newsfirstkannada.com

VIDEO: ಆರತಿ ಮಾಡಿದ ತಟ್ಟೆ ಕೆಳಗಡೆ ಹಣ ಕೊಟ್ರಾ ಕೆ. ಅಣ್ಣಾಮಲೈ; ಏನಿದರ ಅಸಲಿಯತ್ತು!

Share :

Published March 29, 2024 at 6:45pm

Update March 29, 2024 at 6:58pm

    ಕಾರ್ಯಕರ್ತರು, ಮುಖಂಡರ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದ ಕೆ. ಅಣ್ಣಾಮಲೈ

    ಕೊಯಮತ್ತೂರು ಜಿಲ್ಲಾಧಿಕಾರಿ ಟ್ವೀಟರ್​ ಖಾತೆಯಲ್ಲಿ ಈ ಬಗ್ಗೆ ಹೇಳಿದ್ದೇನು?

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಅಣ್ಣಾಮಲೈ ವಿಡಿಯೋ

ಚೆನ್ನೈ: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಏ. 19ರಂದು ನಡೆಯಲಿದ್ದು ಹೀಗಾಗಿ ಪಕ್ಷದ ಅಭ್ಯರ್ಥಿಗಳು ಫುಲ್​ ಅಲರ್ಟ್​ ಆಗಿದ್ದಾರೆ. ಇದರ ಮಧ್ಯೆ ಕೊಯಮತ್ತೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ನಾಮಪತ್ರ ಸಲ್ಲಿಸಿದ್ದಾರೆ. ಸದ್ಯ ಬಿರು ಬಿಸಿಲಿನಲ್ಲಿ ಕೆ ಅಣ್ಣಾಮಲೈ ಅವರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಕೊಯಮತ್ತೂರು ಅಗ್ನಿ ಪರೀಕ್ಷೆಗಿಳಿದ ಅಣ್ಣಾಮಲೈ; ಲೋಕಸಮರದ ಯುದ್ಧಕ್ಕೆ ಕೇಸರಿ ರಣಕಹಳೆ

ಹೌದು, ಆ ವಿಡಿಯೋದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಮಹಿಳೆಯೊಬ್ಬರು ಆರತಿ ಮಾಡುತ್ತಿದ್ದರು. ಇದೇ ವೇಳೆ ಮಹಿಳೆ ಹಿಡಿದ ಆರತಿ ತಟ್ಟೆಯ ಕೆಳಗಡೆ ಹಣವನ್ನು ಬಚ್ಚಿಟ್ಟು ನೀಡಿದ್ದಾರೆ. ಇದೇ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಸಂಬಂಧ ಕೊಯಮತ್ತೂರಿನ ಜಿಲ್ಲಾ ಚುನಾವಣಾಧಿಕಾರಿ ಪೊಲೀಸರಿಗೆ ತನಿಖೆ ನಡೆಸುವಂತೆ ಪ್ರತಿ ಪಕ್ಷದವರು ಆದೇಶಿಸುತ್ತಿದ್ದಾರೆ.

ಇನ್ನು, ಈ ಬಗ್ಗೆ ಕೊಯಮತ್ತೂರು ಜಿಲ್ಲಾಧಿಕಾರಿ X ಖಾತೆಯಲ್ಲಿ ವೈರಲ್​ ಆಗುತ್ತಿರೋ ವಿಡಿಯೋವನ್ನು ನಾವು ಗಮನಿಸಿದ್ದೇ. ಈ ವಿಡಿಯೋದ ಹಿಂದಿನ ಅಸಲಿಯತ್ತು ಕಂಡುಹಿಡಿಯಲು ಪೊಲೀಸ್ ತಂಡಕ್ಕೆ ವೀಡಿಯೊವನ್ನು ಕಳುಹಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ 2020ರಲ್ಲಿ ಬಿಜೆಪಿ ಸೇರಿದ್ದರು. ಅವರನ್ನು ಗುರ್ತಿಸಿದ್ದ ಬಿಜೆಪಿ ತಮಿಳುನಾಡಿನ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿತ್ತು. ಈ ಹಿಂದೆ ವಿಧಾನಸಭೆ ಎಲೆಕ್ಷನ್​ಗೆ ಸ್ಪರ್ಧೆ ಮಾಡಿ ಸೋತು ಹೋಗಿದ್ದರು. ಆದರೆ ಪಕ್ಷ ಇದೀಗ ಅವರ ಮೇಲೆ ನಂಬಿಕೆ ಇಟ್ಟು ಲೋಕಸಭೆ ಚುನಾವಣೆಯ ಟಿಕೆಟ್​ ನೀಡಿದ್ದು ಹೆಚ್ಚಿನ ಅಂತರದಿಂದ ಗೆಲುವು ಪಡೆಯುವುದು ಅವರ ಉದ್ದೇಶವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಆರತಿ ಮಾಡಿದ ತಟ್ಟೆ ಕೆಳಗಡೆ ಹಣ ಕೊಟ್ರಾ ಕೆ. ಅಣ್ಣಾಮಲೈ; ಏನಿದರ ಅಸಲಿಯತ್ತು!

https://newsfirstlive.com/wp-content/uploads/2024/03/annamali.jpg

Load More