Advertisment

ನಡುರೋಡಲ್ಲಿ ಹರಿದ ನೆತ್ತರು.. ಆನೇಕಲ್ ಪುರಸಭೆ ಸದಸ್ಯ ಸ್ಕ್ರಾಪ್ ರವಿ ಬರ್ಬರ ಹತ್ಯೆ; ಕಾರಣವೇನು?

author-image
admin
Updated On
ನಡುರೋಡಲ್ಲಿ ಹರಿದ ನೆತ್ತರು.. ಆನೇಕಲ್ ಪುರಸಭೆ ಸದಸ್ಯ ಸ್ಕ್ರಾಪ್ ರವಿ ಬರ್ಬರ ಹತ್ಯೆ; ಕಾರಣವೇನು?
Advertisment
  • ಪುರಸಭೆ ಹಾಲಿ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
  • ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ಮರ್ಡರ್
  • ಪೊಲೀಸರ ಮುಂದೆ ವಾರ್ನಿಂಗ್ ಕೊಟ್ಟಿದ್ದ ಮತ್ತೊಂದು ಗ್ಯಾಂಗ್‌!

ಬೆಂಗಳೂರು: ಪುರಸಭೆ ಹಾಲಿ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಭಯಾನಕ ಘಟನೆ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ. ರವಿ ಅಲಿಯಾಸ್ ಸ್ಕ್ರಾಪ್ ರವಿ (34) ಕೊಲೆಯಾದ ವ್ಯಕ್ತಿ.

Advertisment

ಇದನ್ನೂ ಓದಿ: ಪ್ರೀತಿ, ಪ್ರೇಮ ಮದುವೆ.. ಶಿವಮೊಗ್ಗದಲ್ಲಿ ಬೆಚ್ಚಿ ಬೀಳಿಸಿದ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆಗಿದ್ದೇನು? 

ಸ್ಕ್ರಾಪ್ ರವಿ ಆನೇಕಲ್ ಪುರಸಭೆಯ 22 ವಾರ್ಡ್ ಹಾಲಿ ಸದಸ್ಯನಾಗಿದ್ದ. ಬಹದ್ದೂರ್ ಪುರದ 22ನೇ ವಾರ್ಡ್ ಪುರಸಭೆ ಸದಸ್ಯನಾಗಿದ್ದ ರವಿಯನ್ನು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಂತಕರು ರವಿಯನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಮಚ್ಚು ಬೀಸಿ ಕೊಚ್ಚಿ ಕೊಲೆಗೈದಿದ್ದಾರೆ. ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

publive-image

ಪೊಲೀಸರ ಎದುರಲ್ಲೇ ನಡೆದಿತ್ತಾ ವಾರ್ನಿಂಗ್‌!
ಒಂದು ವಾರದ ಹಿಂದಷ್ಟೇ ಮನೆ ಬಳಿ ನಡೆದಿದ್ದ ಗಲಾಟೆ ಆನೇಕಲ್‌ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಈ ವೇಳೆ ಬಾತು ಅಲಿಯಾಸ್‌ ರಮೇಶ್ ಎಂಬಾತ ಸ್ಕ್ರಾಪ್ ರವಿಯನ್ನು ಮುಗಿಸುವುದಾಗಿ ಪೊಲೀಸರ ಸಮ್ಮುಖದಲ್ಲೇ ವಾರ್ನಿಂಗ್ ನೀಡಿದ್ದರು.

Advertisment

ಇದನ್ನೂ ಓದಿ: ಕೆಜಿಎಫ್ ಚಾಪ್ಟರ್‌​ 3ಗೆ ಸ್ಟಾರ್ ನಟ ಅಜಿತ್ ಎಂಟ್ರಿ.. ಹೀರೋ ಯಾರು? ಯಶ್ ಕಥೆ ಏನು? 

ಪೊಲೀಸರ ಮುಂದೆ ವಾರ್ನಿಂಗ್ ಕೊಟ್ಟ ಒಂದೇ ವಾರಕ್ಕೆ ರವಿ ಅಲಿಯಾಸ್ ಸ್ಕ್ರಾಪ್ ರವಿಯ ಮರ್ಡರ್ ಆಗಿದೆ. ಸ್ಮಶಾನ ಜಾಗ ಒತ್ತುವರಿ ವಿಚಾರಕ್ಕೆ ರವಿಗೆ ನಾಗರಾಜ್ ಇತರರ ಜೊತೆ ಮನಸ್ತಾಪ ಇತ್ತು.
ಸ್ಮಶಾನ ಜಾಗಕ್ಕಾಗಿ ಮೃತ ರವಿ ಹೋರಾಟ ಮಾಡುತ್ತಿದ್ದ. ಇದೇ ವಿಚಾರಕ್ಕೆ ರಮೇಶ @ ಬಾತು ಅಂಡ್ ಗ್ಯಾಂಗ್‌ನಿಂದ ಕೊಲೆ ಮಾಡಲಾಗಿದೆ ಎಂದು ಮೃತ ರವಿ ಕುಟುಂಬದವರು ಆರೋಪ ಮಾಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ‌ ಕೊಲೆ ಬೆದರಿಕೆ ಹಾಕಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರ ವೈಫಲ್ಯದಿಂದ ರವಿ ಕೊಲೆಯಾಗಿದೆ ಎಂದು ಆನೇಕಲ್ ಪೊಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment