/newsfirstlive-kannada/media/post_attachments/wp-content/uploads/2025/03/Aniket_Verma.jpg)
ಸನ್‌ರೈಸರ್ಸ್ ಹೈದರಾಬಾದ್ ಟೀಮ್ನಲ್ಲಿ ಕೇವಲ ಪವರ್ ಹಿಟ್ಟರ್ಗಳ ಸಾಲೇ ಇದೆ. ಕ್ರೀಸ್ಗೆ ಬರುವ ಯಾರೊಬ್ಬ ಬ್ಯಾಟ್ಸ್‌ಮನ್ ಕೂಡ ನಿಧಾನವಾದ ಬ್ಯಾಟಿಂಗ್ ಗೊತ್ತೇ ಇಲ್ಲ. ಬಂದವರೇ ಬೌಲರ್ಗಳನ್ನು ಎದುರಿಸಲು ಮುಂದಾಗುತ್ತಾರೆ. ಇದರಂತೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಎಲ್ಲ ಬ್ಯಾಟಿಂಗ್ ಮುಗಿಯಿತು ಎನ್ನುವಷ್ಟರಲ್ಲೇ 6ನೇ ಸ್ಲಾಟ್ನಲ್ಲಿ ಕಣಕ್ಕಿಳಿದ ಯಂಗ್ ಪ್ಲೇಯರ್ ಅನಿಕೇತ್ ವರ್ಮಾ, 5 ಬಿಗ್ ಸಿಕ್ಸರ್ ಸಿಡಿಸಿದ್ದು ಎಲ್ಲರಿಗೂ ಆಶ್ಚರ್ಯ ತಂದಿದೆ. ಇಷ್ಟಕ್ಕೂ ಯಾರು ಈ ಅನಿಕೇತ್ ವರ್ಮಾ?.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ ಹೆಡ್, ಇಶನ್ ಕಿಶನ್, ಅಭಿಷೇಕ್ ಔಟಾದ ನಂತರ ಮತ್ಯಾರು ಹೊಡಿಬಡಿ ಬ್ಯಾಟ್ಸ್‌ಮನ್ ಇಲ್ಲ ಎನ್ನಲಾಗಿತ್ತು. ಆದರೆ ಕ್ರೀಸ್ಗೆ ಬಂದ ಆಲ್‌ರೌಂಡರ್ ಅನಿಕೇತ್ ವರ್ಮಾ, ಕೇವಲ 13 ಎಸೆತಗಳಲ್ಲಿ 5 ಸಿಕ್ಸರ್ ಸಮೇತ 36 ರನ್ ಸಿಡಿಸಿದರು. ಇವರ ಬ್ಯಾಟ್ನಿಂದ ಬಂದ ರನ್ಗಳ ಬಗ್ಗೆ ಇವರು ಯಾರು ಎನ್ನುವ ಕುತೂಹಲ ಅಲ್ಲರಲ್ಲೂ ಮೂಡಿದೆ.
ಅನಿಕೇತ್ ವರ್ಮಾ 22 ವರ್ಷದ ಯಂಗ್ ಪ್ಲೇಯರ್. ಉತ್ತರ ಪ್ರದೇಶದ ಝಾನ್ಸಿಯವರು. ಇವರು ಐಪಿಎಲ್‌ಗೆ ಪದಾರ್ಪಣೆ ಮಾಡುವ ಮೊದಲು ಮಧ್ಯಪ್ರದೇಶದ ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಕೇವಲ ಒಂದೇ 1 ಪ್ರಥಮ ದರ್ಜೆ ಟಿ20 ಪಂದ್ಯವನ್ನು ಆಡಿದ್ದರು. ಆದರೆ 23 ವರ್ಷದೊಳಗಿನ ಆಟಗಾರರಲ್ಲಿ ಇವರೇ ರನ್ ಮೆಷಿನ್ ಆಗಿದ್ದರು.
ಇದನ್ನೂ ಓದಿ:ಕೈ ಕೊಟ್ಟ ಕೊಹ್ಲಿ; ಯುವ ಬ್ಯಾಟರ್ಗಳ ಆರ್ಭಟ.. ಚೆನ್ನೈಗೆ RCB ಬಿಗ್ ಟಾರ್ಗೆಟ್
ಬಲಗೈ ಬ್ಯಾಟ್ಸ್‌ಮನ್ ಆಗಿರುವ ಅನಿಕೇತ್ ವರ್ಮಾ, ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ತಂಡದಲ್ಲಿ ಆಲರೌಂಡರ್ ಪ್ರದರ್ಶನ ನೀಡುವ ಆಟಗಾರ. ಮೊದಲು ಕರ್ನಾಟಕದ ವಿರುದ್ಧ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶದ ಪರವಾಗಿ ಆಡಿ ಪ್ರಾಮುಖ್ಯತೆ ಪಡೆದರು. ಇದಾದ ಮೇಲೆ ಚೆನ್ನೈನಲ್ಲಿ ನಡೆದ ಬುಚಿ ಬಾಬು ಪಂದ್ಯಾವಳಿಯಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಪರಿಚಿತರಾದರು.
ಮಧ್ಯಪ್ರದೇಶ ಪ್ರೀಮಿಯರ್ ಲೀಗ್‌ನಲ್ಲಿ ಅನಿಕೇತ್ ವರ್ಮಾ ಸತತವಾಗಿ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಲೀಗ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಹಾಗೂ ಶತಕ ಸಿಡಿಸಿದ ಬ್ಯಾಟರ್ ಎನ್ನುವ ಖ್ಯಾತಿ ಇವರಿಗಿದೆ. ಕೇವಲ 32 ಬಾಲ್ಗಳಲ್ಲಿ ಶತಕ ಬಾರಿಸಿದ್ದಾರೆ. 5 ಇನ್ನಿಂಗ್ಸ್ನಲ್ಲಿ 244 ರನ್ಗಳನ್ನು ಕಲೆ ಹಾಕಿದ್ದರು. ಭೋಪಾಲ್ ಲೆಪರ್ಡ್ಸ್ ಪರ ಆಡುವಾಗ 41 ಎಸೆತಗಳಲ್ಲಿ 13 ಸಿಕ್ಸರ್ ಬಾರಿಸಿ 123 ರನ್ ಗಳಿಸಿರುವುದು ಇವರ ಶ್ರೇಷ್ಠ ಸಾಧನೆ ಆಗಿದೆ. ಹೈದ್ರಾಬಾದ್ ಫ್ರಾಂಚೈಸಿಯು ಈ ಬಾರಿಯ ಮೆಗಾ ಆಕ್ಷನ್ನಲ್ಲಿ ಅನಿಕೇತ್ ವರ್ಮಾ ಅವರನ್ನು ಕೇವಲ 30 ಲಕ್ಷ ರೂಪಾಯಿಗೆ ಖರೀದಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ