/newsfirstlive-kannada/media/post_attachments/wp-content/uploads/2024/11/OLA-SCOOTER.jpg)
ಶೋರೂಂ ಎದುರು ವ್ಯಕ್ತಿಯೊಬ್ಬ ತನ್ನ ಓಲಾ ಸ್ಕೂಟರ್​ನ್ನು ಸುತ್ತಿಗೆಯಿಂದ ಹೊಡೆದು ಪುಡಿ ಪುಡಿ ಮಾಡುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು. ಶೋರೂಂನವರು ಸರ್ವಿಸ್ ಮಾಡಿದ್ದಕ್ಕೆ 90 ಸಾವಿರ ರೂಪಾಯಿ ಬಿಲ್ ಮಾಡಿದ್ದು ಅದರಿಂದ ಕಂಗಾಲಾದ ವ್ಯಕ್ತಿ ಸ್ಕೂಟರ್​​ನ್ನು ಶೋರೂಂ ಮುಂದೆಯೇ ಒಡೆದು ಹಾಕಿದ್ದಾನೆ.
ಓಲಾ ಸ್ಕೂಟರ್​ನ ಆನ್ ರೋಡ್ ಬೆಲೆಯೇ 1.52 ಲಕ್ಷ ರೂಪಾಯಿಯಷ್ಟು ಇದೆ. ಇನ್ನು ಕೇವಲ ಸರ್ವಿಸ್ ಮಾಡಿದ್ದಕ್ಕೆ 90 ಸಾವಿರ ರೂಪಾಯಿ ಬಿಲ್ ಮಾಡಿದ್ದಕ್ಕೆ ವ್ಯಕ್ತಿ ರೊಚ್ಚಿಗೆದ್ದಿದ್ದಾನೆ. ಬಿಳಿ ಟೀಶರ್ಟ್ ಹಾಕಿಕೊಂಡಿದ್ದ ಯುವಕ ಮೊದಲು ಸುತ್ತಿಗೆಯಿಂದ ಹೊಡೆದು ಹೊಡೆದು ಓಲಾ ಸ್ಕೂಟರ್​ನ್ನು ಪುಡಿ ಪುಡಿ ಮಾಡಿದ ಬಳಿಕ ಮತ್ತೊಬ್ಬ ವ್ಯಕ್ತಿಯ ಕೈಗೆ ಸುತ್ತಿಗೆ ಕೊಡುತ್ತಾನೆ ಅವನು ಕೂಡ ಸ್ಕೂಟರ್ ಮೇಲೆ ಎರಡು ಏಟು ಹಾಕಿ ಆಕ್ರೋಶ ತಣ್ಣಗೆ ಮಾಡಿಕೊಳ್ಳುತ್ತಾನೆ.
शोरूम ने 90000 का बनाया बिल ग्राहक ने परेशान होकर शोरूम के सामने ही तोड़ दी स्कूटी
- सोशल मीडिया पर वायरल हुआ वीडियो.#ola#OlaScooter#viralvideo#ViralVideos#socialmedia#Nedricknews@OlaElectricpic.twitter.com/7JPPtRSf9E— Nedrick News (@nedricknews)
शोरूम ने 90000 का बनाया बिल ग्राहक ने परेशान होकर शोरूम के सामने ही तोड़ दी स्कूटी
- सोशल मीडिया पर वायरल हुआ वीडियो.#ola#OlaScooter#viralvideo#ViralVideos#socialmedia#Nedricknews@OlaElectricpic.twitter.com/7JPPtRSf9E— Nedrick News (@nedricknews) November 22, 2024
">November 22, 2024
ಸದ್ಯ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರ ತಹರೇವಾರಿಯಾಗಿ ಕಮೆಂಟ್ ಹಾಕುತ್ತಿದ್ದಾರೆ. ಈ ಎಲೆಕ್ಟ್ರಿಕ್ ವಾಹನಗಳ ಕಂಪನಿಗಳೆಲ್ಲವೂ ಮೋಸಗಾರ ಕಂಪನಿಗಳೇ ಎಂದು ಹೇಳವ ಮಟ್ಟಕ್ಕೆ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನೂ ಕೆಲವರು ಈ ಹುಚ್ಚಾಟವನ್ನು ಮಾಡುವ ಬದಲು ಕಂಪನಿ ವಿರುದ್ಧ ದೂರು ಕೊಟ್ಟಿದ್ದರೆ ಆಗುತ್ತಿರಲಿಲ್ವಾ ಎಂದು ಸಲಹೆಯನ್ನು ಕೂಡ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us