪ್ನಲ್ಲಿ (Whatsapp) ಈ ವೈರಸ್ ಇರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಿವಿಯಲ್ಲಿದ್ದಾಗಲೇ ಇಯರ್ ಬಡ್ ಸ್ಫೋಟ.. ಶ್ರವಣ ನಷ್ಟ ಅನುಭವಿಸುತ್ತಿರೋ ಯುವತಿ
ಮೈನ್ಕ್ರಾಫ್ಟ್ನಂತರ ಗೇಮಿಂಗ್ ಅಪ್ಲಿಕೇಶನ್ನಲ್ಲೂ ಟ್ರೋಜನ್ ವೈರಸ್ ಇರಬಹುದು ಎಂಬ ಆತಂಕವಿದೆ. ಸದ್ಯ ಈ ವೈರಸ್ ಇರುವ ಅಪ್ಲಿಕೇಶನನ್ನು ಅನ್ಇನ್ಸ್ಟಾಲ್ ಮಾಡಲು ಹೇಳುತ್ತಿದೆ.
ನೆಕ್ರೋ ಟ್ರೋಜನ್ ವೈರಸ್ 2019ರಲ್ಲಿ ಕಾಣಿಸಿಕೊಂಡಿತು. ಕ್ಯಾಮ್ ಸ್ಕ್ಯಾನರ್ ಎಂಬ ಪಿಡಿಎಫ್ ರಚನೆಯ ಅಪ್ಲಿಕೇಶನ್ನಲ್ಲಿ ಇದು ಪತ್ತೆಯಾಯ್ತು. ಗೂಗಲ್ ಪ್ಲೇ ಸ್ಟೋರ್ನಲ್ಲಿ 100 ಮಿಲಿಯನ್ ಡೌನ್ಲೋಡ್ಹೊಂದಿತ್ತು. ಇದನ್ನು ಗಮನಿಸಿ ಭದ್ರತಾ ಸಮಸ್ಯೆಯನ್ನು ಸರಿಪಡಿಲಾಯಿತಾದರು ಮತ್ತೆರಡು ಅಪ್ಲಿಕೇಶನ್ನ್ಗೆ ಇದು ರವಾನೆಯಾಗಿತ್ತು. ಬಳಿಕ ರವಾನೆಯಾಗಿದ್ದ Wuta Camera ಮತ್ತು Max Browser ಈವೆರಡು ಆ್ಯಪ್ ಅನ್ನು ಪ್ಲೇ ಸ್ಟೋರ್ನಿಂದ ಕಿತ್ತೆಸೆಯಿತು.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಶಾಕ್! ಚಿನ್ನದ ಬೆಲೆಯಲ್ಲಿ 0.20ರಷ್ಟು ಏರಿಕೆ
ಸದ್ಯ ಮತ್ತೆ ನೆಕ್ರೋ ಟ್ರೋಜನ್ ವೈರಸ್ ಕಾಣಿಸಿಕೊಂಡಿದೆ. Spotify, WhatsApp, Minecraft, Stumble Guys, Car Parking Multiplayer, ಮತ್ತು Melon Sandbox ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳ ನೆಕ್ರೋ ಟ್ರೋಜನ್ ವೈರಸ್ ಅನ್ನು ಗುರುತಿಸಲಾಗಿದೆ. ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ