ಸರ್ಕಾರಿ ಶಾಲೆಯ ಪ್ರತಿಭೆ.. SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಫಸ್ಟ್ ಬಂದ ಅಂಕಿತಾ ಕನಸು ಏನು ಗೊತ್ತಾ?

author-image
admin
Updated On
ಸರ್ಕಾರಿ ಶಾಲೆಯ ಪ್ರತಿಭೆ.. SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಫಸ್ಟ್ ಬಂದ ಅಂಕಿತಾ ಕನಸು ಏನು ಗೊತ್ತಾ?
Advertisment
  • SSLC ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾಗೆ 625ಕ್ಕೆ 625 ಅಂಕ
  • ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿರುವ ಅಂಕಿತಾ ಬಸಪ್ಪ ಕೊಣ್ಣೂರ
  • SSLCಯಲ್ಲಿ ಫಸ್ಟ್ ಬಂದಿದ್ದಕ್ಕೆ ಅಂಕಿತಾಗೆ ರಾಜ್ಯಾದ್ಯಂತ ಶುಭಾಶಯಗಳ ಮಹಾಪೂರ

ಬಾಗಲಕೋಟೆ: 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ರಿಸಲ್ಟ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ಕೊಣ್ಣೂರ ರಾಜ್ಯಕ್ಕೆ ಫಸ್ಟ್‌ ಬಂದು ಎಲ್ಲರ ಗಮನ ಸೆಳೆದಿದ್ದಾರೆ.

ಮುಧೋಳ ತಾಲ್ಲೂಕು ವಜ್ಜರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಅಂಕಿತಾ, ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿರುವ ಅಂಕಿತಾ 625ಕ್ಕೆ 625 ಅಂಕ ಪಡೆದಿದ್ದಾರೆ.

ಇದನ್ನೂ ಓದಿ:625/625 ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್.. SSLC ಟಾಪರ್ಸ್‌ಗಳ ಪಟ್ಟಿ ಇಲ್ಲಿದೆ 

ಅಂಕಿತಾ ಬಸಪ್ಪ ಕಣ್ಣೂರ ರಾಜ್ಯಕ್ಕೆ ಫಸ್ಟ್ ಬಂದಿರೋದಕ್ಕೆ ಇಡೀ ಬಾಗಲಕೋಟೆ ಜಿಲ್ಲೆಯಲ್ಲೇ ಸಂತಸ ಮನೆ ಮಾಡಿದೆ. ತಂದೆ, ತಾಯಿ ಅಂಕಿತಾ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡಿದ್ದಾರೆ. ರಾಜ್ಯಕ್ಕೆ ಫಸ್ಟ್ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಅಂಕಿತಾ, ಭವಿಷ್ಯದಲ್ಲಿ ಐಎಎಸ್ ಮಾಡುವ ಕನಸು ಕಂಡಿದ್ದಾರೆ.

publive-image

ವಜ್ಜರಮಟ್ಟಿ ಗ್ರಾಮದಲ್ಲಿರುವ ಅಂಕಿತಾ ನಿವಾಸಕ್ಕೆ ಹಲವಾರು ಮಂದಿ ಆಗಮಿಸಿ ಶುಭಾಶಯಗಳನ್ನು ಕೋರಿದ್ದಾರೆ. ಬಡತನದಲ್ಲಿ ಕಷ್ಟಪಟ್ಟು ಓದಿರುವ ಅಂಕಿತಾ ಅವರ ಸಾಧನೆ ಇಡೀ ರಾಜ್ಯವೇ ಹೆಮ್ಮೆ ಪಡುವಂತಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಂಕಿತಾ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.


">May 9, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment