/newsfirstlive-kannada/media/post_attachments/wp-content/uploads/2025/04/anil-kumble.jpg)
ಬೆಂಗಳೂರು: ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 18ನೇ ಆವೃತ್ತಿಯ 34ನೇ ಪಂದ್ಯ ನಡೆಯಲಿದೆ. ಇಂದು ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ಮಧ್ಯೆ ಹಣಾಹಣಿ ಶುರುವಾಗಲಿದೆ.
ಇದನ್ನೂ ಓದಿ: ಆರ್ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಗೊತ್ತಿರಲಿ..
ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿರುವ ಆರ್ಸಿಬಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಆರ್ಸಿಬಿಯ ಅದ್ಭುತ ಆರಂಭಕ್ಕೆ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಖುಷಿ ವ್ಯಕ್ತಪಡಿಸಿದ್ದಾರೆ. ಮಹತ್ವದ ಬೆಳವಣಿಗೆ ಒಂದರಲ್ಲಿ ಇಂದು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು. ಡಿಕೆಶಿ ಭೇಟಿ ಬಳಿಕ, ಮಾಧ್ಯಮಗಳ ಜೊತೆ ಮಾತನಾಡಿದರು.
ಇದೇ ವೇಳೆ ಆರ್ಸಿಬಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರ್ಸಿಬಿ ಮುಂದೆಯೂ ಹೀಗೇ ಆಡಲಿ. 18ನೇ ಆವೃತ್ತಿಯ ಅರ್ಧ ಟೂರ್ನಿ ಕೂಡ ಇನ್ನೂ ಮುಗಿದಿಲ್ಲ. ನಮ್ಮ ಆರ್ಸಿಬಿ ಇನ್ನೂ ಬೆಂಗಳೂರಿನಲ್ಲಿ ಗೆದ್ದಿಲ್ಲ. ಈ ಬಾರಿ ಆರ್ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. 18 ವರ್ಷ ಆಗಿದೆ. ಇವತ್ತಿನ ಮ್ಯಾಚ್ಗೆ ಆಲ್ ದ ಬೆಸ್ಟ್ ಹೇಳುವೆ. ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿದ್ದೆ. ಅದೇ ಸಮಸ್ಯೆ ನನಗೆ ಎಂದಿದ್ದಾರೆ.
ಆರ್ಸಿಬಿ ಪರ 42 ಪಂದ್ಯಗಳನ್ನು ಆಡಿರುವ ಅನಿಲ್ ಕುಂಬ್ಳೆ 45 ವಿಕೆಟ್ ಪಡೆದುಕೊಂಡಿದ್ದಾರೆ. ಬೌಲಿಂಗ್ ಎಕನಾಮಿ ರೇಟ್ 6.58 ಇದೆ. ಇವರ ನಾಯಕತ್ವದ ಅಡಿಯಲ್ಲಿ 2010ರಲ್ಲಿ ಆರ್ಸಿಬಿ ಸೆಮಿ ಫೈನಲ್ ಪ್ರವೇಶ ಮಾಡಿತ್ತು. 2009ರಲ್ಲಿ ಆರ್ಸಿಬಿ ಫೈನಲ್ ಪ್ರವೇಶ ಮಾಡಿತ್ತು, ಆರ್ಸಿಬಿ ಫೈನಲ್ ಪ್ರವೇಶದ ಹಿಂದೆ ಕುಂಬ್ಳೆ ಪಾತ್ರ ಕೂಡ ಇದೆ. 2011ರಲ್ಲಿ ಕುಂಬ್ಳೆ ಮೆಂಟರ್ ಆಗಿದ್ದರು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ