/newsfirstlive-kannada/media/post_attachments/wp-content/uploads/2025/05/GREATER-BENGALURU.jpg)
ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರು ಅದ್ವಾನ ಆಗಿದೆ. ಹಿನ್ನೆಲೆಯಲ್ಲಿ ಇಂದು ಗ್ರೇಟರ್ ಬೆಂಗಳೂರು ಕಮಿಷನರ್, ಮಹೇಶ್ವರ್ ರಾವ್ ಹಾನಿಯಾದ ಪ್ರದೇಶಗಳ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಮಹಿಳೆಯೊಬ್ಬರು ಆಯುಕ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಹೇಶ್ವರ್ ರಾವ್ ಮಹದೇವಪುರ ವಲಯದ ಸಾಯಿ ಬಡಾವಣೆಗೆ ಭೇಟಿ ಕೊಟ್ಟಿದ್ದರು. ಯಾವ ಅಧಿಕಾರಿಗಳೂ ಇಲ್ಲದೇ ಕಮಿಷನರ್ ರೌಂಡ್ಸ್ ಹೊಡೆಯುತ್ತಿದ್ದರು. ಈ ವಿಚಾರ ಗ್ರೇಟರ್ ಬೆಂಗಳೂರು ಸಿಬ್ಬಂದಿಗೆ ಗೊತ್ತಾಗ್ತಿದ್ದಂತೆಯೇ ಮೋಟಾರ್ ತಂದು ರಸ್ತೆಯಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲು ಶುರು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೂಲಕ ಪರಿಸ್ಥಿತಿ ಅವಲೋಕಿಸುತ್ತಿದ್ದ ಮಹೇಶ್ವರ್ ರಾವ್ ಅವರನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡರು.
What is your name? Are you BBMP commissioner? ಅಂತಾ ಟ್ರ್ಯಾಕ್ಟರ್ ಅಡ್ಡ ಗಟ್ಟಿ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಮೊಣಕಾಲಿನವರೆಗೂ ನೀರು ನಿಂತಿದೆ. ಸಮಸ್ಯೆಗಳನ್ನ ಯಾರೂ ಕೇಳೋರು ಇಲ್ವಾ. ಇದಕ್ಕೆಲ್ಲ ಏನು ಪರಿಹಾರ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಭಾರೀ ಅಗ್ನಿ ಅವಘಡ; ನಾಲ್ವರು ಸಜೀವ ದಹನ.. ಮಕ್ಕಳು ಸೇರಿ ಜೀವ ಬಿಟ್ಟ 17 ಜನರು
ಬಳಿಕ ಮಾತನಾಡಿರುವ ಕಮಿಷನರ್, ಅಧಿಕಾರಿಗಳೆಲ್ಲಾ ರಾತ್ರಿಯಿಡಿ ಕೆಲಸ ಮಾಡಿದ್ದಾರೆ. ಎಲ್ಲೆಲ್ಲಿ ಸಮಸ್ಯೆ ಆಗಿದೆ ಅಂತ ನೋಡ್ತಿದ್ದೇವೆ. ಸಾಯಿ ಬಡಾವಣೆಯದು ಹಳೆ ಸಮಸ್ಯೆ. ಬಿಡಿಎ ಜೊತೆ ಚರ್ಚೆ ಮಾಡ್ತೇವೆ. ಇದು ಬಿಡಿಎ ಲೇಔಟ್ ಆಗಿದೆ. ಹಾಗಾಗಿ ಅವರ ಜೊತೆ ಮಾತಾಡಬೇಕು. ಕೊನೆಯ ಬಾರಿಯೂ ಹೀಗೆಯೇ ಆಗಿತ್ತು. ಆಗ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಚನೆ ಮಾಡ್ತಿದ್ದೇವೆ.
ಪ್ರತಿ ಸಲ ಮಳೆ ಬಂದಾಗಲೂ ಇಲ್ಲಿ ಹಾನಿ ಆಗುತ್ತದೆ. ಬಿಎಂಆರ್ಸಿಎಲ್ ಕೆಲಸ ನಿಧಾನದಿಂದ ಹೀಗೆ ಆಗ್ತಿದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ.. ಅದನ್ನು ಒಪ್ಪಲ್ಲ. ಬಿಎಂಆರ್ಸಿಎಲ್ ಸಿಬ್ಬಂದಿಗೂ ಸೂಚನೆ ಕೊಟ್ಟಿದ್ದೇನೆ. ಎಲ್ಲೆಲ್ಲಿ ಕಾಮಗಾರಿ ಆಗ್ತಿದೆಯೋ ಅಲ್ಲೆಲ್ಲಾ ನೀರು ಹೋಗೋಕೆ ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗುಂಡಿಗಳು ಕಾಣುತ್ತಿವೆ. ಇನ್ನು ಹೆಚ್ಚು ಗುಂಡಿಗಳನ್ನ ಪತ್ತೆ ಹಚ್ಚಿದ್ದೇವೆ. ಗುಂಡಿ ಗಮನ ಆ್ಯಪ್ ಇದೆ. ಅಲ್ಲಿಯೂ ಜನ ಗಮನಕ್ಕೆ ತರಬಹುದು. ರಾಜಕಾಲುವೆ ಸ್ವಚ್ಛಗೊಳಿಸಿದ್ದೇವೆ. ಆದರೆ, ಜನರು ಮತ್ತೆ ಮತ್ತೆ ಕಸ ಎಸೆದು ಬ್ಲಾಕ್ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ: ಭಾರತ ತಂಡದಲ್ಲಿ ನನಗೆ ಚಾನ್ಸ್ ಸಿಕ್ಕಾಗ ವಿರಾಟ್ ಕೊಹ್ಲಿ ಕಾಲಿನಿಂದ ಒದ್ದಿದ್ದರು- IPL ಪ್ಲೇಯರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ