ನಿರಂತರ ಕಾರ್ಯಾಚರಣೆಯ ನಡುವೆಯೂ ಅರ್ಜುನ ಪತ್ತೆಯೇ ಆಗಿಲ್ಲ
ಅತ್ಯಾಧುನಿಕ ಉಪಕರಣಗಳು, ಸೇನಾಪಡೆ 9 ದಿನಗಳ ಮಹಾಸಾಹಸ
ಟ್ರಕ್ ಪತ್ತೆಯಾದ ಮೇಲೂ ಅರ್ಜುನ ಪತ್ತೆ ಬಗ್ಗೆ ಇದೆ ಇನ್ನೂ ಆತಂಕ
ಕಾರವಾರ: ಕಳೆದ 9 ದಿನಗಳಿಂದಲೂ ಶಿರೂರು ಗುಡ್ಡ ಕುಸಿತ ರಾಜ್ಯಾದ್ಯಂತ ಮಾತ್ರವಲ್ಲ ದೇಶಾದ್ಯಂತವೂ ಭಾರೀ ಚರ್ಚೆಗೆ ಕಾರಣವಾಗಿದೆ. ಶಿರೂರು ಗುಡ್ಡ ಕುಸಿದು ಬಿದ್ದು ಅಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿ 9 ದಿನಗಳು ಕಳೆದಿವೆ. ಆದರೂ ಕೂಡ ಇನ್ನೂ ಕಾರ್ಯಾಚರಣೆ ಸಾಗುತ್ತಲೇ ಇದೆ. ಇಡೀ ರಕ್ಷಣಾ ಕಾರ್ಯಾಚರಣೆಗೆ ಆಪರೇಷನ್ ಅರ್ಜುನ್ ಅಂತಲೇ ಹೆಸರಿಟ್ಟು ನಿರಂತರ ಮಳೆ ಗಾಳಿಯ ನಡುವೆಯೇ ಕಾರ್ಯಾಚರಣೆ ನಡೆದಿದೆ ಆದ್ರೆ ಅರ್ಜುನ ಮಾತ್ರ ಪತ್ತೆಯಾಗುತ್ತಿಲ್ಲ.
ಕೇರಳದ ಕೋಳಿಕೋಡ್ನ ಕನ್ನಡಿಕಾಲ್ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಶಿರೂರು ಗುಡ್ಡ ಕುಸಿದ ವೇಳೆ ಮಣ್ಣಿನೊಂದಿಗೆ ಗಂಗಾವಳಿ ನದಿಯೊಳಕ್ಕೆ ಟ್ರಕ್ ಸಮೇತ ಕೊಚ್ಚಿಕೊಂಡು ಹೋಗಿದ್ದು ನದಿಯಲ್ಲಿಯೇ ಎಲ್ಲಿಯೋ ಟ್ರ್ಯಾಪ್ ಆಗಿರುವ ಸಾಧ್ಯತೆ ಇದೆ ಅನ್ನೋ ಸಂಶಯವನ್ನು ಶೋಧ ಕಾರ್ಯಾಚರಣೆ ತಂಡ ವ್ಯಕ್ತಪಡಿಸುತ್ತಿದೆ. ಆದ್ರೆ ಅರ್ಜುನ ಎಲ್ಲಿ ಅನ್ನೋ ಸ್ಪಷ್ಟ ಗುರುತು ಇನ್ನೂ ಕೂಡ ಕಂಡು ಬಂದಿಲ್ಲ
ಈಗಾಗಲೇ ಶಿರೂರು ಗುಡ್ಡ ಅವಘಡದ ರಕ್ಷಣಾ ಕಾರ್ಯಾಚರಣೆಗೆ ಅನೇಕ ಅತ್ಯಾಧುನಿಕ ಉಪಕರಣಗಳು ರಕ್ಷಣಾ ತಂಡಕ್ಕೆ ನೀಡಲಾಗಿದೆ. ಸೇನೆಯಿಂದಲೂ ಕೂಡ ಹೊಸ, ಹೊಸ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ. ಸದ್ಯ ಶೋಧನಾ ತಂಡ ಹೇಳುವ ಪ್ರಕಾರ ಟ್ರಕ್ ಹೆಚ್ಚು ಕಡಿಮೆ ನದಿಯ ದಡದಿಂದ 20 ಮೀಟರ್ನಷ್ಟು ದೂರ ಹಾಗೂ ಐದು ಮೀಟರ್ನಷ್ಟು ನದಿಯ ಆಳದಲ್ಲಿ ಸಿಲುಕಿಕೊಂಡಿರಬಹುದು ಅನ್ನೋ ಸಂಶಯ ವ್ಯಕ್ತಪಡಿಸುತ್ತಿದೆ. ಇಂತಹ ಸವಾಲಿನ ರಕ್ಷಣಾ ಕಾರ್ಯವನ್ನು ಮಾಡಲು ನೌಕಾದಳದ ಸೇನೆಯ ಪರಿಣಿತ ಪಡೆಯೇ ಬೇಕು. ಹೀಗಾಗಿ ಸ್ಥಳದಲ್ಲಿ ಈಗಾಗಲೇ ನೌಕಾಪಡೆಯ ಶೋಧಕ ತಂಡ ಬೀಡು ಬಿಟ್ಟಿದೆ.
ಯಾರು ಈ ಅರ್ಜುನ..? ಚಹಾ ಕುಡಿಯಲು ನಿಲ್ಲಿಸಿದ್ದೇ ಮಹಾಪ್ರಮಾದವಾಯ್ತಾ?
ಕೇರಳ ಮೂಲದ ಅರ್ಜುನ, ಭಾರತ್ ಬೆಂಜ್ ಟ್ರಕ್ನಲ್ಲಿ 40 ಟನ್ ಮರದ ದಿಣ್ಣೆಗಳನ್ನು ತುಂಬಿಸಿಕೊಂಡು ಬೆಳಗಾವಿಯಿಂದ ಕೋಳಿಕೋಡ್ಗೆ ಹೊರಟಿದ್ದ. ಒಂದು ಕಪ್ ಟೀ ಕುಡಿಯೋಣ ಅಂತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ರಕ್ ನಿಲ್ಲಿಸಿದ್ದ. ಇದೇ ವೇಳೆ ಭೀಕರ ಘಟನೆ ನಡೆದು ಹೋಗಿದೆ. ಟ್ರಕ್ ಸಮೇತವಾಗಿ ಅರ್ಜುನ ಕೊಚ್ಚಿಕೊಂಡು ಹೋಗಿದ್ದಾನೆ ಗುಡ್ಡ ಕುಸಿತವಾದಾಗ. ಶಿರೂರು ಗುಡ್ಡದಲ್ಲಿ ಈಗಾಗಲೇ ಹಲವು ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ನಡೆದಿದೆ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಈಗಾಗಲೇ ಹಲವು ಶವಗಳನ್ನು ಆಚೆ ತೆಗೆಯಲಾಗಿದೆ. ಕಳೆದ ಒಂದು ವಾರದಿಂದ ರೆಡಾರ್ ಹಾಗೂ ಅರ್ಥ್ಮೂವಿಂಗ್ ಮಷಿನ್ಗಳಿಂದ ಗಂಗಾವಳಿ ನದಿಯಲ್ಲಿ ಆಪರೇಷನ್ ಅರ್ಜುನ ನಡೆದಿದೆ. ಡ್ರೋನ್ ಹಾಗೂ ಆಬ್ಜೆಕ್ಟಿವ್ ಡಿಟೆಕ್ಟರ್ಗಳಂತ ಅಂತ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಟ್ರಕ್ ಇರುವ ಜಾಗವನ್ನು ಪತ್ತೆ ಮಾಡಲಾಗಿದೆ.
ಇದನ್ನೂ ಓದಿ: ಎದೆ ನಡುಗಿಸುವ ದೃಶ್ಯ.. ಬ್ರಿಡ್ಜ್ ಮೇಲೆ ಕಾರ್ ನಿಲ್ಲಿಸಿ ಸಮುದ್ರಕ್ಕೆ ಜಿಗಿದ ಟೆಕ್ಕಿ.. ಆಮೇಲೇನಾಯ್ತು?
ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳುವ ಪ್ರಕಾರ, ನೀರಿನ ಆಳದಲ್ಲಿ ಟ್ರಕ್ ಇರುವುದು ಬುಧವಾರ ಸಂಜೆ 3.25ಕ್ಕೆ ಗೊತ್ತಾಗಿದೆ. ಸದ್ಯ ಸೇನಾ ತಂಡ ಸ್ಥಳಕ್ಕೆ ಬಂದಿದ್ದು ನೀರಿನಲ್ಲಿರುವ ಟ್ರಕ್ನ್ನು ಹೇಗೆ ತಲುಪಬೇಕು ಅನ್ನೋದರ ಪಕ್ಕಾ ಪ್ಲ್ಯಾನ್ ಹಾಕುತ್ತಿದೆ ಸೇನಾ ತಂಡ. ಅದು ಅಲ್ಲದೇ ಕೇವಲ ಸೇನಾ ತಂಡಕ್ಕೆ ಮಾತ್ರ ನೀರಿನಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲು ಅವಕಾಶ ಮಾಡಲಾಗಿದೆ.
ಇಷ್ಟೆಲ್ಲಾ ಆದರೂ ಇನ್ನೂ ಹಲವು ಪ್ರಶ್ನೆಗಳು ಉಳಿದುಕೊಂಡಿವೆ. ಅದು ಅರ್ಜುನ ಟ್ರಕ್ನಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದನಾ. ಒಂದು ಊಹೆಯ ಪ್ರಕಾರ, ಗುಡ್ಡ ಕುಸಿತವಾದ ವೇಳೆ ಅರ್ಜುನ ಟ್ರಕ್ನ ಕ್ಯಾಬಿನ್ ಒಳಗಡೆ ಮಲಗಿದ್ದ. ಹಾಗೆನೇದಾರೂ ಆಗಿದ್ರೆ, ಅರ್ಜುನ ಕೂಡ ಟ್ರಕ್ ಸಮೇತ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಹಾಗೂ ಅರ್ಜುನ ದೇಹ ಟ್ರಕ್ನಲ್ಲಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಅರ್ಜುನ ಟೀ ಕುಡಿಯಲು ಅಂತ ಟ್ರಕ್ನ ಇಂಜಿನ್ ಆನ್ ಇಟ್ಟು ಆಚೆ ಬಂದಿದ್ದರೆ ಆಗ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು ಆತನನ್ನು ಪತ್ತೆ ಹಚ್ಚುವುದು ರಕ್ಷಣಾ ಪಡೆಗೆ ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: VIDEO: ಶಿರೂರಿನಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ ಕೊನೆಯ ವಿಡಿಯೋ ಇಲ್ಲಿದೆ
ಮುಂದಿನ ದಾರಿ ಏನು…?
ಭೀಕರ ಹರಿವಿನ ನಡುವೆಯೂ ಟ್ರಕ್ ಈಗಿರುವ ಜಾಗ ಬಿಟ್ಟು ಕದಲದಂತೆ ನೋಡಿಕೊಳ್ಳುವುದು
ನದಿ ತೀರದಿಂದ ದೂರ ಟ್ರಕ್ ಹೋಗದಂತೆ ನೋಡಿಕೊಳ್ಳುವುದು
ಅರ್ಜುನ ಟ್ರಕ್ ಕ್ಯಾಬೀನ್ನಲ್ಲಿಯೇ ಇದ್ದಾನಾ ಇಲ್ವಾ ಪತ್ತೆ ಹಚ್ಚುವುದು
ರಕ್ಷಣಾ ತಂಡದ ಮುಂದಿರುವ ಸವಾಲುಗಳೇನು?
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶೋಧ ಕಾರ್ಯ ವಿಳಂಬ
ನದಿಯಲ್ಲಿ ನೀರನ ಮಟ್ಟ ಮತ್ತೆ ಏರಿಕೆಯಾಗಿ ಸೆಳೆತ ಹೆಚ್ಚಾಗುವ ಭಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ