/newsfirstlive-kannada/media/post_attachments/wp-content/uploads/2024/08/HIGHSCHOOL-STUDENT-BEAT-TEACHER.jpg)
ಪಾಟ್ನಾ: ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ಅದು ಒಂದು ರೀತಿಯ ಹಬ್ಬವೇ. ಈ ದೇಶವನ್ನು ಗುಲಾಮಗಿರಿಯ ಕೊಂಡಿಯಿಂದ ಕಳಚಿ, ನವಯುಗವೊಂದು ಉದಯಿಸಿದ ದಿನ ಅದು. ಅದನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ನಮಗಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ವೀರರಿಗೆ ಗೌರವ ಅರ್ಪಿಸುತ್ತೇವೆ. ಸ್ವಾತಂತ್ರ್ಯೋತ್ಸವ ಅಂದ್ರೆ ಅಲ್ಲಿ ಹಾಡು, ನರ್ತನ, ಭಾಷಣ ಕೊನೆಗೆ ಒಂದಿಷ್ಟು ಸಿಹಿ ತಿಂಡಿ ನೀಡುವ ವಾಡಿಕೆ ಪರಂಪರಾಗತವಾಗಿ ನಡೆದು ಬಂದ ಪದ್ಧತಿ.
ಇದನ್ನೂ ಓದಿ:ಬರಿಗೈಯಲ್ಲಿ ಬಂದ್ರು ಭರ್ಜರಿ ಸ್ವಾಗತ.. ತವರಿನಲ್ಲಿ ವಿನೇಶ್ ಪೋಗಟ್ ಕಣ್ಣೀರು; ಭಾವುಕರಾಗಿ ಹೇಳಿದ್ದೇನು?
ಈ ಸ್ವೀಟ್​ ನೀಡುವ ವಿಚಾರದಲ್ಲಿ ಸೋಷಿಯಲ್ ಮಿಡಿಯಾಗಳಲ್ಲಿ ಅನೇಕ ಕಾಮಿಡಿ ರೀಲ್ಸ್​ಗಳು ಬರುತ್ತವೆ. ಅವನ್ನೆಲ್ಲಾ ನೋಡಿದಾಗ ಯಾರೂ ಕೂಡ ಸ್ವೀಟ್ಸ್​ಗೋಸ್ಕರ ಸ್ವಾತಂತ್ರ್ಯ ದಿನಾಚರಣೆ ಹೋಗ್ತಾರಾ ಅನ್ನೋ ಅಸಡ್ಡ ಭಾವ ಕೂಡ ಬರುತ್ತದೆ. ಆದ್ರೆ ಅದು ನಿಜವೋ ಏನೋ ಅನ್ನುವಂತ ಘಟನೆ ಬಿಹಾರದಲ್ಲಿ ನಡೆದಿದೆ. ಬಕ್ಸರ್​ನ ಮುರಾರ್ ಹೈಸ್ಕೂಲ್​ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸ್ವೀಟ್ ಕೊಡದ ಒಂದೇ ಕಾರಣವಿಟ್ಟುಕೊಂಡು ಅಲ್ಲಿನ ವಿದ್ಯಾರ್ಥಿಗಳು ಮೇಷ್ಟ್ರನ್ನ ಮನ ಬಂದಂತೆ ಥಳಿಸಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಇದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಟಲ್ ಸೇತುವೆಯಿಂದ ಧುಮುಕಿ ಆತ್ಮ*ಹತ್ಯೆಗೆ ಯತ್ನಿಸಿದ ಯುವತಿ: ಬೆಚ್ಚಿ ಬೀಳಿಸುತ್ತೆ ವಿಡಿಯೋ
ಶಾಲೆಯಲ್ಲಿ ಅಸಲಿಗೆ ಆಗಿದ್ದೇನು
ಇದೇ ಗುರುವಾರ ಆಗಸ್ಟ್ 15 ರಂದು ಮುರಾರ್ ಹೈಸ್ಕೂಲಿನಲ್ಲಿ ಎಂದಿನಂತೆ ಧ್ವಜಾರೋಹಣ ನಡೆದಿದೆ. ಅತಿಥಿಗಳ ಭಾಷಣ ಹಾಡುಗಳೆಲ್ಲವೂ ಮುಗಿದಿದೆ. ಈ ವೇಳೆ ಶಾಲೆ ಗೇಟಿನಾಚೆ ಒಂದಿಷ್ಟು ಹುಡುಗರು ಕಾದುಕೊಂಡು ಕುಳಿತಿದ್ದಾರೆ. ಅದೇ ವೇಳೆ ಬಂದ ಮೇಷ್ಟ್ರಿಗೆ ಸರ್ ಸ್ವೀಟ್​ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಶಿಕ್ಷಕ, ನೀವು ನಮ್ಮ ಶಾಲೆಯ ವಿದ್ಯಾರ್ಥಿಗಳೇ ಅಲ್ಲ, ಹೀಗಾಗಿ ನಿಮಗೆ ಸ್ವೀಟ್ಸ್ ಕೊಡುವುದಿಲ್ಲ ಎಂದಿದ್ದಾರೆ. ಕೂಡಲೇ ಜಗಳಕ್ಕೆ ನಿಂತ ವಿದ್ಯಾರ್ಥಿಗಳು ವಾಗ್ವಾದ ನಡೆಸಿದ್ದಾರೆ. ಇದನ್ನು ಕಂಡ ಪಂಕಜ್ ಕುಮಾರ್ ಎಂಬ ಮತ್ತೊಬ್ಬ ಶಿಕ್ಷಕರು ಬಿಡಿಸಲು ಅಂತ ಅಲ್ಲಿಗೆ ಬಂದು ವಿದ್ಯಾರ್ಥಿಗಳೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಹೀಗೆ ವಾಗ್ವಾದ ಮುಂದುವರಿದು ಅಲ್ಲಿದ್ದ ಎಲ್ಲಾ ಹುಡುಗರು ಸೇರಿ ಶಿಕ್ಷಕರನ್ನ ಮನಬಂದಂತೆ ಥಳಿಸಿದ್ದಾರೆ. ಗಲಾಟೆ ಗೇಟ್​ನಿಂದ ಮುಖ್ಯರಸ್ತೆಯವರೆಗೂ ಹೋಗಿ ಮಾರಾಮಾರಿಯಾಗಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಕಿಡಿಗೇಡಿಗಳನ್ನು ವಶಕ್ಕೆ ಪಡೆದು, ಶಿಕ್ಷಕರನ್ನು ಮನೆಗೆ ಹೋಗುವಂತೆ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ