/newsfirstlive-kannada/media/post_attachments/wp-content/uploads/2025/03/ANIKET-VARMA-1.jpg)
ಹೋಮ್ಗ್ರೌಂಡ್ ಹೈದ್ರಾಬಾದ್ನಲ್ಲಿ ಸನ್ರೈಸರ್ಸ್ ತಂಡದ ಲೆಕ್ಕಾಚಾರ ತಪ್ಪಾಯ್ತು. ತಂತ್ರಕ್ಕೆ ಪ್ರತಿತಂತ್ರ ಹೆಣೆದ ಲಕ್ನೋ ಪಡೆ ತವರಿನಂಗಳದಲ್ಲೇ ಹೈದ್ರಾಬಾದ್ಗೆ ಸೋಲಿನ ಶಾಕ್ ನೀಡಿತು. ನಿಕೊಲಸ್ ಪೂರನ್ ಆರ್ಭಟದ ಮುಂದೆ ಪ್ಯಾಟ್ ಕಮಿನ್ಸ್ ಪಡೆಯ ಗೆಲುವಿನ ಕನಸು ಕೊಚ್ಚಿ ಹೋಯಿತು.
ಹೋಮ್ಗ್ರೌಂಡ್ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡೋ ಅವಕಾಶ ಪಡೆದುಕೊಂಡ ಸನ್ರೈಸರ್ಸ್ ಹೈದ್ರಾಬಾದ್ ಬಿಗ್ ಟಾರ್ಗೆಟ್ ಸೆಟ್ ಮಾಡೋ ಲೆಕ್ಕಾಚಾರದಲ್ಲೇ ಕಣಕ್ಕಿಳಿಯಿತು. ಆರಂಭದಲ್ಲೇ ಆಘಾತ ಎದುರಾಯ್ತು. ಅಭಿಶೇಕ್ ಶರ್ಮಾ, ಇಶಾನ್ ಕಿಶನ್ ಆಟಕ್ಕೆ ಫುಲ್ ಸ್ಟಾಫ್ ಇಟ್ಟ ಶಾರ್ದೂಲ್ ಠಾಕೂರ್ ಲಕ್ನೋಗೆ ಆರಂಭಿಕ ಮೇಲುಗೈ ತಂದುಕೊಟ್ರು.
ಇದನ್ನೂ ಓದಿ: ಸಿಎಸ್ಕೆ ತಂಡದ ಈ ಬ್ರಹ್ಮಾಸ್ತ್ರ ಎದುರಿಸೋದೇ RCBಗೆ ಇವತ್ತು ದೊಡ್ಡ ಚಾಲೆಂಜ್..!
ವಿಕೆಟ್ ಉರುಳಿದ್ರೂ ಎಸ್ಆರ್ಹೆಚ್ನ ಇಟೆಂಟ್ ಬದಲಾಗಲಿಲ್ಲ. ಟ್ರಾವಿಸ್ ಹೆಡ್ ತನ್ನ ಅಗ್ರೆಸ್ಸಿವ್ ಆಟವನ್ನೇ ಮುಂದುವರೆಸಿದ್ರು. 5 ಬೌಂಡರಿ, 3 ಸಿಕ್ಸರ್ ಚಚ್ಚಿದ ಹೆಡ್ 28 ಎಸೆತಗಳಲ್ಲಿ 47 ರನ್ಗಳಿಸಿದ್ರು. ಹೆಡ್ ಔಟಾದ ಬಳಿಕ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್ 26 ರನ್ಗಳಿಸಿದ್ರು. ಆಲ್ರೌಂಡರ್ ನಿತೀಶ್ ರೆಡ್ಡಿ ಡಿಸೆಂಟ್ ಆಟವಾಡಿ 32 ರನ್ಗಳ ಕಾಣಿಕೆ ನೀಡಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ಆಟಗಾರ ಅನಿಕೇತ್ ವರ್ಮಾ 13 ಬಾಲ್ನಲ್ಲಿ ಬರೋಬ್ಬರಿ 5 ಸಿಕ್ಸರ್ ಸಿಡಿಸಿ ಫ್ಯಾನ್ಸ್ನ ರಂಜಿಸಿದ್ರು. 276ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿದ ಅನಿಕೇತ್ 36 ರನ್ ಚಚ್ಚಿದ್ರು. ಆ ಮೂಲಕ ಅನಿಕೇತ್ ವರ್ಮಾ, ಎಲ್ಲರ ಗಮನ ಸೆಳೆದರು.
ಅಭಿನವ್ ಮನೋಹರ್ ನಿರಾಸೆ ಮೂಡಿಸಿದ್ರೆ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ 4 ಎಸೆತಗಳಲ್ಲೇ 18 ಚಚ್ಚಿದ್ರು. ಹರ್ಷಲ್ ಪಟೇಲ್ ಅಜೇಯ 12 ರನ್ಗಳಿಸಿದ್ರು. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡ ಹೈದ್ರಾಬಾದ್ 190 ರನ್ಗಳಿಸಿತು.
ಇದನ್ನೂ ಓದಿ: ತವರಿನಲ್ಲಿ ಹೈದ್ರಾಬಾದ್ಗೆ ಭಾರೀ ಮುಖಭಂಗ.. ರಿಷಭ್ ಪಂತ್ ಮುಂದೆ ತಲೆ ಬಾಗಿದ ಕಮಿನ್ಸ್
191 ರನ್ಗಳ ಟಾರ್ಗೆಟ್ ಬೆನ್ನತ್ತಿದ ಲಕ್ನೋಗೆ ಗುಡ್ ಸ್ಟಾರ್ಟ್ ಸಿಗಲಿಲ್ಲ. ಎಡೆನ್ ಮರ್ಕ್ರಮ್ 1 ರನ್ಗಳಿಸಿ ನಿರ್ಗಮಿಸಿದ್ರು. 2ನೇ ವಿಕೆಟ್ಗೆ ಜೊತೆಯಾದ ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಹೈದ್ರಾಬಾದ್ ಅಂಗಳದಲ್ಲಿ ರನ್ ಹೊಳೆ ಹರಿಸಿದ್ರು. ಅಬ್ಬರಿಸಿ ಬೊಬ್ಬಿರಿದ ಪೂರನ್ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದ್ರು. ಬರೋಬ್ಬರಿ 269ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿದ ನಿಕೋಲಸ್ ಪೂರನ್ 6 ಬೌಂಡರಿ, 6 ಸಿಕ್ಸರ್ ಚಚ್ಚಿದ್ರು. ಹಾಫ್ ಸೆಂಚುರಿ ಸಿಡಿಸಿ ಆರ್ಭಟಿಸಿದ ಪೂರನ್ ಜಸ್ಟ್ 26 ಎಸೆತಗಳಲ್ಲಿ 70 ರನ್ ಕಲೆ ಹಾಕಿದ್ರು.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಮಿಚೆಲ್ ಮಾರ್ಷ್ ಹೈದ್ರಾಬಾದ್ ಎದುರೂ ಸಾಲಿಡ್ ಆಟವಾಡಿದ್ರು. 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಮಿಂಚಿದ ಮಾರ್ಷ್ 31 ಎಸೆತಗಳಲ್ಲಿ 52 ರನ್ಗಳಿಸಿದ್ರು. ರಿಷಭ್ ಪಂತ್ ಆಟ 15 ರನ್ಗಳಿಗೆ ಅಂತ್ಯವಾದ್ರೆ, ಆಯುಷ್ ಬದೋನಿ ಬ್ಯಾಟ್ ಸೌಂಡ್ ಮಾಡಲಿಲ್ಲ. ವಿಕೆಟ್ ಉರುಳಿದ್ರೂ 6ನೇ ವಿಕೆಟ್ಗೆ ಜೊತೆಯಾದ ಡೇವಿಡ್ ಮಿಲ್ಲರ್, ಅಬ್ಧುಲ್ ಸಮದ್ ಅಂತಿಮ ಹಂತದಲ್ಲಿ ನಿರಾಯಾಸವಾಗಿ ಬ್ಯಾಟಿಂಗ್ ನಡೆಸಿ ಲಕ್ನೋ ಪಡೆಯನ್ನ ಗೆಲುವಿನ ದಡ ಸೇರಿಸಿದ್ರು. 5 ವಿಕೆಟ್ಗಳ ಗೆಲುವಿನೊಂದಿಗೆ ಲಕ್ನೋ ಟೂರ್ನಿಯ ಮೊದಲ ಗೆಲುವು ದಾಖಲಿಸಿತು.
ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಔಟ್.. ವಿರಾಟ್ ಕೊಹ್ಲಿ ಇನ್; ಟೀಮ್ ಇಂಡಿಯಾದಲ್ಲಿ ಬದಲಾವಣೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್