ರಜನಿಕಾಂತ್ ಅಳಿಯನ ಜೊತೆ IPL ತಂಡದ ಓನರ್​ ಕಾವ್ಯಾ ಮಾರನ್ ಮದುವೆ ಫಿಕ್ಸ್​​..?

author-image
Bheemappa
Updated On
ರಜನಿಕಾಂತ್ ಅಳಿಯನ ಜೊತೆ IPL ತಂಡದ ಓನರ್​ ಕಾವ್ಯಾ ಮಾರನ್ ಮದುವೆ ಫಿಕ್ಸ್​​..?
Advertisment
  • ಐಪಿಎಲ್ ಬಂದರೆ ಸಾಕು ಕ್ಯಾವ್ಯಾ ಮಾರನ್ ಫುಲ್ ಫೇಮಸ್
  • ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ರಜನಿಕಾಂತ್ ಅಳಿಯ
  • ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಓನರ್​ ಕಾವ್ಯಾ ಮದುವೆ?

ಮ್ಯೂಸಿಕ್ ಕಂಪೋಸರ್​ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಅನಿರುದ್ಧ್ ರವಿಚಂದರ್ ಹಾಗೂ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಓನರ್​ ಕಾವ್ಯಾ ಮಾರನ್ ಅವರು ವಿವಾಹ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

publive-image

ಐಪಿಎಲ್​ನ ಹೈದ್ರಾಬಾದ್​ ತಂಡದ ಓನರ್​ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಮದುವೆ ಆಗಲಿದ್ದಾರೆ ಎಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪೋಸ್ಟ್​ಗಳು ವೈರಲ್ ಆಗುತ್ತಿವೆ. ಇತ್ತೀಚೆಗೆ ಈ ಇಬ್ಬರು ಡೇಟಿಂಗ್​ನಲ್ಲಿದ್ದು ಒಟ್ಟಿಗೆ ಡಿನ್ನರ್​​ನಲ್ಲಿ ಕಾಣಿಸಿಕೊಂಡ ಮೇಲೆ ಈ ಊಹಾಪೋಹಗಳು ಎಲ್ಲೆಡೆ ಹರಡುತ್ತಿವೆ ಎನ್ನಲಾಗಿದೆ.

ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ಹಾಗೂ ಸನ್ ಟಿವಿ ಮಾಲೀಕರ ಕುಟುಂಬದ ಹಾಗೂ ಐಪಿಎಲ್‌ ಎಸ್‌ಆರ್‌ಎಚ್‌ ತಂಡದ ಮಾಲಕಿ ಕಾವ್ಯಾ ಮಾರನ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಎರಡು ಕುಟುಂಬಗಳು ಆಗಲಿ ಅಥವಾ ಕಾವ್ಯಾ, ಅನಿರುದ್ಧ್ ಎಲ್ಲಿಯೂ ಇದರ ಬಗ್ಗೆ ಮಾತೇ ಆಡಿಲ್ಲ.

ಕಾವ್ಯಾ ಮಾರನ್ ಬಗ್ಗೆ ಹೆಚ್ಚು ಏನು ಹೇಳಬೇಕಿಲ್ಲ. ಐಪಿಎಲ್ ಆರಂಭವಾದರೆ ಸಾಕು ಹೈದ್ರಾಬಾದ್​ ತಂಡಕ್ಕಿಂತ ಓನರ್ ಕಾವ್ಯಾನೇ ಹೆಚ್ಚು ಪ್ರಚಾರ ಆಗುತ್ತಾರೆ. ಸಿಕ್ಸರ್​, ಬೌಂಡರಿ ಬಾರಿಸಿದಾಗ ಅವರು ಮಾಡುವ ಸೆಲೆಬ್ರೆಷನ್ ಹಾಗೂ ಹೈದ್ರಾಬಾದ್ ಸೋಲುವಾಗ ಅವರು ಮಾಡುವ ಸನ್ನೆ, ಸೂಚನೆ, ಅಳು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತಿರುತ್ತವೆ.

ಇದನ್ನೂ ಓದಿ:27 ವರ್ಷದ ಬಳಿಕ ಹರಿಣಗಳಿಗೆ ICC ಕಪ್​​​; ಪ್ಲೇಯರ್ಸ್​, ಫ್ಯಾನ್ಸ್​ ಕಣ್ಣೀರು.. ನೀಗಿತು ಆಫ್ರಿಕಾದ ಟ್ರೋಫಿ ಬರ!

publive-image

ಅದರಂತೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ರೆ ಆಸ್ಪತ್ರೆಯ ಬೆಡ್​ ಮೇಲೆ ಇರೋ ಪೇಷಂಟ್ ಕೂಡ ಡ್ಯಾನ್ಸ್ ಮಾಡಬೇಕು. ಹಾಗೇ ಇರುತ್ತೇ ಅನಿರುದ್ಧ್ ಮ್ಯೂಸಿಕ್. ಹೀಗಾಗಿಯೇ ಇವರು ರಜನಿಕಾಂತ್ ಅಭಿನಯದ ಜೈಲರ್​, ಶಾರುಖ್​ ಅವರ ಜವಾನ್, ಪೆಟ್ಟಾ, ವಿಕ್ರಮ್, ದೇವರ ಹಾಗೂ ಲಿಯೋ ಸೇರಿದಂತೆ ಹಲವಾರು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment