Advertisment

ಶಿರೂರು ಗುಡ್ಡ ಕುಸಿತದಲ್ಲಿ ತುಂಬಾ ಸಾವು, ನೋವು.. ಮೃತರ ಸಂಖ್ಯೆ 12ಕ್ಕೆ ಏರಿಕೆ ಸಾಧ್ಯತೆ.. ಆಗಿದ್ದೇನು..

author-image
Ganesh
Updated On
ಶಿರೂರು ಗುಡ್ಡ ಕುಸಿತದಲ್ಲಿ ತುಂಬಾ ಸಾವು, ನೋವು.. ಮೃತರ ಸಂಖ್ಯೆ 12ಕ್ಕೆ ಏರಿಕೆ ಸಾಧ್ಯತೆ.. ಆಗಿದ್ದೇನು..
Advertisment
  • ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತದಲ್ಲಿ ಸಾವು ಏರಿಕೆ ಸಾಧ್ಯತೆ
  • ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರು ಮೃತಪಟ್ಟಿರುವ ಶಂಕೆ
  • ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತ

ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಮಳೆಯಿಂದ ಕರಾವಳಿಯಲ್ಲಿ ಭಾರೀ ಅನಾಹುತವನ್ನೇ ವರುಣ ಸೃಷ್ಟಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಕಾಲಿಟ್ಟ ಕಡೆಯಲ್ಲೆಲ್ಲಾ ಭೂ ಮಾತೆ ಕುಸಿಯಲಾರಂಭಿಸಿದ್ದಾಳೆ.

Advertisment

ಗುಡ್ಡ ಕುಸಿತದಲ್ಲಿ ಸಾವು ಏರಿಕೆ ಸಾಧ್ಯತೆ

ಮಳೆ ಬರೋದಕ್ಕೂ ಮುಂಚೆ ಒಂದು ಭಯ ಇರುತ್ತೆ ಬಂದು ಹೋದ ಮೇಲೆ ಅದರ ಹವಾ ಇರುತ್ತೆ. ಆದರೆ ಮಳೆ ಬರಬೇಕಾದ್ರೆ ಸೃಷ್ಟಿಸೋ ಅವಾಂರ ಮಾತ್ರ ಎಷ್ಟೋ ಜನರ ಹುಸಿರನ್ನ ನಿಲ್ಲಿಸಿ ಬಿಡುತ್ತೆ.. ಇದಕ್ಕೆ ಸಾಕ್ಷಿಯಾಗಿ ಸೇರ್ಪಡೆಯಾದ ಮತ್ತೊಂದು ಘಟನೆ ಅಂದ್ರೆ ಅದು, ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತ.

ಇದನ್ನೂ ಓದಿ:ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..

publive-image

ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಸೇರಿ 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿತ್ತು. ಹೊಟೇಲ್ ಮಾಲೀಕ ಲಕ್ಷ್ಮಣ ನಾಯ್ಕ್ ಇವರ ಪತ್ನಿ ಶಾಂತಿ ನಾಯ್ಕ್, 11 ವರ್ಷದ ರೋಷನ್ ಬಾಲಕ ಹಾಗೂ ಲಾರಿ ಚಾಲಕನ ಮೃತ ದೇಹ ಪತ್ತೆ ಹಚ್ಚಲಾಗಿದೆ. ಇದುವರೆಗೂ ಐವರ ಮೃತ ದೇಹ ಹೊರ ತೆಗೆಯಲಾಗಿದ್ದು, ಎಲ್ಲಾ ಮೃತ ದೇಹಗಳು ಗೋಕರ್ಣ ಬಳಿ ಸಿಕ್ಕಿವೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರು ಮೃತಪಟ್ಟಿರುವ ಶಂಕೆ ಇದೀಗ ವ್ಯಕ್ತವಾಗ್ತಿದೆ.

Advertisment

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಮಂಕಾಳ್ ವೈದ್ಯ.. ನಡೆಯುತ್ತಿರುವ ರಕ್ಷಣಾಪಡೆಯ ಕಾರ್ಯವನ್ನು ವೀಕ್ಷಿಸಿದ್ರು.. ಇದೇ ವೇಳೆ ಸ್ಥಳೀಯರು ಹಂಚಿಕೊಂಡ ನೋವುಗಳನ್ನ ಆಲಿಸಿದ್ರು.. ಬಳಿಕ ಮಾತನಾಡಿದ ಆವರು, 10 ರಿಂದ 12 ಜನರು ಸಿಲುಕಿರ ಬಹುದು ಎಂಬ ಶಂಕೆಯನ್ನ ವ್ಯಕ್ತಪಡಿಸಿದ್ರು.. ಆರು ಜನರ ಸಿಲುಕಿರುವ ಬಗ್ಗೆ ಮಾಹಿತಿ ಇದೆ. ಆದ್ರೆ ರಕ್ಷಣೆ ಕಾರ್ಯ ಮುಗಿದ ಬಳಿಕ ಮಿಕ್ಕ ವಿಚಾರ ಹೇಳ್ತೀವಿ ಅಂತ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮೋಟರ್ ಬಳಸಿ ಪೆಟ್ರೋಲ್ ಸುರಿದ್ರು.. ಬೆಂಕಿ ಹಾಕಿ ಶೆಡ್​ಗೆ ಬೀಗ ಜಡಿದ್ರು.. ಬೆಂದು ನರಳಿ, ನರಳಿ ಪ್ರಾಣ ಬಿಟ್ರು..!

publive-image

ನಮಗೆ ಸ್ಪಷ್ಟವಾಗಿ ಸಿಕ್ಕಿರುವ ಮಾಹಿತಿ ಪ್ರಕಾರ, ಇಲ್ಲಿ ಒಂದು ಟೀ ಸ್ಟಾಲ್ ಇತ್ತು. ದಂಪತಿ, ಇಬ್ಬರು ಮಕ್ಕಳು ಹಾಗೂ ಓರ್ವ ಇದ್ದಿರುವ ಬಗ್ಗೆ ಮಾಹಿತಿ ಇದೆ. ಅಲ್ಲೇ ಪಕ್ಕದಲ್ಲಿ ಎರಡು ಮನೆ ಇದ್ದವು. ಅಲ್ಲಿ ಒಬ್ಬರು ಮಾತ್ರ ಮಿಸ್ಸಿಂಗ್ ಇದ್ದಾರೆ. ನಮಗೆ ಐದು ಮೃತದೇಹ ಸಿಕ್ಕಿದೆ. ಇನ್ನೊಬ್ಬರು ಮಿಸ್ಸಿಂಗ್​ನಲ್ಲಿದ್ದಾರೆ. ಅವರನ್ನು ಹುಡುಕುತ್ತ ಇದ್ದೇವೆ.

Advertisment

ಒಟ್ಟಾರೆ ಮಳೆಗೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿಹೋಗಿದೆ. ಯಾರೋ ಮಾಡಿದ ತಪ್ಪಿಗೆ ಸಾಮಾನ್ಯ ಜನರು ಬಲಿಯಾಗ್ತಿದ್ದಾರೆ.. ಇನ್ನಾದ್ರೂ ಸರ್ಕಾರ, ಅಧಿಕಾರಿಗಳು ಹೆಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ:‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment