/newsfirstlive-kannada/media/post_attachments/wp-content/uploads/2025/07/Andy-Byron.jpg)
ಅಮೆರಿಕಾದ ಅಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ (Astronomer CEO Andy Byron) ತಮ್ಮ ಕಂಪನಿಯ ಮಹಿಳಾ ಹೆಚ್‌ಆರ್ (HR) ಹಾಗೂ ಚೀಫ್ ಪಬ್ಲಿಕ್ ಆಫೀಸರ್ ಕ್ರಿಸ್ಟೆನ್ ಕಬೋಟ್​ರನ್ನು (Kristin Cabot) ತಬ್ಬಿಕೊಂಡಿದ್ದ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಕಂಪನಿಯ ಮಹಿಳಾ HR ಕ್ರಿಸ್ಟೆನ್ ಕಬೋಟ್​ರನ್ನು ಆ್ಯಂಡಿ ಬೈರೋನ್ ತಬ್ಬಿಕೊಂಡು ಕ್ಯಾಮರಾ ಕಣ್ಣಿಗೆ ಸಾರ್ವಜನಿಕವಾಗಿ ಸಿಕ್ಕಿಬಿದ್ದಿದ್ದಾರೆ. ಅಮೆರಿಕಾದ ಬೋಸ್ಟನ್​​ನಲ್ಲಿ ನಡೆಯುತ್ತಿದ್ದ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್ ವೇಳೆ ಸಿಇಓ ಆ್ಯಂಡಿ ಬೈರೋನ್ ತಮ್ಮ ಕಂಪನಿಯ ಮಹಿಳಾ ಹೆಚ್‌ಆರ್ ಕ್ರಿಸ್ಟೆನ್ ಕಬೋಟ್​ರನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು.
ಮುಂದೆ ಏನಾಯ್ತು..?
ಆ್ಯಂಡಿ ಬೈರೋನ್ ಅವರು ತಮ್ಮ ಕಂಪನಿಯ ಸಹೋದ್ಯೋಗಿ ಕ್ರಿಸ್ಟೆನ್ ಕಬೋಟ್‌ರ ಸೊಂಟವನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು. ಕ್ರಿಸ್ಟೆನ್ ಕಬೋಟ್ ಕೂಡ ಆ್ಯಂಡಿ ಬೈರೋನ್ ಅವರ ಕೈಯನ್ನು ಹಿಡಿದು ನಗುತ್ತಿದ್ದರು. ಎಲ್ಲ ಸಾಮಾನ್ಯ ದಂಪತಿಗಳಂತೆ ಇವರಿಬ್ಬರೂ ನಿಂತಿದ್ದರು. ಹೀಗಾಗಿ ಕನ್ಸರ್ಟ್​ನ ಕಿಸ್ ಕ್ಯಾಮ್ ಇವರತ್ತ ಪೋಕಸ್ ಮಾಡಿದೆ. ಇವರಿಬ್ಬರು ತಬ್ಬಿಕೊಂಡಿದ್ದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಕನ್ಸರ್ಟ್​ನ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡಲಾಗಿದೆ. ಹೀಗೆ ತಾವು ತಬ್ಬಿಕೊಂಡಿರೋದು ದೊಡ್ಡ ಪರದೆಯಲ್ಲಿ ಪ್ರದರ್ಶನವಾಗುತ್ತಿರೋದು ಅರಿವಿಗೆ ಬರುತ್ತಿದ್ದಂತೆಯೇ ಇಬ್ಬರಿಗೂ ಶಾಕ್ ಆಗಿದೆ. ತಕ್ಷಣವೆ ಕೆಳಗೆ ಬಗ್ಗಿಕೊಂಡು ಕ್ಯಾಮರಾ ಕಣ್ಣಿನಿಂದ ಸಿಇಓ ಆ್ಯಂಡಿ ಬೈರೋನ್ ಎಸ್ಕೇಪ್ ಆಗುವ ಯತ್ನ ಮಾಡಿದ್ದಾರೆ. ಕ್ರಿಸ್ಟೆನ್ ಕಬೋಟ್ ಕೂಡ ಮುಖ ತಿರುಗಿಸಿಕೊಂಡು ಕ್ಯಾಮರಾಗೆ ಬೆನ್ನು ತೋರಿಸಿದ್ದಾರೆ.
ಇವರಿಬ್ಬರ ಮಧ್ಯೆ ಅಫೇರ್ ಇರಬಹುದು ಇಲ್ಲವೇ ಇವರಿಬ್ಬರಿಗೂ ನಾಚಿಕೆ ಇರಬಹುದು ಎಂದು ಮೈಕ್​ನಲ್ಲೇ ಕೋಲ್ಡ್ ಪ್ಲೇ ಮ್ಯೂಸಿಕ್ ನಡೆಸುತ್ತಿದ್ದ ಕ್ರಿಸ್ ಮಾರ್ಟಿನ್ ಜೋರಾಗಿ ಹೇಳಿದ್ದಾರೆ. ಕಂಪನಿಯ ಮಹಿಳಾ ಹೆಚ್.ಆರ್. ಲಿಂಕ್ಡ್ ಇನ್ ಪೋಸ್ಟ್ ಬಗ್ಗೆಯೂ ಈಗ ಚರ್ಚೆ ನಡೆಯುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆ್ಯಂಡಿ ಬೈರೋನ್ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಆಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ಪತ್ನಿ ಮೇಘನ್ ಕೆರಿಗನ್ ತನ್ನ ಸರ್ ನೇಮ್ ಫೇಸ್​ಬುಕ್​ನಿಂದ ತೆಗೆದು ಹಾಕಿದ್ದಾರೆ.
ಇದರಿಂದ ಆ್ಯಂಡಿ ಬೈರೋನ್ ಹಾಗೂ ಪತ್ನಿ ಮೇಘನ್ ಕೆರಿಗನ್ ಪರಸ್ಪರ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಶುರುವಾಗಿದೆ. ಒಂದು ಅಪ್ಪುಗೆ ಈಗ ಡಿವೋರ್ಸ್​ಗೆ ಕಾರಣವಾಗುತ್ತಿದೆ. ಆ್ಯಂಡಿ ಬೈರೋನ್ ಹಾಗೂ ಕ್ರಿಸ್ಟೆನ್ ಕಬೋಟ್ ಮೇಲೆ ಕ್ಯಾಮರಾ ಪೋಕಸ್ ಮಾಡದೇ ಇದ್ದಿದ್ದತೆ ಇವರ ಅಫೇರ್, ಹೊರ ಜಗತ್ತಿಗೂ ಗೊತ್ತಾಗುತ್ತಿರಲಿಲ್ಲ. ಆ್ಯಂಡಿ ಬೈರೋನ್ ದಾಂಪತ್ಯದಲ್ಲಿ ಡಿವೋರ್ಸ್ ಚರ್ಚೆಯೂ ಆಗುತ್ತಿರಲಿಲ್ಲ.
ಇದನ್ನೂ ಓದಿ: ಪ್ರಭು ಚೌಹಾಣ್ ಬೀಗರ ಗಲಾಟೆಗೆ ಟ್ವಿಸ್ಟ್​; ಮಾಜಿ ಸಚಿವನ ಪುತ್ರನ ವಿರುದ್ಧ ಯುವತಿ ಗಂಭೀರ ಆರೋಪ..
ಈ ಕ್ರಿಸ್ಟೆನ್ ಕಬೋಟ್ ಯಾರು ಅಂತ ನೋಡಿದರೆ ಈಕೆ ಅಮೆರಿಕಾದ ಬೋಸ್ಟನ್​ನಲ್ಲಿ ಹುಟ್ಟಿದವರು. ಗ್ರೇಟಯಸ್ ಬರ್ಗ್ ಕಾಲೇಜಿನಲ್ಲಿ ಪೊಲಿಟಿಕಲ್ ಸೈನ್ಸ್​ನಲ್ಲಿ ಪದವಿ ಪಡೆದಿದ್ದಾರೆ. 2024ರ ನವಂಬರ್​ನಲ್ಲಿ ಟೆಕ್ ಕಂಪನಿಯಾದ ಅಸ್ಟ್ರೋನೋಮರ್ ಕಂಪನಿಯನ್ನು ಸೇರಿದ್ದರು. 2000ನೇ ಇಸವಿಯಲ್ಲಿ ಸ್ಕ್ರೀನ್ ಹೌಸ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಅಕೌಂಟ್ ಮ್ಯಾನೇಜರ್ ಆಗಿ ನೇಮಕವಾಗುವ ಮೂಲಕ ಕ್ರಿಸ್ಟೆನ್ ಕಬೋಟ್ ತಮ್ಮ ಕೆರಿಯರ್ ಆರಂಭಿಸಿದ್ದರು. 2004 ರಲ್ಲಿ ಡಿಜಿಟಸ್ಎಲ್‌ಬಿಐ ಕಂಪನಿ ಸೇರಿದ್ದರು. ಈ ಕಂಪನಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಮತ್ತು ನೇಮಕಾತಿ ಮುಖ್ಯಸ್ಥೆಯಾಗಿದ್ದರು. ಈಗ ಆ್ಯಂಡಿ ಬೈರೋನ್ ದಾಂಪತ್ಯದಲ್ಲಿ ಡಿವೋರ್ಸ್​ಗೂ ಈ ಕ್ರಿಸ್ಟೆನ್ ಕಬೋಟ್ ಕಾರಣವಾಗುತ್ತಿದ್ದಾರೆ.
ಇದನ್ನೂ ಓದಿ: ಹುಟ್ಟಿದಾಗ ಕಡು ಬಡವ.. ಮೂರು ತಿಂಗಳಲ್ಲಿ 40 ಕೋಟಿ ವ್ಯವಹಾರ.. ದಾಳಿ ಮಾಡಿದ ಅಧಿಕಾರಿಗಳೇ ದಂಗಾಗಿಬಿಟ್ರು..!
Coldplay's Chris Martin accidentally exposes astronomer CEO Andy Byron having an affair with his HR chief Kristin Cabot. pic.twitter.com/GMa2g0EiK3
— Pop Crave (@PopCrave) July 17, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ