Advertisment

ಅನಿಲ್ ಅಂಬಾನಿಗೆ ಬಿಗ್ ಶಾಕ್.. EDಯಿಂದ 50 ಕಂಪನಿಗಳ ಮೇಲೆ ಮೆಗಾ ಕೂಂಬಿಂಗ್..!

author-image
Ganesh
Updated On
ಅನಿಲ್ ಅಂಬಾನಿಗೆ ಬಿಗ್ ಶಾಕ್.. EDಯಿಂದ 50 ಕಂಪನಿಗಳ ಮೇಲೆ ಮೆಗಾ ಕೂಂಬಿಂಗ್..!
Advertisment
  • 35 ಸ್ಥಳ, 50 ಕಂಪನಿಗಳು, 25 ವ್ಯಕ್ತಿಗಳ ಮೇಲೆ ದಾಳಿ
  • ಅನಿಲ್ ಅಂಬಾನಿ ಸಂಸ್ಥೆ ಮೇಲಿರುವ ಆರೋಪ ಏನು?
  • ಸಿಬಿಐ ಎಫ್​ಐಆರ್ ದಾಖಲಿಸಿದ ಬೆನ್ನಲ್ಲೇ ED ಕ್ರಮ

ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳ (RAAGA) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ತೀವ್ರಗೊಳಿಸಿದೆ. ಅನಿಲ್ ಅಂಬಾನಿಗೆ (Anil Ambani) ಸಂಬಂಧಿಸಿದ 48-50 ಸ್ಥಳಗಳಲ್ಲಿ ED ದಾಳಿ ಮಾಡಿದೆ. ಸಿಬಿಐ (Central Bureau of Investigation) ಅನಿಲ್ ಅಂಬಾನಿ ಕಂಪನಿ ಮೇಲೆ 2 ಎಫ್‌ಐಆರ್‌ ದಾಖಲಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಕ್ರಮಕ್ಕೆ ಮುಂದಾಗಿದೆ.

Advertisment

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ.. ಜೈಸ್ವಾಲ್, ಸುದರ್ಶನ್​​​ ಹೋರಾಟಕ್ಕೆ ಬ್ರಿಟಿಷರು ಸುಸ್ತು..!

ED ಆರೋಪ ಏನು..?

ಅನಿಲ್ ಅಂಬಾನಿ ಕಂಪನಿಗಳು ಬ್ಯಾಂಕ್‌ಗಳಿಂದ ಸಾಲ ಪಡೆದು ಹಣ ದುರುಪಯೋಗಪಡಿಸಿಕೊಂಡಿವೆ ಅಂತಾ ತನಿಖೆಗಳು ಹೇಳಿವೆ. ಕೋಟಿ ಕೋಟಿ ಸಾಲ ಪಡೆದು ತಮ್ಮ ಇತರೆ ಕಂಪನಿಗಳಿಗೆ ಕಾನೂನು ಬಾಹೀರವಾಗಿ ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಸಾಮಾನ್ಯ ಜನರನ್ನ, ಹೂಡಿಕೆದಾರರನ್ನ ಮತ್ತು ಸರ್ಕಾರಿ ಸಂಸ್ಥೆಗಳನ್ನು ವಂಚಿಸಲಾಗಿದೆ. ರಾಷ್ಟ್ರೀಯ ವಸತಿ ಬ್ಯಾಂಕ್ (NHB), SEBI, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (NFRA) ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಅನೇಕ ದೊಡ್ಡ ದೊಡ್ಡ ಸಂಸ್ಥೆಗಳಿಗೆ ವಂಚನೆ ಮಾಡಲಾಗಿದೆ ಎಂದು ಇಡಿ ಹೇಳಿದೆ.

ಪ್ರಾಥಮಿಕ ತನಿಖೆಯಲ್ಲಿ ಇ.ಡಿ. ಕೆಲವು ಆಘಾತಕಾರಿ ವಿಚಾರಗಳನ್ನು ಪತ್ತೆ ಹಚ್ಚಿದೆ. 2017 ಮತ್ತು 2019ರ ನಡುವೆ ಯೆಸ್ ಬ್ಯಾಂಕಿನಿಂದ 3000 ಕೋಟಿ ಸಾಲ ಪಡೆಯಲಾಗಿದೆ. ಆ ಹಣವನ್ನು ಇತರೆ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಸಾಲವನ್ನು ಪಡೆಯಲು ಯೆಸ್ ಬ್ಯಾಂಕ್ ಅಧಿಕಾರಿಗಳು ಮತ್ತು ಪ್ರವರ್ತಕರಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಿದೆ.

Advertisment

ಇದನ್ನೂ ಓದಿ: ಮುಂಬೈ ರೈಲು ಸ್ಫೋಟ ಕೇಸ್​ಗೆ ಟ್ವಿಸ್ಟ್.. 12 ಅಪರಾಧಿಗಳ ಖುಲಾಸೆ ಆದೇಶಕ್ಕೆ ಸುಪ್ರೀಂ ತಡೆ

RAAGA ಕಂಪನಿಗಳಿಗೆ ಸಾಲ ನೀಡುವಾಗ ಯೆಸ್ ಬ್ಯಾಂಕ್ ತನ್ನದೇ ನಿಯಮಗಳನ್ನು ಉಲ್ಲಂಘಿಸಿದೆ. ಸಾಲಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹಿಂದಿನ ದಿನವೇ ಸಿದ್ಧಪಡಿಸಿತ್ತು. ಯಾವುದೇ ಕ್ರೆಡಿಟ್ ವಿಶ್ಲೇಷಣೆ ಇಲ್ಲದೆ ಬೃಹತ್ ಹೂಡಿಕೆ ಮಾಡಲಾಗಿದೆ. ದಾಖಲೆಗಳಿಲ್ಲದೆ ಮತ್ತು ಸರಿಯಾದ ತನಿಖೆ ಇಲ್ಲದೆ ಸಾಲ ನೀಡಿದೆ. ಅನೇಕ ಕಂಪನಿಗಳ ನಿರ್ದೇಶಕರು ಮತ್ತು ವಿಳಾಸಗಳು ಒಂದೇ ಆಗಿವೆ. ಸಾಲಗಳಿಗೆ ಅರ್ಜಿ ಸಲ್ಲಿಸಿ ಒಂದೇ ದಿನದಲ್ಲಿ ವಿತರಿಸಲಾಗಿದೆ ಎಂದು ಇ.ಡಿ. ಹೇಳಿದೆ.

ಕಂಪನಿಗಳಿಂದ ಮಾಹಿತಿ

ಸೆಬಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಎನ್‌ಎಫ್‌ಆರ್‌ಎ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ದೊಡ್ಡ, ದೊಡ್ಡ ಸಂಸ್ಥೆಗಳು ಕೂಡ ಇಡಿಗೆ ಮಾಹಿತಿ ನೀಡಿವೆ. ಆರ್‌ಎಚ್‌ಎಫ್‌ಎಲ್ (ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್)ಗೆ ಸಂಬಂಧಿಸಿದ ದೊಡ್ಡ ಪ್ರಕರಣದ ಬಗ್ಗೆ ಸೆಬಿ ಮಾಹಿತಿ ನೀಡಿದೆ. ಕಂಪನಿಯು ಒಂದೇ ವರ್ಷದಲ್ಲಿ ಕಾರ್ಪೊರೇಟ್ ಸಾಲವನ್ನು 3742 ಕೋಟಿಗಳಿಂದ 8670 ಕೋಟಿಗಳಿಗೆ ಹೆಚ್ಚಿಸಿದೆ. ಈ ಹಠಾತ್ ಹೆಚ್ಚಳವನ್ನು ED ಅನುಮಾನದಿಂದ ನೋಡ್ತಿದೆ.

Advertisment

ಇದನ್ನೂ ಓದಿ: ಹೈಕೋರ್ಟ್​ ಮಾಡಿದ ತಪ್ಪನ್ನ ನಾವು ಮಾಡಲ್ಲ, ಎಲ್ಲಾ ಸಮಸ್ಯೆಗೂ ಪವಿತ್ರಗೌಡ ಕಾರಣ -ಸುಪ್ರೀಂ ಕೋರ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment