newsfirstkannada.com

ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ

Share :

Published July 25, 2024 at 9:03am

Update July 25, 2024 at 9:07am

    ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 9 ದಿನಗಳು

    ಲಾರಿ ಚಾಲಕ ಸೇರಿ ಮೂವರಿಗಾಗಿ ನದಿಯಲ್ಲಿ ತೀವ್ರ ಹುಡುಕಾಟ

    ಪೊಕ್ ಲೈನ್ ತರಿಸಿ ಕಾರ್ಯಾಚರಣೆ.. ಲೋಹದ ವಸ್ತು ನದಿಯಲ್ಲಿ ಪತ್ತೆ

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಇಂದು ಕಾರ್ಯಾಚರಣೆಗೆ ದೆಹಲಿಯ ತಜ್ಞರ ತಂಡ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ದೆಹಲಿ ತಜ್ಞರ ಆಗಮನ

ದೆಹಲಿ ತಜ್ಞರ ತಂಡ ಅತ್ಯಾಧುನಿಕ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸಲಿದ್ದಾರೆ. ನೌಕಾದಳ, ಭೂ ಸೇನೆ ಜಂಟಿಯಾಗಿ ಸ್ಥಳದಲ್ಲಿ ಕಾರ್ಯಾಚರಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಗಾಳಿಮಳೆ, ಅತಿಥಿಯಾಗಿ ಬಂದಿದ್ದ ಬಾಲಕನ ಮೇಲೆ ತಡೆಗೋಡೆ ಕುಸಿದು ಸಾವು

ನದಿಯಲ್ಲಿ ಲಾರಿ ಪತ್ತೆ

ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 9 ದಿನಗಳು. ನಾಪತ್ತೆಯಾದ ಮೂವರಿಗೆ ಹುಡುಕಾಟ ನಡೆಯುತ್ತಲೇ ಇದೆ. ಬುಧವಾರದಂದು ಕಾರ್ಯಾಚರಣೆ ವೇಳೆ ಲಾರಿ ನದಿಯಲ್ಲಿ ಇರುವುದು ಪತ್ತೆಯಾಗಿದ್ದು, ಗುಡ್ಡ ‌ಕುಸಿತವಾದಾಗ ನದಿಯಲ್ಲಿ ಲಾರಿ ಬಿದ್ದಿತ್ತು ಎನ್ನಲಾಗಿತ್ತು. ಈ‌ ಹಿನ್ನಲೆಯಲ್ಲಿ‌ ನಿನ್ನೆ ನದಿಗೆ ಬಿದ್ದಿದ್ದ ಮಣ್ಣು ತೆಗೆಯಲು ಸಿಬ್ಬಂದಿಗಳು ಮುಂದಾಗಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಗೋವಿಂದ.. ಗೋವಿಂದ, 187 ಕೋಟಿ ಗೋವಿಂದ.. ಸರ್ಕಾರದ ವಿರುದ್ಧ ಕೇಸರಿ ಪಡೆಯ ಅಹೋರಾತ್ರಿ ಧರಣಿ

ನೀರಿನಲ್ಲಿ ತೇಲಿ ಹೋದ ಕಟ್ಟಿಗೆಗಳು

ಶಾಸಕ ಸತೀಶ್ ಸೈಲ್ ಗೋಕಾಕ್ ನಿಂದ ಪೊಕ್ ಲೈನ್ ತರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಪೊಕ್ ಲೈನ್ ಸಿಬ್ಬಂದಿ ನಾಲ್ಕು ಬದಿ ಲೋಹದ ವಸ್ತು ನದಿಯಲ್ಲಿ ಇದೆ ಎಂದು ಖಚಿತ ಪಡೆಸಿದ್ದಾರೆ. ಇದೇ ವೇಳೆ ಮಣ್ಣು ಅಲುಗಾಡಿಸಿದಾಗ ಲಾರಿಯಲ್ಲಿದ್ದ ಅಕೇಶಿಯಾ ಕಟ್ಟಿಗೆಗಳು ನೀರಿನಲ್ಲಿ ತೇಲಿ ಹೋಗಿವೆ. ಅಂಕೋಲಾದ ಅಗ್ರಗೋಣ ಬಳಿ ಲಾರಿಯಲ್ಲಿದ್ದ ಅಕೇಶಿಯಾ ಕಟ್ಟಿಗೆ ಪತ್ತೆಯಾಗಿದೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಇರುವಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್​​

ಕೇರಳ ಮೂಲದ ಭಾರತ್ ಬೆಂಜ್ ಲಾರಿ ಹಾಗೂ ಚಾಲಕ ಅರ್ಜುನ್ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದರು. ಇದರ ಜೊತೆಗೆ ಜಗನ್ನಾಥ್, ಲೋಕೆಶ್ ದೇಹ ಹುಡುಕಾಟಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ

https://newsfirstlive.com/wp-content/uploads/2024/07/Shirur-1.jpg

Load More