/newsfirstlive-kannada/media/post_attachments/wp-content/uploads/2024/11/Anjeer-Soaked-Milk.jpg)
ಅಂಜೂರದ ಹಣ್ಣುಗಳು ಅಂದ್ರೆ ಆರೋಗ್ಯಕ್ಕೆ ಮತ್ತೊಂದು ಹೆಸರು ಅಂತಲೇ ಹೇಳಲಾಗುತ್ತದೆ. ಈ ಹಣ್ಣನ್ನು ಹಾಲಿನಲ್ಲಿ ನನೆಯಿಟ್ಟು ಕುಡಿಯುವುದರಿಂದಲೂ ಕೂಡ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಇದನ್ನು ಜೀವಸತ್ವಗಳ ಪಾನೀಯ ಎಂದೇ ಬಣ್ಣಿಸಲಾಗುತ್ತದೆ. ಈ ಒಂದು ಪಾನೀಯ ಕುಡಿಯುವುದರಿಂದ ಜೀವಪೋಷಕಗಳಾದ ವಿಟಮಿನ್ ಎ, ಸಿ, ಕೆ ಹಾಗೂ ಕಾಪರ್, ಮ್ಯಾಗ್ನೇಶಿಯಂ, ಪೊಟ್ಯಾಶಿಯಂ, ಜಿಂಕ್ ಮತ್ತು ಕಬ್ಬಿಣ ಅಂಶಗಳಂತಹ ಜೀವಸತ್ವಗಳು ಸಿಗುತ್ತವೆ. ಇದು ಅತ್ಯಂತ ಕಡಿಮೆ ಕ್ಯಾಲರೀಸ್ಗಳನ್ನು ಹೊಂದಿದ್ದು ಅತಿಹೆಚ್ಚು ಫೈಬರ್ ಅಂಶಗಳನ್ನು ಹೊಂದಿದೆ. ಹೀಗಾಗಿ ತೂಕ ಇಳಿಸಬೇಕು ಎಂದುಕೊಂಡವರು ಈ ಪಾನೀಯವನ್ನು ಹೆಚ್ಚು ಸೇವಿಸುವುದು ಒಳ್ಳೆಯದು.
1 ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಉತ್ತಮ
ಅಂಜೂರ ಹಣ್ಣನ್ನು ಹಾಲಿನಲ್ಲಿ ನೆನೆಯಿಟ್ಟು ಅದನ್ನು ಹಾಲಿನೊಂದಿಗೆ ಬೆರೆಸಿ ಜ್ಯೂಸ್ ಮಾಡಿಕೊಂಡು ಮಲುಗುವ ಮುನ್ನ ಕುಡಿದರೆ ಉತ್ತಮ ನಿದ್ರೆ ನಿಮ್ಮದಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿರುವ ಅಮಿನೊ ಆಸಿಡ್ ಸೆರಾಟೊನಿನ್ ಆಗಿ ಮಾರ್ಪಡುತ್ತದೆ ಇದರಿಂದ ನಿದ್ರೆಯ ಹಾರ್ಮೋನ್ ಆದ ಮೆಲಾಟೊನಿನ್ ಹೆಚ್ಚಾಗುತ್ತದೆ. ಹೀಗಾಗಿ ನಿದ್ರೆಯ ಸಮಸ್ಯೆಗಳು ಇದರಿಂದ ದೂರವಾಗುತ್ತದೆ. ಹಾಲಿನೊಂದಿಗೆ ಅಂಜೂರ ಬೆರೆಸಿದ ಜ್ಯೂಸ್ ನಿದ್ರೆಗೆ ಮೊದಲು ಸೇವಿಸುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
2. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಒಂದು ಹೆಲ್ತ್ ಡ್ರಿಂಕ್ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲುಬು ಮತ್ತು ನಿಮ್ಮ ದಂತಗಳನ್ನು ಬಲಿಷ್ಠಗೊಳಿಸುತ್ತದೆ. ಉರಿಯೂತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ಮೆದುಳಿನ ಆರೋಗ್ಯದ ಮೇಲೆಯೂ ಧನಾತ್ಮಕ ಪರಿಣಾಮ ಬೀರುತ್ತದೆ. ಕೀಲು ನೋವು ಹಾಗೂ ಸ್ನಾಯು ಸೆಳೆತದಂತಹ ಸಮಸ್ಯೆಗಳಿಗೆ ಈ ಒಂದು ಪಾನೀಯ ರಾಮಬಾಣ ಎಂದೇ ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ:ಮಕ್ಕಳಿಗೆ ಟೈಫಾಯಿಡ್ ಜ್ವರ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
3. ಇದರಲ್ಲಿ ಇವೆ ಕಡಿಮೆ ಕ್ಯಾಲರೀಸ್
ಅಂಜೂರ ಹಣ್ಣುಗಳಲ್ಲಿ ಕಡಿಮೆ ಕ್ಯಾಲರೀಸ್ಗಳು ಇವೆ. ದಢೂತಿ ದೇಹದವರು ತೂಕ ಇಳಿಸಬೇಕು. ಮೈಭಾರ ಹಗುರ ಮಾಡಿಕೊಳ್ಳಬೇಕು ಎಂದು ಆಸೆಯಿದ್ದವರು ಈ ಹಣ್ಣಿನ ಜ್ಯೂಸ್ ಕುಡಿಯುವುದು ತುಂಬಾ ಒಳ್ಳೆಯದು. ಕ್ಯಾಲರೀಸ್ ರಹಿತವಾದ ಜೀವಪೋಷಕಗಳನ್ನು ಜೀವಸತ್ವಗಳನ್ನು ಅವು ನೀಡುತ್ತವೆ.ಕಡಿಮೆ ಕ್ಯಾಲರೀ ಇರುವ ಆಹಾರಗಳು ರುಚಿಕರವಾಗಿರುತ್ತವೆ ಹಾಗೆ ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತವೆ.
4. ಪಚನಕ್ರಿಯೆಯನ್ನು ಸರಳಗೊಳಿಸುತ್ತದೆ
ಅಂಜೂರ ಹಣ್ಣನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರಿಂದ ನಮ್ಮ ಪಚನಕ್ರಿಯೆ ತುಂಬಾ ಸರಳಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಪಚನಕ್ರಿಯೆ ಅಥವಾ ಡೈಸಿಷನ್ ಸಮಸ್ಯೆ ಇರುವವರಿಗೆ ಮೊದಲು ಸಲಹೆ ನೀಡುವುದೇ ಅಂಜೂರು ಹಣ್ಣಿನ ಜ್ಯೂಸ್ ಕುಡಿಯಿರಿ ಅಂತ. ಇದರಲ್ಲಿರುವ ಜೀವಸತ್ವಗಳು ಹಾಗೂ ಜೀವಪೋಷಕಗಳು ನಮ್ಮ ಪಚನಕ್ರಿಯೆಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ನಮ್ಮ ಪಚನಕ್ರಿಯೆಯ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ.
5 ಅಂಜೂರದಲ್ಲಿದೆ ಅತಿಹೆಚ್ಚು ಫೈಬರ್ ಅಂಶ
ಅಂಜೂರ ಹಣ್ಣಿನಲ್ಲಿ ಅತಿಹೆಚ್ಚು ಫೈಬರ್ ಅಂಶವಿದೆ. ಇದರಿಂದಾಗಿ ಸಕ್ಕರೆ ಕಾಯಿಯನ್ನು ನಿಯಂತ್ರಿಸಲು ಸಾಧ್ಯವಿದೆ. ಅತಿಹೆಚ್ಚು ಫೈಬರ್ ಅಂಶ ಹೊಂದಿರುವ ಈ ಅಂಜೂರ ಹಣ್ಣನ್ನು ಹಾಲಿನೊಂದಿಗೆ ಬೆರೆಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದ ತೂಕವನ್ನು ಇದು ನಿಯಂತ್ರಿಸುತ್ತದೆ. ಊಟಕ್ಕೂ ಕೆಲವು ಗಂಟೆಗಳ ಮೊದಲು ಇದನ್ನು ನಾವು ಸ್ನಾಕ್ಸ್ ರೂಪದಲ್ಲಿ ತಿನ್ನುವುದರಿಂದಲೂ ಕೂಡ ದೇಹಕ್ಕೆ ಹೆಚ್ಚು ಫೈಬರ್ ಅಂಶ ಹೋಗುತ್ತದೆ.
ಇದನ್ನೂ ಓದಿ:ಡಯಾಬಿಟೀಸ್ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ
ಅಂಜೂರ ಹಣ್ಣನ್ನು ಹಾಲಿನಲ್ಲಿ 4 ರಿಂದ 5 ಗಂಟೆಗಳ ಕಾಲ ನೆನೆಯಿಡಿ. ಬಳಿಕ ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ರೂಪಕ್ಕೆ ತಂದುಕೊಳ್ಳಿ. ನಂತರ ಕುದಿಸಿಟ್ಟ ಉಗುರು ಬೆಚ್ಚಗಿನ ಹಾಲಿನಲ್ಲಿ ಆ ಪೇಸ್ಟ್ ಬೆರೆಸಿಕೊಳ್ಳಿ. ಅಂಜೂರ ಹಣ್ಣು ಸಿಹಿಯಿಂದ ಕೂಡಿರುತ್ತದೆ. ಅದರಾಚೆಗೂ ಬೇಕೆಂದರೆ ಒಂದು ಎಳೆ ಕೇಸರಿಯನ್ನು ಬೆರೆಸಿ ಕುಡಿಯಿರಿ. ಇನ್ನು ಅಂಜೂರ ಹಣ್ಣನ್ನು ನೀರಿನಲ್ಲಿ ನೆನೆಯಿಟ್ಟು ಮಲಗಲು ಹೋಗುವ ಮುನ್ನ ಸೇವೆಸಿದರೂ ಕೂಡ ಉತ್ತಮ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ