newsfirstkannada.com

ಪಾಕಿಸ್ತಾನಕ್ಕೆ ಹೋದ ಅಂಜುಗೆ ಉಡುಗೊರೆಗಳ ಮಹಾಪೂರ; ಮನೆ, ಭೂಮಿ, ದುಡ್ಡು ಏನೆಲ್ಲಾ ಸಿಕ್ತು?

Share :

Published July 30, 2023 at 11:35am

Update July 30, 2023 at 11:43am

    ಭಾರತ ಬಿಟ್ಟು ಹೋದ ಅಂಜು ಲವ್‌ ಸ್ಟೋರಿಯಲ್ಲಿ ಏನಾಗ್ತಿದೆ?

    ಪಾಕಿಸ್ತಾನದ 10 ಮೊರ್ಲಾ ಜಾಗದ ಮನೆ ಗಿಫ್ಟ್ ಕೊಟ್ಟ ಉದ್ಯಮಿ

    ಅಂಜು ವೀಸಾ, ಪಾಸ್‌ಪೋರ್ಟ್‌ ರದ್ದುಗೊಳಿಸಲು ಗಂಡನ ಪಟ್ಟು

ಇಸ್ಲಾಮಾಬಾದ್: ಫೇಸ್‌ಬುಕ್‌ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹಾರಿ ಹೋಗಿರುವ ಭಾರತೀಯ ಮೂಲದ ಅಂಜುಗೆ ಉಡುಗೊರೆಗಳ ಮಹಾಪೂರವೇ ಸಿಕ್ಕಿದೆ. ಪಾಕ್‌ ಸ್ಟಾರ್ ಗ್ರೂಪ್ ಆಫ್ ಕಂಪನಿ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ದುಬಾರಿ ಗಿಫ್ಟ್‌ಗಳನ್ನು ಕೊಟ್ಟಿದ್ದಾರೆ. ಪಾಕಿಸ್ತಾನದ 10 ಮೊರ್ಲಾ ಜಾಗದ ಮನೆ ಅಂದ್ರೆ ದುಬಾರಿಯಾದ ಬಂಗಲೆಯನ್ನು ಅಂಜುಗೆ ನೀಡಲಾಗಿದೆ. ಪಾಕಿಸ್ತಾನದ PKR 50,000 ಚೆಕ್‌ ಅನ್ನು ಆಕೆ ಕೈಗೆ ಹಸ್ತಾಂತರಿಸಲಾಗಿದೆ. ಅಂಜುಳನ್ನು ಭೇಟಿಯಾಗುತ್ತಿರುವ ಪಾಕ್‌ ಉದ್ಯಮಿಯ ಸ್ನೇಹಿತರು ಅನೇಕ ಉಡುಗೊರೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ನಂಗೆ ಡಿವೋರ್ಸ್ ಕೊಟ್ಟಿಲ್ಲ.. ಬೇರೆ ವ್ಯಕ್ತಿ ಜೊತೆ ಮದ್ವೆ ಆಗಲು ಸಾಧ್ಯವೇ ಇಲ್ಲ -ಪಾಕ್​ಗೆ ಓಡಿ ಹೋಗಿರುವ ಅಂಜು ಪತಿ ಆಕ್ರೋಶ
ಪಾಕಿಸ್ತಾನದಲ್ಲಿ ನೆಲೆಸಿರುವ ಅಂಜು, ನಸ್ರುಲ್ಲಾ

ಇತ್ತೀಚೆಗೆ ರಾಜಸ್ಥಾನ ಮೂಲದ ಅಂಜು, ಪಾಕಿಸ್ತಾನದಲ್ಲಿರುವ ಫೇಸ್​ಬುಕ್ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದರು. ಪಾಕಿಸ್ತಾನಕ್ಕೆ ಹೋದ ಮೇಲೆ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನಸ್ರುಲ್ಲಾನನ್ನು ಮದುವೆ ಆಗಿದ್ದಾಳೆ ಎಂದು ಹೇಳಲಾಗಿದೆ. ಅಂಜು ಹಾಗೂ ನಸ್ರಲ್ಲಾ ಪ್ರೀತಿಯ ಪಾರಿವಾಳದಂತೆ ಓಡಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಕ್ಕಳನ್ನು ಬಿಟ್ಟು ಹೋದ ಅಂಜು ವಿರುದ್ಧ ಆಕೆಯ ಗಂಡ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ಬಿಟ್ಟು ಹೋದ ಮೇಲೆ ಅಂಜು ಲವ್‌ ಸ್ಟೋರಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಮದುವೆಯಾದ ಅಂಜು, ಫಾತಿಮಾಳಾಗಿ ಬದಲಾಗಿದ್ದಾಳೆ ಎಂದು ಹೇಳಲಾಗಿದೆ. ಇನ್ನು, ಅಂಜುಳನ್ನು ಪ್ರೀತಿಯಿಂದ ಬರಮಾಡಿಕೊಂಡಿರುವ ನಸ್ರಲ್ಲಾ ಸ್ನೇಹಿತರು, ಸಂಬಂಧಿಕರು ಭರಪೂರ ಉಡುಗೊರೆ ನೀಡುತ್ತಿರುವುದಾಗಿ ತೋರಿಸಿಕೊಳ್ಳುತ್ತಿದ್ದಾರೆ. ಪಾಕ್‌ ಉದ್ಯಮಿ ಮೊಹ್ಸಿನ್ ಖಾನ್ ಅಬ್ಬಾಸಿ ಅಂತೂ ಫಾತಿಮಾ ಪಾಕಿಸ್ತಾನದಲ್ಲಿ ಆರಾಮಾದ ಜೀವನ ನಡೆಸಲಿ ಎಂದು 10 ಮೊರ್ಲಾ ಜಾಗದ ಮನೆಯನ್ನೇ ಗಿಫ್ಟ್ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಬ್ಬಾಸಿ, ಅಂಜು ಭಾರತದಿಂದ ಬಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಲು ಈ ಉಡುಗೊರೆಗಳನ್ನು ನೀಡಲಾಗಿದೆ. ಅವರನ್ನ ಖುಷಿ ಪಡಿಸಲು ಇದೊಂದು ಸಣ್ಣ ಪ್ರಯತ್ನ ಎಂದು ತಿಳಿಸಿದ್ದಾರೆ. ಒಂದು ಊರಿನಿಂದ ಬೇರೆ ಊರಿಗೆ ಬಂದಾಗ ಮನೆಯ ಸಮಸ್ಯೆ ಎದುರಾಗುತ್ತೆ. ಹೀಗಾಗಿ ಫಾತಿಮಾ ಹೆಸರಲ್ಲೇ ಮನೆ, ಭೂಮಿಯನ್ನು ಬರೆದುಕೊಡಲಾಗಿದೆ ಎಂದಿದ್ದಾರೆ. ಅಂಜು, ನಸ್ರುಲ್ಲಾಗೆ ಅಬ್ಬಾಸಿ ಗಿಫ್ಟ್ ಕೊಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಫಾತಿಮಾ ಮುಖದಲ್ಲಿ ಸಂತಸವೇ ಕಾಣುತ್ತಿಲ್ಲ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಅಂಜು ಮಾಜಿ ಪತಿ ಅರವಿಂದ್

ವೀಸಾ, ಪಾಸ್‌ಪೋರ್ಟ್‌ ರದ್ದುಗೊಳಿಸಲು ಮನವಿ
ಅತ್ತ ಅಂಜು ಅಲಿಯಾಸ್‌ ಫಾತಿಮಾಳಿಗೆ ಮನೆ, ಹಣ ಗಿಫ್ಟ್ ಸಿಗುತ್ತಿದ್ರೆ, ರಾಜಸ್ಥಾನದಲ್ಲಿರುವ ಅಂಜು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅಂಜು ಮಾಜಿ ಪತಿ ಅರವಿಂದ್ ಅವರು ಆಕೆಯ ಪಾಸ್‌ಪೋರ್ಟ್‌, ವೀಸಾವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಂಡಿದ್ದಾರೆ. ವೀಸಾ, ಪಾಸ್‌ಪೋರ್ಟ್‌ಗೆ ಗಂಡನ ಸಹಿ ಕಡ್ಡಾಯವಾಗಿ ಬೇಕು. ಆದರೆ ಅಂಜು ಎಂದಿಗೂ ನನ್ನ ಬಳಿ ಯಾವುದೇ ಸಹಿಯನ್ನು ಪಡೆದಿಲ್ಲ. ಹೀಗಾಗಿ ಅಂಜು, ವೀಸಾ, ಪಾಸ್‌ಪೋರ್ಟ್‌ ರದ್ದುಗೊಳಿಸಲು ಅರವಿಂದ್ ಆಗ್ರಹಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

 ಇದನ್ನೂ ಓದಿ: ಆಕೆ ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ.. ಇದು ಪಾಕ್​ಗೆ ಕಾಲ್ಕಿತ್ತ ಅಂಜು ತಂದೆಯ ಮನದ ಮಾತು

ಇದನ್ನೂ ಓದಿ: ಪಾಕಿಸ್ತಾನಕ್ಕೆ ಹಾರಿ ಹೋಗಿದ್ದ ಪ್ರೀತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ‘ಅಂಜು’ ಇಸ್ಲಾಂ ಧರ್ಮಕ್ಕೆ ಮತಾಂತರ 

ಇದನ್ನೂ ಓದಿ: ನಂಗೆ ಡಿವೋರ್ಸ್ ಕೊಟ್ಟಿಲ್ಲ.. ಬೇರೆ ವ್ಯಕ್ತಿ ಜೊತೆ ಮದ್ವೆ ಆಗಲು ಸಾಧ್ಯವೇ ಇಲ್ಲ -ಪಾಕ್​ಗೆ ಓಡಿ ಹೋಗಿರುವ ಅಂಜು ಪತಿ ಆಕ್ರೋಶ

ಪಾಕಿಸ್ತಾನಕ್ಕೆ ಹೋದ ಅಂಜುಗೆ ಉಡುಗೊರೆಗಳ ಮಹಾಪೂರ; ಮನೆ, ಭೂಮಿ, ದುಡ್ಡು ಏನೆಲ್ಲಾ ಸಿಕ್ತು?

https://newsfirstlive.com/wp-content/uploads/2023/07/Pak-Anju.jpg

Load More