/newsfirstlive-kannada/media/post_attachments/wp-content/uploads/2025/06/aniruddha_DCM_DK.jpg)
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ನಟ ಅನಿರುದ್ಧ ಜಟ್ಕರ್ ಅವರು ಪತ್ರ ಬರೆದಿದ್ದಾರೆ. ರಸ್ತೆಗಳ ಡಾಂಬರೀಕರಣ, ಬೀದಿ ದೀಪಗಳ ಸಮಸ್ಯೆ ಹಾಗೂ ಕಸದ ಸಮಸ್ಯೆ ಸೇರಿದಂತೆ ಬೆಂಗಳೂರಿನ ಇತರೆ ಸಮಸ್ಯೆಗಳ ಕುರಿತು ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಇದರಿಂದ ಸಮಸ್ಯೆ ಆಗುತ್ತಿದೆ. ಇವನ್ನೆಲ್ಲಾ ಸರಿ ಪಡಿಸುವಂತೆ ಅನಿರುದ್ಧ ಜಟ್ಕರ್ ಅವರು ಪತ್ರ ಬರೆದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಳಿ ಮನವಿ ಮಾಡಿದ್ದಾರೆ. ಇದರ ಜೊತೆಗೆ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಕೆರೆಯನ್ನು ಶುದ್ಧೀಕರಿಸುವ ಬಗ್ಗೆಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತ, ಸಮಾಜ ಸೇವಕ ನಿಧನ.. ಹಾಸನದಲ್ಲಿ 6ನೇ ಬಲಿ
ಅನಿರುದ್ಧ ಅವರು ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರಿನ ನಗರದಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ದಯಮಾಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ. ಬಹುತೇಕ ರಸ್ತೆಗಳ ಡಾಂಬರೀಕರಣ ಆಗಬೇಕು. ಬೀದಿ ದೀಪಗಳ ಸಮಸ್ಯೆ, ರಸ್ತೆಗಳಲ್ಲಿ ಕಸದ ಸಮಸ್ಯೆ, ಫುಟ್ಪಾತ್ಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಬರೆದಿದ್ದಾರೆ.
ದುಸ್ಥಿತಿಯಲ್ಲಿರುವ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಕೆರೆಯನ್ನು ಶುದ್ಧೀಕರಿಸುವ ಮೂಲಕ ಜೀರ್ಣೋದ್ಧಾರ ಮಾಡಿ, ಕೆರೆಯನ್ನು ಪುನಶ್ಚೇತನ ಮಾಡಬೇಕು. ಇದರಿಂದ ಸುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ದುಸ್ಥಿತಿಯಲ್ಲಿರುವ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಸಮೀಪದ ತರಳು ಗ್ರಾಮದ ಬಳಿ ಇರುವ ಗುಳಕಮಲೆ ಕೆರೆಯನ್ನು ಜೀರ್ಣೋದ್ಧಾರ ಮಾಡಬೇಕಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ