ತಂಗಿ ಮದುವೆ ಕಾರ್ಡ್ ಕೊಟ್ಟು ಬರ್ತಿದ್ದಾಗ ಕಾದು ಕೂತಿದ್ದ ರೌಡಿಗಳು.. ಮುಂದೆ ಏನಾಯ್ತು..?

author-image
Ganesh
Updated On
ತಂಗಿ ಮದುವೆ ಕಾರ್ಡ್ ಕೊಟ್ಟು ಬರ್ತಿದ್ದಾಗ ಕಾದು ಕೂತಿದ್ದ ರೌಡಿಗಳು.. ಮುಂದೆ ಏನಾಯ್ತು..?
Advertisment
  • ಕಗ್ಗತ್ತಲ ರಾತ್ರಿಯಲ್ಲಿ ಭಯಾನಕ ಗ್ಯಾಂಗ್​ವಾರ್
  • ಸಿನಿಮಾ ಸ್ಟೈಲ್​​ನಲ್ಲಿ ದಾಳಿ, ಬೆಚ್ಚಿಬಿದ್ದ ಜನ
  • ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ

ನಿನ್ನೆ ರಾತ್ರಿ ನಿದ್ದೆ ಮಂಪರಿನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಯನ್ನ ಇದೊಂದು ಗ್ಯಾಂಗ್​ ವಾರ್ ಸುದ್ದಿ ಬೆಚ್ಚಿ ಬೀಳಿಸಿದೆ.. ಸಿನಿಮಾ ಸ್ಟೈಲ್​ನಲ್ಲಿ ನಡೆದ ಈ ವಾರ್​ ಕಂಡು ಆ ಏರಿಯಾಗೇ ಏರಿಯಾನೇ ನಡುಗಿ ಹೋಗಿದೆ.

ಕಗ್ಗತ್ತಲ ರಾತ್ರಿಯಲ್ಲಿ ಗ್ಯಾಂಗ್​ವಾರ್
ನಿನ್ನೆ ರಾತ್ರಿ ಸುಮಾರು 10:30ರ ಸಮಯ. ಆಗ ತಾನೇ ಆನೇಕಲ್​ ಏರಿಯಾ ಜನ ನಿದ್ದೆಯಲ್ಲಿ ಕನಸು ಕಾಣೋಕೆ ಶುರುವಿಟ್ಟಿದ್ರು.. ಆ ಹೊತ್ತಲ್ಲೇ ನಡೆದ ಈ ಸಿನಿಮಾ ಸ್ಟೈಲ್​​ನ ಗ್ಯಾಂಗ್​ ವಾರ್​ ಇಡೀ ಏರಿಯಾವನ್ನೇ ಶೇಕ್ ಶೇಕ್ ಮಾಡಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಎರಡು ರೌಡಿಶೀಟರ್​ ಗ್ಯಾಂಗ್​ ನಡುವೆ ನಡೆದಿರುವ ವಾರ್​ ಎಂದು ಹೇಳಲಾಗ್ತಿದೆ. ಈ ಏರಿಯಾದ ರೌಡಿಶೀಟರ್​ ಮನು ಗ್ಯಾಂಗ್​ ಮೇಲೆ ದಾಳಿಯಾಗಿದೆ. ಸುಮಾರು 20ಕ್ಕೂ ಅಧಿಕ ಹುಡುಗರು ದಾಳಿ ಮಾಡಿದ್ದಾರೆ.

publive-image

ಗ್ಯಾಂಗ್​ ವಾರ್​..!
ಮಧ್ಯಾಹ್ನ ರೌಡಿ ಶೀಟರ್​ ಮನು ಅಲಿಯಾಸ್ ಜಾಕಿ.. ಸ್ನೇಹಿತರ ಜೊತೆ ಬೆಂಗಳೂರಿನಲ್ಲಿ ತಂಗಿ ಮದುವೆ ಕಾರ್ಡ್ ಹಂಚಿ ವಾಪಸ್ ಆಗ್ತಿದ್ದ. ಇದನ್ನೇ ಹೊಂಚು ಹಾಕಿ ಕೂತಿದ್ದ ಕಿರಾತಕರು ಮನು ಅಂಡ್​ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಿದೆ. ಸ್ಕಾರ್ಪಿಯೋ ಕಾರು ಹಾಗೂ ಟಾಟಾ ಸಫಾರಿ ಕಾರಲ್ಲಿ ಲಾಂಗ್​ ಮಚ್ಚುಗಳನ್ನು ಹಿಡಿದು ಬಂದಿದ್ದ ಕಿರಾಕತರು, ಅಟ್ಯಾಕ್​ ಮಾಡಿದೆ. ಸ್ವಲ್ಪದ್ರಲ್ಲೇ ಮನು ಅಂಡ್​ ಗ್ಯಾಂಗ್ ಎಸ್ಕೇಪ್ ಆಗಿದೆ. ಈ ಮನು ಕನಕಪುರ ರಸ್ತೆ ಕದಂಬ ಹೋಟೆಲ್ ಬಳಿ ನಡೆದಿದ್ದ ಸುನೀಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಹಳೇ ವೈಷಮ್ಯಕ್ಕೆ ಈ ಗ್ಯಾಂಗ್​ ವಾರ್​ ನಡೆದಿದೆ ಅನ್ನೋ ಶಂಕೆ ಇದೆ.

ಟಾರ್ಗೆಟ್​ ಮಿಸ್ ಆಗ್ತಿದ್ದಂತೆ ಸಿನಿಮಾ ಸ್ಟೈಲ್​ನಲ್ಲಿ ಸ್ಕ್ಯಾರ್ಪಿಯೋ ಕಾರು ಬಿಟ್ಟು ಕಿರಾತಕರು ಮತ್ತೊಂದು ಕಾರಲ್ಲಿ ಸುಮಾರು ಅರ್ಧ ಕಿ.ಮೀ ರಿವರ್ಸ್​ನಲ್ಲೇ ಕಾಲ್ಕಿತ್ತಿದ್ದಾರೆ. ಅತ್ತ, ಪೊಲೀಸರು ಬರ್ತಿದ್ದಂತೆ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್​ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಗಣಿ ಪೊಲೀಸರ ಸಹಯೋಗದಿಂದ ಕ್ರೇನ್ ಮೂಲಕ ಎರಡು ಕಾರುಗಳನ್ನ ತೆರವು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment