ರಾತ್ರಿಯಿಡೀ ನಿದ್ದೆಗೆಟ್ಟು ಓದಿಲ್ಲ.. 625/625 ಪಡೆದ SSLC ಟಾಪರ್‌ ಅಂಕಿತಾ ಹೇಳಿದ್ದೇನು ಗೊತ್ತಾ?

author-image
Veena Gangani
Updated On
SSLC ಪರೀಕ್ಷೆಯಲ್ಲಿ ಫಸ್ಟ್.. ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ
Advertisment
  • 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು
  • ರಾಜ್ಯಕ್ಕೆ ಫಸ್ಟ್‌ ಬಂದು ಎಲ್ಲರ ಗಮನ ಸೆಳೆದ ಬಾಗಲಕೋಟೆ ವಿದ್ಯಾರ್ಥಿನಿ
  • ರಾತ್ರಿಯಿಡೀ ನಿದ್ದೆಗೆಟ್ಟು ಓದಿಲ್ಲ ಎಂದ ಅಂಕಿತಾ ಬಸಪ್ಪ ಯಶಸ್ಸು ಸಾಧಿಸಿದ್ದು ಹೇಗೆ?

ಬಾಗಲಕೋಟೆ: 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಅವರು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಅದರಲ್ಲೂ 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ ಅನ್ನೋ ಹೆಗ್ಗಳಿಕೆಗೆ ಅಂಕಿತಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ರೈತನ ಮಗ SSLCಯಲ್ಲಿ ರಾಜ್ಯಕ್ಕೇ ದ್ವಿತೀಯ.. ತಂದೆಗೆ ಖುಷಿಯೋ ಖುಷಿ

ಬಾಗಲಕೋಟೆಯ ಅಂಕಿತಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಎಸ್ಎಸ್ಎಲ್​ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಬಂದಿದೆ. ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಬಂದಿದೆ. ಇನ್ನೂ ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ತವರು ಜಿಲ್ಲೆ 3ನೇ ಸ್ಥಾನ ಶಿವಮೊಗ್ಗ ಜಿಲ್ಲೆ ಪಡೆದುಕೊಂಡಿದೆ. ಈ ಬಾರಿ 8.59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಟಾಪರ್ ಅಂಕಿತಾ ಮೊದಲನೆಯಾದಾಗಿ ತುಂಬಾ ಖುಷಿಯಾಗುತ್ತಿದೆ. 99% ನಾನು ಫಸ್ಟ್ ಬರುತ್ತೇನೆ ಅಂತ ಅಂದುಕೊಂಡಿದ್ದೆ. ಹಾರ್ಡ್ ಸ್ಟಡಿ ಮಾಡೋದು ಅವಶ್ಯಕತೆ ಇಲ್ಲ. ಹಾರ್ಡ್ ಜೊತೆಗೆ ಸ್ಮಾರ್ಟ್ ಆಗಿಯೂ ಸ್ಟಡಿ ಮಾಡಬೇಕು. ನಾನೇನು ರಾತ್ರಿಯಿಡೀ ನಿದ್ದೆಗೆಟ್ಟು ಓದಿಲ್ಲ. ಓದುವ ಸಮಯದಲ್ಲಿ ಓದುವ ವಿಷಯವನ್ನು ಕ್ಲಾರಿಟಿಯಾಗಿ ಇಟ್ಟುಕೊಳ್ಳಬೇಕು. ಬೇರೆ ಕಡೆ ಗಮನ ಹರಿಯದಂತೆ ನೋಡಿಕೊಳ್ಳಬೇಕು. ಜಸ್ಟ್ ಓದಿನ ಬಗ್ಗೆ ಫೋಕಸ್ ಆಗಿರಬೇಕು. 10 ಗಂಟೆ, 14 ಗಂಟೆ ಓದುವ ಅಗತ್ಯ ಏನೂ ಇಲ್ಲ ಅನ್ಸುತ್ತೆ. ಮನೆಯವ್ರಂತೂ ತುಂಬಾನೇ ಹೆಲ್ಪ್ ಮಾಡಿದ್ದಾರೆ. ಮೊರಾರ್ಜಿ ಶಾಲೆ ಶಿಕ್ಷಕರು ಪ್ರತಿಕ್ಷಣ ಮೋಟಿವೇಶನ್ ಮಾಡಿದ್ರು. ನಾನು‌ ಮೊರಾರ್ಜಿ ವಸತಿ ಶಾಲೆಯಲ್ಲಿ ಓದಿದ್ದು. ಹೀಗಾಗಿ ಎಲ್ಲರ ಬೆಂಬಲ ಸಿಕ್ತು. ಎಲ್ಲರ ಸಹಕಾರದಿಂದ ಇಷ್ಟು ಸಾಧನೆ ಮಾಡಿದ್ದೀನಿ. ಮುಂದೆ ಸೈನ್ಸ್ ಮಾಡಿ ಐಎಎಸ್ ಓದಿ ಸಮಾಜ ಸೇವೆ ಮಾಡಬೇಕೆಂಬ ಗುರಿ ಇದೆ. ನನಗೆ ಇದರ ಬಗ್ಗೆ ಸ್ವಲ್ಪ ಜ್ಞಾನ ಅಂತೂ ಇದೆ. ಅದನ್ನು ಇನ್ನೂ ಇಂಪ್ರೂವ್ ಮಾಡಿಕೊಂಡು ಸಮಾಜಕ್ಕಾಗಿ ದುಡಿಯಬೇಕೆಂದು ಅಂದುಕೊಂಡಿದ್ದೇನೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment