/newsfirstlive-kannada/media/post_attachments/wp-content/uploads/2024/05/HBL_ANJALI_CASE_NEW.jpg)
ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಕೆಲ ತಿಂಗಳಿಂದ ಅಹಿತಕರ ಘಟನೆ ನಡೆಯುತ್ತಿವೆ. ಎರಡು ತಿಂಗಳಲ್ಲಿ ಬರ್ಬರವಾಗಿ ಇಬ್ಬರು ಯುವತಿಯರ ಕೊಲೆಯಾಗಿದೆ. ಇದರ ನಡುವೆ ಹುಬ್ಬಳ್ಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದರು.
ಬಾರೀ ಸಂಚಲನ ಮೂಡಿಸಿದ ನೇಹಾ ಹತ್ಯೆ ಕೇಸ್​ನಲ್ಲಿ ಪ್ರತಿಭಟನೆಗಳಾಯ್ತು. ಆರೋಪ, ಪ್ರತ್ಯಾರೋಪಗಳಾಯ್ತು. ರಾಜ್ಯಕೀಯ ಪಕ್ಷಗಳ ಎಂಟ್ರಿಯಾಯ್ತು. ಆರೋಪಿ ಫಯಾಜ್ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳುವಂತೆ ಧರಣಿಗಳು ನದೆದವು. ಇದು ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದಲ್ಲೂ ಪ್ರತಿಭಟನೆಗಳಾಗಿವೆ. ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಕೂಡ ಮಾಡಲಾಗಿದೆ. ಆರೋಪಿ ಗಿರೀಶ್ ಕಾಲಿ​ಗೆ ಗುಂಡು ಹಾರಿಸಿ ಲಾಕ್ ಮಾಡಲಾಗಿದೆ. ಇಷ್ಟೆಲ್ಲ ಘಟನಾವಳಿಗಳ ಬೆನ್ನಲ್ಲೇ ಹತ್ಯೆಯಾದ ಯುವತಿಯರ ಮನೆಗೆ ಎಡಿಜಿಪಿ ಭೇಟಿ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/05/HBL_ANJALI_CASE.jpg)
ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಮತ್ತು ಅಂಜಲಿ ಮನೆಗೆ ಎಡಿಜಿಪಿ ಹಿತೇಂದ್ರ ಭೇಟಿ, ಕೇಸ್​​ ಬಗ್ಗೆ ಪಿನ್ ಟು ಪಿನ್ ಮಾಹಿತಿ ಪಡೆದಿದ್ದಾರೆ. ಅವಳಿ ನಗರದಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಸಂಬಂಧ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಹುಬ್ಬಳ್ಳಿಗೆ ಗೃಹಸಚಿವ ಪರಮೇಶ್ವರ್​ ಭೇಟಿ
ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷದ ಬಗ್ಗೆ ಆರೋಪಗಳು ಕೇಳಿ ಬಂದ ನಂತರ ಸರ್ಕಾರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ಬೆನ್ನಲ್ಲೇ ಇಂದು ಗೃಹಸಚಿವ ಪರಮೇಶ್ವರ್​ ಹುಬ್ಬಳ್ಳಿಗೆ ಆಗಮಿಸಿ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸಲಿದ್ದಾರೆ. ಅಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಿದ್ದಾರೆ. ಅಲ್ಲದೇ ಅಂಜಲಿ ಅಂಬಿಗೇರ್ ನಿವಾಸಕ್ಕೂ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ.
ಕೊಲೆಗೀಡಾದ ನೇಹಾ ಮತ್ತು ಅಂಜಲಿ ಮನೆಗೆ ಎಡಿಜಿಪಿ ಹಿತೇಂದ್ರ ಭೇಟಿ!
ಸದ್ಯ ಹುಬ್ಬಳ್ಳಿಯಲ್ಲಿ ನಡೆದ ಎರಡು ಹತ್ಯೆಗಳು ಜಿಲ್ಲೆ, ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೇಹಾ ಹಿರೇಮಠ್​, ಅಂಜಲಿ ಅಂಬಿಗೇರ ಕೊಲೆಗೆ ಇಡೀ ಹುಬ್ಬಳ್ಳಿ ಜನ ಬೆಚ್ಚಿಬಿದ್ದಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ಬಿಜೆಪಿ, ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಿದ್ದರು. ಇದೆಲ್ಲದರ ನಡುವೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ನೇಹಾ ಹಿರೇಮಠ್​, ಅಂಜಲಿ ಅಂಬಿಗೇರ ಮನೆಗೆ ಭೇಟಿ ಮಾಡಿದ್ದಾರೆ. ಬಳಿಕ ಅಧಿಕಾರಿಗಳೊಂದಿಗೆ ಸಭೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹು-ಧಾ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ಮಾಡಿರುವ ಎಡಿಜಿಪಿ ಆರ್.ಹಿತೇಂದ್ರ, ನೇಹಾ, ಅಂಜಲಿ ಕೇಸ್‌ನ ಪಿನ್ ಟು ಪಿನ್ ಮಾಹಿತಿ ಕೇಳಿದ್ದಾರೆ. ಅವಳಿ ನಗರದ ಕ್ರೈಂ ಮಾಹಿತಿ ಪಡೆದಿದ್ದಾರೆ. ಅವಳಿ ನಗರದಲ್ಲಿ ಇಲಾಖೆ ಕೈಗೊಂಡ ಕ್ರಮಗಳ ಸಂಬಂಧ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೊಲೆ ಮಾಡಿದ ಆರೋಪಿಗಳ ನಿಟ್ಟಿನಲ್ಲಿ ಅಪರಾಧಿಗಳ ವಿರುದ್ಧ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
‘ಇಲಾಖೆ ಕ್ರಮ ತೆಗೆದುಕೊಳ್ಳುತ್ತೆ’
ಕಳೆದ 15-20 ದಿನಗಳ ಒಳಗೆ ಇಬ್ಬರು ಯುವತಿಯರ ಕೊಲೆ ಆಗಿದೆ. ಹೀಗಾಗಿ ಇಲ್ಲಿನ ವಾತವರಣ ಸರಿಯಿಲ್ಲ. ನಮ್ಮ ಇಲಾಖೆಗೆ ಸಭೆ ಮಾಡಿ ಎಲ್ಲ ರೀತಿಯ ಸೂಚನೆಗಳನ್ನು ನೀಡಿದ್ದೇವೆ. ಅವರ ಕುಟುಂಸ್ಥರನ್ನು ಮಾತನಾಡಿಸಿದ್ದೇವೆ. ನೇಹಾ ಕೇಸ್ ಸಿಐಡಿಯಲ್ಲಿದೆ. ಹೀಗಾಗಿ ನೇಹಾ ಕೇಸ್ ತನಿಖೆ ಬಗ್ಗೆ ಹೆಚ್ಚಿಗೆ ಹೇಳೋಕೆ ಬರೋದಿಲ್ಲ.
ರಾಜ್ಯದಲ್ಲಿ 2020 ರಿಂದ 2023ಕ್ಕೆ ಹೋಲಿಕೆ ಮಾಡಿದ್ರೆ, 2024ರ ಆರಂಭದಿಂದ ಇಲ್ಲಿವರೆಗೆ ಕೊಲೆ ಕೇಸ್ ಕಡಿಮೆ ಆಗಿವೆ. ಇಲ್ಲಿನ ಎರಡು ಕೇಸ್ಗಳಿಂದ ನಮಗೂ ಕೂಡ ಬೇಜಾರ್ ಆಗಿದೆ. ಇದರ ಬಗ್ಗೆ ಹೆಚ್ಚಿನ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ.
ಆರ್.ಹಿತೇಂದ್ರ, ಎಡಿಜಿಪಿ
/newsfirstlive-kannada/media/post_attachments/wp-content/uploads/2024/04/G-Parameshwar.jpg)
ಇಂದು ಹುಬ್ಬಳ್ಳಿಗೆ ಗೃಹಸಚಿವ ಪರಮೇಶ್ವರ್​ ಭೇಟಿ
ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷದ ಬಗ್ಗೆಯೂ ಆರೋಪಗಳು ಕೇಳಿ ಬಂದ ನಂತರ ಸರ್ಕಾರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ಬೆನ್ನಲ್ಲೇ ಇಂದು ಗೃಹಸಚಿವ ಪರಮೇಶ್ವರ್​ ಹುಬ್ಬಳ್ಳಿಗೆ ಆಗಮಿಸಿ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸಲಿದ್ದಾರೆ. ಅಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಿದ್ದಾರೆ. ಅಲ್ಲದೇ ಅಂಜಲಿ ಅಂಬಿಗೇರ್ ನಿವಾಸಕ್ಕೂ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ.
ಜನಸಾಮಾನ್ಯರಿಗೆ ತೊಂದರೆ ಆದ್ರೆ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗ್ತಾರೆ. ಆದ್ರೆ ಹುಬ್ಬಳಿಯಲ್ಲಿ ಪೊಲೀಸ್ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿದ್ದಾರೆಂದು ಜನರೇ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಇಂದು ಗೃಹಸಚಿವ ಪರಮೇಶ್ವರ್ ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಹಲವು ಸೂಚನೆಗಳನ್ನೂ ನೀಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us