newsfirstkannada.com

ಪಾಂಡ್ಯ ಆ್ಯಟಿಟ್ಯೂಡ್​, ರೋಹಿತ್​ ಮತ್ತೆ ನಾಯಕನಾಗಲಿ! ಹ್ಯಾಟ್ರಿಕ್​ ಸೋಲುಂಡ ಫ್ಯಾನ್ಸ್​ ಮಾತು ಕೇಳಿದ್ರಾ?

Share :

Published April 2, 2024 at 12:53pm

Update April 2, 2024 at 12:54pm

  ಮುಂಬೈಗೆ ವಕ್ರ ದೆಸೆ.. ಹ್ಯಾಟಿಕ್​ ಸೋಲುಂಡ ಪಾಂಡ್ಯ ಪಡೆ

  ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಫ್ಯಾನ್ಸ್​. ಪಾಂಡ್ಯ ವಿರುದ್ಧ ಘರ್ಜನೆ

  ಪಾಂಡ್ಯ ಬೇಡ.. ರೋಹಿತ್​ ಮತ್ತೆ ನಾಯಕನಾಗಲಿ ಎಂಬ ಮುಂಬೈ ಫ್ಯಾನ್ಸ್​

ಮುಂಬೈಗೆ ಆದ್ಯಾವ ದೆಸೆಯೋ, ಆಡಿರುವ ಮೂರು ಪಂದ್ಯದಲ್ಲೂ ಮುಂಬೈ ತಂಡ ಹ್ಯಾಟ್ರಿಕ್​ ಸೋಲು ಅನುಭವಿಸಿದೆ. ನಿನ್ನೆ ನಡೆದ ರಾಜಸ್ಥಾನ್​ ರಾಯಲ್ಸ್​ ವಿರುದ್ಧವು ಸೋಲುಂಡಿದೆ. ಆದರೆ ಈ ಸೋಲನ್ನು ಅಭಿಮಾನಿಗಳು ನುಂಗಲಾರದೆ ಉಗುಳಿದ್ದಾರೆ. ನಾಯಕನ ಬದಲಾವಣೆ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದಾರೆ.

ಹಾರ್ದಿಕ್​ ಪಾಂಡ್ಯಗೆ ಈ ಬಾರಿಯ ಮುಂಬೈ ತಂಡದ ನಾಯಕತ್ವದ ಜವಾಬ್ದಾರಿ ನೀಡಿತ್ತು. ಆದರೆ ಯಾವ ದೆಸೆ ಕೈಕೊಡುತ್ತಿದೆಯೋ ಗೊತ್ತಿಲ್ಲ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಹಾರ್ದಿಕ್​ ಟೀಂ ಎಡವುತ್ತಿದೆ. ಇದರಿಂದ ಅಭಿಮಾನಿಗಳು ನಾಯಕನ ಮೇಲೆ ಕಿಡಿಕಾರುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ, ಮುಂಬೈ ತಂಡದಲ್ಲಿರುವ ರೋಹಿತ್​ ಶರ್ಮಾ ಮತ್ತೆ ನಾಯಕನಪಟ್ಟವೇರಬೇಕು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಪಾಂಡ್ಯನನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಒತ್ತಾಯಿಸುತ್ತಿದ್ದಾರೆ.

ವಿಡಿಯೋ ಕೃಪೆ: ವೈರಲ್​ ಬಾಲಿವುಡ್​

ಇದನ್ನೂ ಓದಿ: ಅರ್ಧ ಶತಕ ಬಾರಿಸಿದ ಮಗ ರಿಯಾನ್​ ಪರಾಗ್​.. ಓಡಿ ಹೋಗಿ ಅಪ್ಪಿಕೊಂಡು ಮುತ್ತಿಟ್ಟ ತಾಯಿ

ಒಟ್ಟಿನಲ್ಲಿ ಮುಂಬೈ ತಂಡ ಎಲ್ಲಿ ಎಡವುತ್ತಿದೆ? ಯಾವ ನಿರ್ಧಾರದಿಂದ ಸೋಲೊಪ್ಪಿಕೊಳ್ಳುತ್ತಿದೆ? ಎಂಬ ಬಗ್ಗೆ ಅಭಿಮಾನಿಗಳಿಗೆ ಒಂದು ಅಂದಾಜು ಸಿಕ್ಕಿದೆ. ಇದೇ ಕಾರಣದಿಂದ ಆಕ್ರೋಶ ಹೊರಹಾಕುತ್ತಿರುವ ಫ್ಯಾನ್ಸ್​ ರೋಹಿತ್​ ಶರ್ಮಾರನ್ನು ಮತ್ತೆ ನಾಯಕನನ್ನಾಗಿ ಕಾಣುವ ಆಸೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಂಡ್ಯ ಆ್ಯಟಿಟ್ಯೂಡ್​, ರೋಹಿತ್​ ಮತ್ತೆ ನಾಯಕನಾಗಲಿ! ಹ್ಯಾಟ್ರಿಕ್​ ಸೋಲುಂಡ ಫ್ಯಾನ್ಸ್​ ಮಾತು ಕೇಳಿದ್ರಾ?

https://newsfirstlive.com/wp-content/uploads/2024/04/Pandya.jpg

Load More