newsfirstkannada.com

ಟಿ20 ವಿಶ್ವಕಪ್​​​ ತಂಡದಿಂದ ಕೊಹ್ಲಿ​​ ಡ್ರಾಪ್​ಗೆ BCCI ನೀಡ್ತಿರೋ ಕಾರಣ ಏನು? ವಿರಾಟ್ ಪರ ಕುಂಬ್ಳೆ ಭರ್ಜರಿ ಬ್ಯಾಟಿಂಗ್..!

Share :

Published March 15, 2024 at 2:41pm

    ಬಿಸಿಸಿಐ ಬಾಸ್​​ಗಳ ವಿರುದ್ಧ ಫ್ಯಾನ್ಸ್​ ಗರಂ

    T-20 ವಿಶ್ವಕಪ್​ನಿಂದ ಕೊಹ್ಲಿಗೆ ಕೊಕ್ ಪಕ್ಕಾನಾ​.?

    ಕೊಹ್ಲಿ ಬೆಂಬಲಕ್ಕೆ ನಿಂತ ಅಭಿಮಾನಿ ಬಳಗ..!

T20 ವಿಶ್ವಕಪ್​​ ತಂಡದಿಂದ ವಿರಾಟ್​ ಕೊಹ್ಲಿಯನ್ನ ಕೈ ಬಿಡಲು ಬಿಸಿಸಿಐ ಚಿಂತಿಸಿದೆ. ಈ ಸುದ್ದಿ ಸದ್ಯ ಕ್ರಿಕೆಟ್​​ ಲೋಕದಲ್ಲಿ ಬಿರುಗಾಳಿಯನ್ನ ಎಬ್ಬಿಸಿದೆ. ವಿಶ್ವ ಶ್ರೇಷ್ಟ ಆಟಗಾರನಿಗೆ ಕೊಕ್​ ಕೊಡಲು ಮುಂದಾಗಿರೋ ಬಿಗ್​ಬಾಸ್​ಗಳನ್ನ ನಡೆಯನ್ನ ಮಾಜಿ ಕ್ರಿಕೆಟರ್ಸ್​​ ಟೀಕಿಸ್ತಿದ್ದಾರೆ. ಕಿಂಗ್​ ಕೊಹ್ಲಿ ಫ್ಯಾನ್ಸ್​​ ಅಂತೂ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​ನ ಕಾವು ಭಾರತೀಯ ಕ್ರಿಕೆಟ್​ ವಲಯದಲ್ಲಿ ಜೋರಾಗಿದೆ. ಕ್ರಿಕೆಟ್​ ಹಬ್ಬದೂಟ ಸವಿಯಲು ಫ್ಯಾನ್ಸ್​ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ಬಿಸಿಸಿಐ ಬಿಗ್​ಬಾಸ್​​ಗಳು ​ಐಪಿಎಲ್​ನಲ್ಲೇ ವಿಶ್ವಕಪ್​ ತಂಡವನ್ನ ಫೈನಲ್​ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಈ ಪ್ರಕ್ರಿಯೆ ಆರಂಭವಾಗಿಲ್ಲ.. ಅದಾಗಲೇ ವಿವಾದದ ಕಿಡಿ ಹತ್ತಿಕೊಂಡಿದೆ.

ವಿಶ್ವಕಪ್​ನಿಂದ ಕೊಹ್ಲಿಗೆ ಕೊಕ್​ ಕೊಡಲು BCCI ಚಿಂತನೆ
ವೆಸ್ಟ್​ ಇಂಡೀಸ್​​ ಹಾಗೂ ಅಮೆರಿಕಾದ ಪಿಚ್​​ಗಳು ಸ್ಲೋ.. ಇಲ್ಲಿ ಬ್ಯಾಟಿಂಗ್​ ನಡೆಸೋದು ಕೊಹ್ಲಿಗೆ ಕಷ್ಟ ಅನ್ನೋ ಕಾರಣಕ್ಕೆ ವಿರಾಟ್​​ರನ್ನ ವಿಶ್ವಕಪ್​ ತಂಡದಿಂದ ಡ್ರಾಪ್​ ಮಾಡಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ. ಈ ಸುದ್ದಿ ಕ್ರಿಕೆಟ್​ ವಲಯದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಕೊಹ್ಲಿ ಫ್ಯಾನ್ಸ್​ ರೊಚ್ಚಿಗೆದ್ದಿದ್ದಾರೆ. ಬಿಸಿಸಿಐ ಬಾಸ್​​ಗಳು, ಸೆಲೆಕ್ಟರ್ಸ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

2 ವಿಡಿಯೋ ಪೋಸ್ಟ್​ ಮಾಡಿ ಬಾಸ್​​ಗಳನ್ನ ಜಾಡಿಸಿದ ಫ್ಯಾನ್ಸ್​
ಕಳೆದ ಟಿ20 ವಿಶ್ವಕಪ್​ ಪಂದ್ಯದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೆಚ್ಚೆದೆಯ ಹೋರಾಟ ನಡೆಸಿ ಅಮೋಘ ಇನ್ನಿಂಗ್ಸ್​ ಕಟ್ಟಿದ್ದ ವಿರಾಟ್​ ಕೊಹ್ಲಿ ತಂಡವನ್ನ ಗೆಲ್ಲಿಸಿದ್ರು. ಈ ಇನ್ನಿಂಗ್ಸ್​ನಲ್ಲಿ ಒತ್ತಡದ ನಡುವೆ ಹ್ಯಾರೀಸ್​​ ರೌಫ್​ ಬೌಲಿಂಗ್​ನಲ್ಲಿ ಸಖತ್ ಸ್ಟ್ರೇಟ್​​ ಸಿಕ್ಸರ್​ ಬಾರಿಸಿದ್ರು. ಐಸಿಸಿ ಕೂಡ ಇದನ್ನ ಶಾಟ್​ ಆಫ್​ ದ ಸೆಂಚುರಿ ಎಂದು ಕರೆದಿತ್ತು. ಆ ವಿಡಿಯೋವನ್ನ ಪೋಸ್ಟ್​ ಮಾಡ್ತಿರೋ ಫ್ಯಾನ್ಸ್​ ಇದು ಕೊಹ್ಲಿಯ ತಾಕತ್ತು ಎಂದು ಹೇಳ್ತಿದ್ದಾರೆ.

ಹಲ್​​ಚಲ್​ ಎಬ್ಬಿಸಿದ ಅಫ್ಘನ್​ ವಿರುದ್ಧದ ಸ್ಟ್ರೇಟ್​​ ಹಿಟ್​​​.!
ಟಿ20 ವಿಶ್ವಕಪ್​ ಬಳಿಕ ಚುಟುಕು ಫಾರ್ಮೆಟ್​ನಿಂದ ಕೊಹ್ಲಿಯನ್ನ ದೂರ ಇಡಲಾಗಿತ್ತು. ಈ ವರ್ಷದ ಆರಂಭದಲ್ಲಿ ನಡೆದ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ಕಮ್​ಬ್ಯಾಕ್​ ಮಾಡಿದ್ರು. ಕಮ್​ಬ್ಯಾಕ್ ಸರಣಿಯಲ್ಲಿ ನವಿನ್​ ಉಲ್​​ ಹಕ್​ ಬೌಲಿಂಗ್​ನಲ್ಲಿ​ ಅದ್ಧೂರಿಯಾದ ಸ್ಟ್ರೇಟ್​ ಹಿಟ್ ಬಾರಿಸಿ ಸಿಕ್ಸರ್​​ ಸಿಡಿಸಿದ್ರು. ಆ ವಿಡಿಯೋ ಕೂಡ ಟ್ರೆಂಡಿಂಗ್​ನಲ್ಲಿದೆ.

ವಿರಾಟ್​ ಕೊಹ್ಲಿ ಬೆಂಬಲಕ್ಕೆ ನಿಂತ ಕನ್ನಡಿಗ ಕುಂಬ್ಳೆ
ಅಭಿಮಾನಿಗಳು ಮಾತ್ರವಲ್ಲ.. ಮಾಜಿ ಕ್ರಿಕೆಟಿಗ, ಟೀಮ್​ ಇಂಡಿಯಾ ಮಾಜಿ ಕೋಚ್​​, ದಿಗ್ಗಜ ಅನಿಲ್​ ಕುಂಬ್ಳೆ ಕೂಡ ಕೊಹ್ಲಿಯನ್ನ ಬ್ಯಾಕ್​ ಮಾಡಿದ್ದಾರೆ. ಕೊಹ್ಲಿ ತಂಡದ ಎನರ್ಜಿಯನ್ನ ಹೆಚ್ಚಿಸ್ತಾರೆ. ಹೀಗಾಗಿ ಡ್ರಾಪ್​ ಮಾಡೋದು ತಪ್ಪು ಎಂಬರ್ಥದ ಹೇಳಿಕೆ ನೀಡಿದ್ದಾರೆ.

ಅತ್ಯುತ್ತಮ ಪರ್ಫಾಮೆನ್ಸ್​’
ನಾನು ಕೊಹ್ಲಿಯನ್ನ ಆರ್​​ಸಿಬಿಯಲ್ಲಿದ್ದಾಗಿನಿಂದ ನೋಡಿದ್ದೇನೆ. ಅಲ್ಲಿಂದಲೇ ಕೊಹ್ಲಿಯ T20 ಜರ್ನಿ ಆರಂಭವಾಗಿದ್ದು. T20ಯಲ್ಲಿ ಭಾರತದ ಪರ ಸ್ಥಿರವಾಗಿ ಕೆಲ ವರ್ಷಗಳಿಂದ ಅತ್ಯುತ್ತಮ ಪರ್ಫಾಮೆನ್ಸ್​ ನೀಡಿದ್ದಾರೆ. ಅವರಿಂದಾಗಿ ಅನ್​ಫೀಲ್ಡ್​ನಲ್ಲಿ ತಂಡಕ್ಕೆ ಬರುವ ಅಗ್ರೆಶನ್​ ಹಾಗೂ ಆ್ಯಟಿಟ್ಯೂಡ್​ ಗೆಲುವಿಗೆ ಸಹಾಯ ಮಾಡುತ್ತದೆ -ಅನಿಲ್​ ಕುಂಬ್ಳೆ, ಮಾಜಿ ಕ್ರಿಕೆಟಿಗ

ಒಟ್ಟಿನಲ್ಲಿ, ಐಪಿಎಲ್​ಗೂ ಮುನ್ನ ಕೊಹ್ಲಿಯನ್ನ ಟಿ20 ವಿಶ್ವಕಪ್​ ತಂಡದಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿರೋದು ವಿರಾಟ್​​ ಸಾಮರ್ಥ್ಯಕ್ಕೆ ಸವಾಲ್​ ಎಸೆದಂತಿದೆ. ಈ ಸವಾಲ್​ಗೆ ಐಪಿಎಲ್​ನಲ್ಲಿ ಕೊಹ್ಲಿ ಬ್ಯಾಟ್​ನಿಂದ ಉತ್ತರಿಸ್ತಾರಾ.? ಕಾದು ನೋಡೋಣ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​​ ತಂಡದಿಂದ ಕೊಹ್ಲಿ​​ ಡ್ರಾಪ್​ಗೆ BCCI ನೀಡ್ತಿರೋ ಕಾರಣ ಏನು? ವಿರಾಟ್ ಪರ ಕುಂಬ್ಳೆ ಭರ್ಜರಿ ಬ್ಯಾಟಿಂಗ್..!

https://newsfirstlive.com/wp-content/uploads/2024/03/KOHLI-2.jpg

Load More