/newsfirstlive-kannada/media/post_attachments/wp-content/uploads/2025/05/Ankit-Bhandari-case-verdict.jpg)
ಅಂಕಿತ್ ಭಂಡಾರಿ ನಿಗೂಢ ಕೇಸ್ ಉತ್ತರಾಖಂಡ್ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಪ್ರಕರಣ. ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ ಅಂಕಿತ್ ಭಂಡಾರಿಗೆ ಚಿತ್ರಹಿಂಸೆ ಕೊಟ್ಟ ಪಾಪಿಗಳು ನಾಲೆಗೆ ತಳ್ಳಿ ಹತ್ಯೆಗೈದಿದ್ದರು. 3 ವರ್ಷದ ಬಳಿಕ ಅಂಕಿತ್ ಭಂಡಾರಿ ನಿಗೂಢ ನಾಪತ್ತೆ ಹಾಗೂ ಸಾವಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಕೋತದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.
ಅಂಕಿತ್ ಭಂಡಾರಿ ಅವರು ಪೌರಿ ಜಿಲ್ಲೆಯ ಯಮಕೇಶ್ವರದ ವನತಾರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದರು. 2022ರ ಸೆಪ್ಟೆಂಬರ್ 18ರಂದು ಅಂಕಿತ್ ಭಂಡಾರಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ ಬಳಿಕ ಚಿಲ್ಲಾ ಕಾಲುವೆಯಲ್ಲಿ ಅಂಕಿತ್ ಭಂಡಾರಿ ಅವರ ಶವ ಪತ್ತೆಯಾಗಿತ್ತು.
/newsfirstlive-kannada/media/post_attachments/wp-content/uploads/2025/05/Ankit-Bhandari-case-verdict-3.jpg)
ಅಂಕಿತ್ ಭಂಡಾರಿ ಅವರ ಹತ್ಯೆ ಕೇಸ್‌ನಲ್ಲಿ ಬಿಜೆಪಿ ನಾಯಕನ ಪುತ್ರ ಪುಲಕಿತ್ ಆರ್ಯ, ಸೌರಭ್ ಭಾಸ್ಕರ್, ಅಂಕಿತ್ ಗುಪ್ತಾ ಮೂವರು ಅಪರಾಧಿಗಳು ಎಂದು ತೀರ್ಪು ನೀಡಲಾಗಿದೆ.
ಏನಿದು ಪ್ರಕರಣ? ಕಾರಣವೇನು?
ಬಿಜೆಪಿ ನಾಯಕನ ಪುತ್ರ ಪುಲಕಿತ್ ಆರ್ಯ ಅವರು ರೆಸಾರ್ಟ್‌ಗೆ ಬರುವ ಅತಿಥಿಗಳಿಗೆ ವಿಶೇಷ ಸೇವೆ ನೀಡಬೇಕೆಂದು ಅಂಕಿತ್ ಭಂಡಾರಿ ಮೇಲೆ ಒತ್ತಾಯ ಮಾಡಿದ್ದರು. ಇದಕ್ಕೆ ಅಂಕಿತ್ ಭಂಡಾರಿ ಅವರು ಒಪ್ಪಕೊಂಡಿರಲಿಲ್ಲ. ಜೊತೆಗೆ ರೆಸಾರ್ಟ್‌ನ ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆಯುವುದಾಗಿ ಹೇಳಿದ್ದರು.
/newsfirstlive-kannada/media/post_attachments/wp-content/uploads/2025/05/Ankit-Bhandari-case-verdict-2.jpg)
ಇದರಿಂದ ಕೋಪಗೊಂಡ ಅಂಕಿತ್ ಭಂಡಾರಿಯನ್ನು ಪುಲಕಿತ್ ಆರ್ಯ ಸೇರಿ ಮೂವರು ನಾಲೆಗೆ ತಳ್ಳಿ ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ, ವ್ಯಾಪಕ ಪ್ರತಿಭಟನೆ ನಡೆದ ಬಳಿಕ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿತ್ತು. ಈ ಕೇಸ್‌ನಲ್ಲಿ 97 ಸಾಕ್ಷಿಗಳ ಪೈಕಿ 47 ಮಂದಿ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ಹೇಳಿದ್ದರು. ತನಿಖೆ ನಡೆಸಿದ್ದ ಎಸ್‌ಐಟಿ 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಇದನ್ನೂ ಓದಿ: ರೇಡ್ ಆಗುತ್ತಿದ್ದಂತೆ ಕಿಟಕಿಯಲ್ಲಿ ಕಂತೆ, ಕಂತೆ ನೋಟು ಎಸೆದ ಸರ್ಕಾರಿ ನೌಕರ; ಸಿಕ್ಕಿಬಿದ್ದಿದ್ದು ಹೇಗೆ?
ಕೋತದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ತೆ ಅಂಕಿತ್ ಭಂಡಾರಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us