/newsfirstlive-kannada/media/post_attachments/wp-content/uploads/2025/02/ANKLET-SOUND.jpg)
ಭಾರತದೇಶದಲ್ಲಿ ನದಿಗಳಿಗೆ ತಾಯಿಯ ಸ್ಥಾನ ನೀಡಲಾಗಿದೆ. ಅದು ಮಾತ್ರವಲ್ಲ ಒಂದೊಂದು ನದಿಗಳ ಹಿಂದೆ ಒಂದೊಂದು ಕಥೆಯೂ ಕೂಡ ಅಡಗಿದೆ. ಋಷಿ ಮುನಿಗಳಿಂದ ಹಿಡಿದು ದೇವಾದಿದೇವತೆಗಳವರೆಗೂ ದೇಶದ ಪ್ರತಿಯೊಂದು ನದಿಯ ನಂಟನ್ನು ಹೊಂದಿವೆ. ಅವು ಇಂದಿಗೂ ಕೂಡ ಪ್ರಚಲಿತದಲ್ಲಿವೆ.
ಅಂತಹ ಪ್ರಮುಖ ನದಿಗಳಲ್ಲೊಂದು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹರಿಯುವ ತೀಸ್ತಾ ನದಿ. ಈ ಒಂದು ನದಿ ಡಾರ್ಜಲಿಂಗ್, ಪಶ್ಚಿಮ ಬಂಗಾಳ ಸೇರಿ ಹಲವು ಕವಲುಗಳಲ್ಲಿ ಹರಿಯುತ್ತದೆ. ಆದ್ರೆ ಪಶ್ಚಿಮ ಬಂಗಾಳದ ಒಂದು ಕಡೆ ನದಿಯಿಂದ ಗೆಜ್ಜೆ ಶಬ್ದ ಕೇಳಿ ಬರುತ್ತದೆ. ಇದನ್ನು ಗುಂಗುರು ಭಜಾನೆವಾಲೆ ನದಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಗುಂಗುರು ಅಂದ್ರೆ ಗೆಜ್ಜೆ ಎಂದು ಅರ್ಥ. ಹೀಗಾಗಿ ಈ ನದಿಯನ್ನು ಗೆಜ್ಜೆನಾದದ ನದಿ ಎಂದು ಕರೆಯುತ್ತಾರೆ.
ಬಂಗಾಳದ ಆ ಪ್ರದೇಶದ ಸ್ಥಳೀಯರು ಹೇಳುವ ಪ್ರಕಾರ ಸೂರ್ಯ ಮುಳುಗಿದ ಮೇಲೆ ಈ ನದಿಯಿಂದ ಗೆಜ್ಜೆಯ ಸದ್ದು ಕೇಳಿ ಬರುತ್ತದೆ ಹೀಗಾಗಿ ಇಲ್ಲಿಯ ಜನರು ಆ ನದಿಯ ಹತ್ತಿರ ಸಂಜೆಯ ಹೊತ್ತಲ್ಲಿ ಅಪ್ಪಿತಪ್ಪಿಯೂ ಕೂಡ ಹಾಯುವುದಿಲ್ಲವಂತೆ. ಅದು ಮಾತ್ರವಲ್ಲ, ಹೀಗೆ ಗೆಜ್ಜೆ ಸದ್ದಿನ ಹಿಂದೆ ಒಂದು ಪ್ರೇಮ ಕಥೆಯೂ ಕೂಡ ಅಡಗಿದೆ ಎಂದು ಇಲ್ಲಿಯ ಜನರು ಹೇಳುತ್ತಾರೆ. ನದಿಯಿಂದ ಹೊರಹೊಮ್ಮುವ ಆ ಗೆಜ್ಜೆಯ ನಾದ ಒಬ್ಬಳು ಪ್ರೇಯಿಸಿಯ ಕಾಲಿನಲ್ಲಿರುವ ಗೆಜ್ಜೆಯ ಧ್ವನಿ ಎಂದು ಕೂಡ ಹೇಳುತ್ತಾರೆ.
ಇದನ್ನೂ ಓದಿ:37 ಗಂಟೆ, 1950 ಕಿಲೋ ಮೀಟರ್ ; ಬೆಂಗಳೂರಿನ ಈ ಬಸ್ ದೇಶದಲ್ಲೇ ಸುದೀರ್ಘ ಪ್ರಯಾಣ ಮಾಡುತ್ತೆ! ಎಲ್ಲಿಂದ, ಎಲ್ಲಿಗೆ?
ಪಶ್ಚಿಮ ಬಂಗಾಳದಲ್ಲಿರುವ ಪ್ರಚಲಿತ ಕತೆಯ ಪ್ರಕಾರ ಒಂದು ಕಾಲದಲ್ಲಿ ಒಂದು ಊರಿನ ಜಮೀನ್ದಾರ ಆಕೆಯ ಮಗಳನ್ನು ಪ್ರೀತಿಸುತ್ತಿದ್ದ ಹುಡುಗನನ್ನು ಹತ್ಯೆ ಮಾಡಿ ಇದೇ ತೀಸ್ತಾ ನದಿಯಲ್ಲಿ ಎಸೆದಿದ್ದನಂತೆ.ಅದೆಷ್ಟೋ ದಿನವಾದರು ತನ್ನ ಪ್ರೀಯತಮ ಬರದದ್ದನ್ನು ಕಂಡ ಪ್ರೇಮಿಕೆ ಇದೇ ತೀಸ್ತಾ ನದಿಯ ತೀರದಲ್ಲಿ ಅವನಿಗಾಗಿ ಕಾಯುತ್ತಾ ಅಲೆದಾಡಲು ಶುರು ಮಾಡಿದಳು ಮತ್ತು ಅಲ್ಲಿಯೇ ಅಸುನೀಗಿದಳು. ಸ್ಥಳೀಯರು ಹೇಳುವ ಪ್ರಕಾರ, ಆ ಪ್ರೇಯಸಿಯ ಕಾಲಲ್ಲಿರುವ ಗೆಜ್ಜೆಯ ಸದ್ದೇ ಇಂದಿಗೂ ಕೂಡ ಕೇಳಿ ಬರುತ್ತದೆಯಂತೆ. ಅವಳು ಇಂದಿಗೂ ತನ್ನ ಪ್ರಿಯತಮನಿಗಾಗಿ ಸಂಜೆಯ ವೇಳೆ ಹುಡುಕಾಡುತ್ತಾ ನದಿಯ ತೀರದಲ್ಲಿ ಅಲೆಯುತ್ತಾಳಂತೆ.
ಇದನ್ನೂ ಓದಿ:60 ಕೋಟಿಯನ್ನು ದಾಟಿದ ಭಕ್ತರ ದಂಡು.. ಮಹಾಕುಂಭಮೇಳಕ್ಕೆ ವೈಭವದ ತೆರೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ!
ವಿಜ್ಞಾನಿಗಳು ಹೇಳುವ ಪ್ರಕಾರ ಈ ಗೆಜ್ಜೆಯ ಸದ್ದಿನಂತ ಶಬ್ದ ಕೇಳಿ ಬರಲು ಕಾರಣ ಆ ಪ್ರದೇಶದಲ್ಲಿ ನದಿ ವಿಪರೀತ ವೇಗವಾಗಿ ಹರಿಯುತ್ತದೆ ಮತ್ತು ಅದಕ್ಕೆ ಗಾಳಿಯೂ ಕೂಡ ಅಷ್ಟೇ ಸ್ಪರ್ಧೆಯನ್ನೊಡ್ಡುತ್ತದೆ. ನದಿಯ ವೇಗ ಹಾಗೂ ಗಾಳಿ ಬಲವಾದ ಬೀಸುವಿಕೆಯ ಪರಿಣಾಮದಿಂದಾಗಿ ಈ ರೀತಿಯ ಸದ್ದು ಕೇಳಿ ಬರುತ್ತದೆ ಎನ್ನುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ