Advertisment

ತಗೋ.. ಎಷ್ಟು ತಿಂತೀಯಾ ತಿನ್ನು.. ಭ್ರಷ್ಟ ಅಧಿಕಾರಿಯತ್ತ ನೋಟಿನ ಕಂತೆ ಎಸೆದು ರೊಚ್ಚಿಗೆದ್ದ ಜನರು!

author-image
Gopal Kulkarni
Updated On
ತಗೋ.. ಎಷ್ಟು ತಿಂತೀಯಾ ತಿನ್ನು.. ಭ್ರಷ್ಟ ಅಧಿಕಾರಿಯತ್ತ ನೋಟಿನ ಕಂತೆ ಎಸೆದು ರೊಚ್ಚಿಗೆದ್ದ ಜನರು!
Advertisment
  • ಸರ್ಕಾರ ಅಧಿಕಾರಿಯ ಮೇಲೆ ನೋಟಿನ ಸುರಿಮಳೆ ಸುರಿದ ಸಾರ್ವಜನಿಕರು
  • ಎಷ್ಟು ತಿಂತಿಯೋ ತಿನ್ನು ಎಂದು ಅಧಿಕಾರಿಯ ಮೇಲೆ ನೋಟುಗಳ ಎಸೆತ
  • ವೈರಲ್ ಆದ ವಿಡಿಯೋದಲ್ಲಿ ಅಧಿಕಾರಿಯ ಮೇಜಿನ ತುಂಬಾ ನೋಟಿನ ರಾಶಿ

ಗುಜರಾತ್​ನಲ್ಲಿ ಮಾಡಲಾಗಿರುವ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹಲ್​ಚಲ್ ಸೃಷ್ಟಿಸಿದೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಜನರು ಸಿಡಿದೆದ್ದರೆ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಒಂದು ವಿಡಿಯೋ ದೊಡ್ಡ ನಿದರ್ಶನವಾಗಿದೆ. ಲಂಚ ಕೇಳಿದ ಅಧಕಾರಿ ಜನರ ಈ ಹಠಾತ್ ನಡೆಯಿಂದ ಕಕ್ಕಾಬಿಕ್ಕಿಯಾಗಿ ಕೈ ಜೋಡಿಸಿಕೊಂಡು ನಿಸ್ಸಾಹಯಕನಾಗಿ ಕುಳಿತ ವಿಡಿಯೋವೊಂದು ಈಗ ವೈರಲ್ ಆಗಿದೆ.

Advertisment


">January 13, 2025

ವಿಡಿಯೋದಲ್ಲಿ ಕೈಕಟ್ಟಿಕೊಂಡು ಕುಳಿತ ಸರ್ಕಾರಿ ಅಧಿಕಾರಿ ಎದುರು ಜನರು ನೋಟುಗಳ ಕಂತೆಯನ್ನು ಎಸೆದು ತಗೋ ಇನ್ನೂ ಎಷ್ಟು ಬೇಕು ಅಷ್ಟು ತಿನ್ನು ಎಂದು ಜೋರಾಗಿ ಕೂಗುತ್ತಿರುವುದು ಕಂಡು ಬಂದಿದೆ. ಅಧಿಕಾರಿಯ ಟೇಬಲ್​ ಮೇಲೆಲ್ಲಾ ನೋಟುಗಳ ರಾಶಿಯೇ ಬಿದ್ದುಕೊಂಡಿವೆ. ಜನರು ಗುಜರಾತಿ ಭಾಷೆಯಲ್ಲಿ ಅಧಿಕಾರಿಯನ್ನು ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಒಂದು ವಿಡಿಯೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಆಗಿದ್ದು ದೊಡ್ಡ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ:ಸೈಫ್ ಅಲಿ ಖಾನ್ ಜೀವ ಉಳಿದಿದ್ದೇ ಭಯಾನಕ ಸ್ಟೋರಿ.. ವೈದ್ಯರು ಬಿಚ್ಚಿಟ್ಟ ಶಾಕಿಂಗ್ ಮಾಹಿತಿ ಇಲ್ಲಿದೆ!

Advertisment

ಇದು ಗುಜರಾತ್​ನಲ್ಲಿ ನಡೆದಿರುವ ಘಟನೆಯಾಗಿದ್ದು ಸ್ಪಷ್ಟವಿದೆ. ಆದ್ರೆ ಎಲ್ಲಿ ಯಾವ ಸರ್ಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದ್ರೆ ವಿಡಿಯೋ ನೋಡಿದರೆ ಲಂಚ ಕೇಳಿದ ಅಧಿಕಾರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದುದ ಸ್ಪಷ್ಟವಾಗುತ್ತದೆ. ಸದ್ಯ ವೈರಲ್ ಆಗಿರುವ ವಿಡಿಯೋವನ್ನು ಕಂಡು ಜನರು. ಲಂಚಕ್ಕೆ ಬೇಡಿಕೆಯಿಡುವ ಪ್ರತಿಯೊಬ್ಬ ಅಧಿಕಾರಿಗೂ ಇದೇ ಮಾದರಿಯಲ್ಲಿ ಶಾಸ್ತಿಯಾಗಬೇಕು ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment