ಇಂಗ್ಲೆಂಡ್ ಹಾಗೂ ಭಾರತದ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಪಂದ್ಯ ಲಾರ್ಡ್ಸ್ನಲ್ಲಿ ನಡೆಯುತ್ತಿದೆ. ಇನ್ನೇನು ಒಂದಿನದಲ್ಲಿ ಫಲಿತಾಂಶ ಹೊರ ಬೀಳಲಿದೆ. ಆದರೆ ಕನ್ನಡಿಗ ಕರಣ್ ನಾಯರ್ ಮೊದಲ ಟೆಸ್ಟ್ನಿಂದಲೂ ಬ್ಯಾಟಿಂಗ್ನಲ್ಲಿ ವಿಫಲರಾಗುತ್ತಿದ್ದಾರೆ. ಇದರ ನಡುವೆ ಕರುಣ್ ನಾಯರ್ ಪರ ಲೆಜೆಂಡರಿ ಕ್ರಿಕೆಟರ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಬ್ಯಾಟ್ ಬೀಸಿದ್ದಾರೆ.
ಮೊದಲ ಟೆಸ್ಟ್ನಿಂದಲೂ ಕನ್ನಡಿಗ ಕೆ.ಎಲ್ ರಾಹುಲ್ ಅವರು ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಿದ್ದು ಸೆಂಚುರಿ ಮೇಲೆ ಸೆಂಚುರಿ ಸಿಡಿಸಿದ್ದಾರೆ. ಆದರೆ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ದಾರೆ. ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕರುಣ್ ಕೇವಲ 4 ಬಾಲ್ಗೆ ಡಕೌಟ್ ಆಗಿದ್ದರು. 2ನೇ ಇನ್ನಿಂಗ್ಸ್ನಲ್ಲಿ 20 ರನ್ ಗಳಿಸಿದ್ದರು. ಇದಾದ ಮೇಲೆ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 31 ಹಾಗೂ 2ನೇ ಇನ್ನಿಂಗ್ಸ್ನಲ್ಲಿ 26 ರನ್ ಗಳಿಸಿ ಔಟ್ ಆಗಿದ್ದರು.
ಇದನ್ನೂ ಓದಿ: ಕಪಿಲ್ ಶರ್ಮಾ ಕೇವಲ ಕಾಮಿಡಿಯನ್ ಅಷ್ಟೇ ಅಲ್ಲ.. ನೂರಾರು ಕೋಟಿ ರೂಪಾಯಿಗಳ ಒಡೆಯ!
/newsfirstlive-kannada/media/post_attachments/wp-content/uploads/2025/06/KARUN_NAIR_KL_RAHUL.jpg)
ಇದಾದ ಮೇಲೆಯೂ ಕರುಣ್ ನಾಯರ್ ಅವರಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಲಾರ್ಡ್ಸ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಿದೆ. ಇದರ ಮೊದಲ ಇನ್ನಿಂಗ್ಸ್ನಲ್ಲಿ ಕರುಣ್ ನಾಯರ್ 40 ರನ್ಗೆ ಬ್ಯಾಟಿಂಗ್ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಕರುಣ್ ನಾಯರ್ ಅವರ ಪರವಾಗಿ ಅನಿಲ್ ಕುಂಬ್ಳೆ ಅವರು ಮಾತನಾಡಿದ್ದಾರೆ.
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕನ್ನಡಿಗನ ಬೆನ್ನಿಗೆ ನಿಂತಿದ್ದಾರೆ. ಕರುಣ್ ನಾಯರ್ ಕಮ್ಬ್ಯಾಕ್ ಸರಣಿಯಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಲಾರ್ಡ್ಸ್ ಟೆಸ್ಟ್ನಲ್ಲೂ 40 ರನ್ ಗಳಿಸಿದ್ದಾರೆ. ಕರುಣ್ ನಾಯರ್ ಔಟ್ ಆಗಿದ್ದು ವಿಶ್ವದ ಶ್ರೇಷ್ಠ ಬೌಲರ್ ಜೊಫ್ರಾ ಆರ್ಚರ್ ಬೌಲಿಂಗ್ನಲ್ಲಿ. ಇದು ಅತ್ಯುತ್ತಮ ಬೌಲಿಂಗ್ ಆಗಿದ್ದು ಜೋ ರೂಟ್ ಹಿಡಿದ ಅದ್ಭುತ ಕ್ಯಾಚ್ನಿಂದ ಕರುಣ್ ಔಟ್ ಆಗಿದ್ದಾರೆ. ಒಟ್ಟಾರೆ ಇದು ಕರುಣ್ ನಾಯರ್ ಪಾಲಿಗೆ ಒಂದು ಒಳ್ಳೆಯ ಸರಣಿ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕರುಣ್ ನಾಯರ್ಗೆ ಇದು ಒಳ್ಳೆ ಸರಣಿ.. ಕನ್ನಡಿಗನ ಬೆನ್ನಿಗೆ ನಿಂತ ಲೆಜೆಂಡರಿ ಕ್ರಿಕೆಟರ್ ಅನಿಲ್ ಕುಂಬ್ಳೆ, ಏನಂದ್ರು?

LATEST UPDATES