/newsfirstlive-kannada/media/post_attachments/wp-content/uploads/2025/03/viral-song.jpg)
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೆಟ್ ಮಾಡಿರೋ ಹಾಡು ಇದು. ಈ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ನೆಟ್ಟಿಗರು ಹಾಗೇ ಹಾಡಿದ ತಲೆದೂಗುತ್ತಿದ್ದರು. ಅಷ್ಟೇ ಯಾಕೆ ಈ ಹಾಡಿಗೆ ಭರ್ಜರಿ ಡ್ಯಾನ್ಸ್​ ಮಾಡಿ ಖುಷಿ ಪಡುತ್ತಿದ್ದಾರೆ. ಸಖತ್​ ವೈರಲ್​ ಆಗಿರೋ ಈ ಪೀಸ್​​ ಹಾಡಿನ ಅರ್ಥವೇನು ಅಂತ ನೆಟ್ಟಿಗರು ಹುಡುಕುತ್ತಿದ್ದಾರೆ.
ಇದನ್ನೂ ಓದಿ:ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಸಖತ್ ವೈರಲ್ ಆದ ಥಾಯ್ ಸಾಂಗ್; ಯಾರು ಈ ಸುಂದರಿ?
/newsfirstlive-kannada/media/post_attachments/wp-content/uploads/2025/03/viral-song6.jpg)
ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಥಾಯ್ ಹಾಡಿನ ಅರ್ಥ ಇಲ್ಲಿದೆ
Anan Ta Pad Chaye
Apad Ti Te Tena (Apt)
Apad Ti Ya
Apad Ti Te Teku
Apad Ti To
Apad Ti Kud Kud Kud
ನಾನು ನಿದ್ದೆ ಮಾಡಲು ಹೋಗುತ್ತಿದ್ದೇನೆ
ನಾನು ನಿನ್ನ ಜೊತೆ ಹೋಗುತ್ತೇನೆ
ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ
ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ
ನಾನು ಹೋಗುತ್ತೇನೆ
ನನಗೆ ತುಂಬಾ ಹಸಿವಾಗಿದೆ
ನನ್ನನ್ನು ಕ್ಷಮಿಸಿ
/newsfirstlive-kannada/media/post_attachments/wp-content/uploads/2025/03/viral-song5.jpg)
ಭಾಷೆ ಯಾವುದಾದ್ರೇ ಏನು? ಹಾಡು ಅರ್ಥ ಆಗದೇ ಇದ್ದರೂ ಆ ಟ್ಯೂನ್​ಗೆ ಜನ ಕನೆಕ್ಟ್​ ಆಗುತ್ತಾರೆ. ಆದ್ರೆ ಈ ಹಾಡು ಅರ್ಥ ಗೊತ್ತಿಲ್ಲದೇ ಜನ ಇಷ್ಟ ಬಂದಂಗೆ ಲಿರಿಕ್​ ಚೇಂಚ್​ ಮಾಡ್ಕೊಂಡು ಹಾಡನ್ನು ತಮಗೆ ಹೇಗೆ ಬೇಕೋ ಹಾಗೇ ಹಾಡುತ್ತಿದ್ದಾರೆ. ಅಷ್ಟಕ್ಕೂ ಈ ಥಾಯ್​ ಹಾಡನ್ನು ಹಾಡಿ, ಇದೇ ಸಾಂಗ್​ಗೆ ಸೊಂಟ ಬಳುಕಿಸಿದ ಈ ಬ್ಯೂಟಿ ಯಾರು ಅಂತ ನೀವು ತಿಳಿದುಕೊಳ್ಳಲೇಬೇಕು. ಅನ್ನನ ಪಾಥಿಯ ಅಪಾ ತಿ ತೇ ತೇನಾ ಹೀಗೆ ಶುರುವಾಗೋ ಈ ಹಾಡು ಥಾಯ್​ ಭಾಷೆಯ ನುಡಿಗಟ್ಟುಗಳಂತೆ. ಅಷ್ಟೇಯಲ್ಲ ಥೈಲ್ಯಾಂಡ್​ನಲ್ಲಿ ಇವು ಪ್ರೇಮ ಮಂತ್ರಗಳು ಅಂತಲೂ ಹೇಳ್ತಾರೆ. ಇದಕ್ಕೆ ಸುತ್ತ ಮುತ್ತ ಬೇರೆ ಬೇರೆ ಅರ್ಥಗಳನ್ನ ಅವರುಗಳೇ ಪೋಣಿಸಿಕೊಂಡು ಬಿಡುತಾರಂತೆ.
/newsfirstlive-kannada/media/post_attachments/wp-content/uploads/2025/03/viral-song1.jpg)
13 ವರ್ಷದ ಹಳೆಯ ಸಾಂಗ್​ ಥಾಯ್​​ ಬ್ಯೂಟಿಯಿಂದ ವೈರಲ್​​
ಇದನ್ನ ಸುಮಾರು 13 ವರ್ಷಗಳ ಹಿಂದೆ ಒಬ್ಬ ಮುದುಕ ಆಲ್ಬಮ್​ನಂತೆ ಮಾಡಿದ್ದ. ಅದು ಆ ಕಾಲಕ್ಕೆ ಒಳ್ಳೆ ಟ್ರೆಂಡ್​ ಸೆಟ್​ ಮಾಡಿತ್ತಂತೆ. ಆಮೇಲೆ ಅದೂ ಸಖತ್​ ಫೇಮಸ್​ ಆಗಿದ್ದಕ್ಕೆ 2010 ರಲ್ಲಿ ' ದಿ ಹೋಲಿ ಮ್ಯಾನ್ 3' ಅನ್ನೋ ಥಾಯ್ ಮೂವಿಯಲ್ಲಿ ಇದನ್ನ ಬಳಿಸಿದ್ರು. ಮುಂದೆ ಇದನ್ನೇ 2014 ರಲ್ಲಿ ' ಲುಕ್ ಥಂಗ್ ಕಾಮಿಡಿ ' ಅನ್ನೋ ಆಲ್ಬಮ್‌ನಲ್ಲಿ ಬಳಸಿ ಅದಕ್ಕೆ ಬೇರೆಯದ್ದೇ ಅರ್ಥ ಕೊಟ್ಬಿಟ್ಟಿದ್ರು. ಇದನ್ನ ಪ್ರೇಮ ಮಂತ್ರವಾಗಿ, ಮೋಡಿ ಮಂತ್ರವಾಗಿ ಬಳಸಿದ್ರು. ಒಟ್ಟಿನಲ್ಲಿ ಈ ಹಾಡನ್ನ ಹೆಚ್ಚು ಕಾಮಿಡಿಯಾಗಿನೇ ಬಳಸ್ಲಾಗಿದೆ. ಈಗಲೂ ಅದೇ ಛಾಯೆ ತುಂಬ್ಕೊಂಡು. ಮತ್ತೆ ನಿಕೇನ್ ಸಲಿಂದ್ರಿ ಕಂಠದಿಂದ ಜನರ ಮುಂದೆ ಬಂದಿದೆ.
ಯಾರು ಈ ಸಖತ್​ ಬ್ಯೂಟಿ ನಿಕೇನ್ ಸಲಿಂದ್ರಿ?
ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡನ್ನು ಹಾಡಿರೋ ಸುಂದರಿ ಹೆಸರು ನಿಕೇನ್ ಸಲಿಂದ್ರಿ (Niken salindry). ಈ ನಿಕೇನ್ ಸಲಿಂದ್ರಿ 2008ರಲ್ಲಿ ಜನಿಸಿದ್ದಾಳೆ. ನಿಕೇನ್ ಸಲಿಂದ್ರಿ ಬಡ ಕುಟುಂಬದ ಹುಡುಗಿಯಾಗಿದ್ದಳು. ಈಕೆಯ ತಂದೆ ಕೂಡ ಒಬ್ಬ ಇಂಡೋನೇಷ್ಯಾದ ಡ್ಯಾಂಗ್‌ಡಟ್ ಗಾಯಕನಂತೆ. ಗಾಯನ ಮನೆಯಲ್ಲಿ ತುಂತುರಂತೆ ಬೀಳ್ತಾ ಇರುವಾಗ 2 ವರ್ಷದ ಈ ಪೋರಿಗೆ ಸಾಂಗ್​ ಸೋನೆಯಂತೆ ಸೋಕಿತ್ತಂತೆ. 4ನೇ ವಯಸ್ಸಿಗೆ ತಂದೆ ಜೊತೆ ಸ್ಟೇಜ್​ ಹತ್ತಿ ಹಾಡುತ್ತಿದ್ದಳಂತೆ. ಇದಾದ ಬಳಿಕ ನಿಕೇನ್ ಸಲಿಂದ್ರಿ ಆರ್ಕೆಸ್ಟ್ರಾಗಳಂಥ ಬ್ಯಾಂಡ್​ನಲ್ಲಿ ಸೇರಿ ಊರೂರು ಸುತ್ತುತ್ತಾ ಹಾಡುಗಳನ್ನ ಹಾಡುತ್ತಿದ್ದಳಂತೆ. ಥೈಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಯೆಲ್ಲಾ ಈಕೆ ಹಾಡು ಹಾಡುತ್ತಲೇ ಇದ್ದಳು. ಹಾಡಿನ ಜೊತೆಗೆ ಪ್ರತಿ ಸಾಂಗ್​ನಲ್ಲೂ ಒಂದು ಹುಕ್​ ಸ್ಟೆಪ್​ ಹಾಕುತ್ತಾಳೆ. ನಾಗರ ಹಾವಿನ ಹೆಡೆಯಂತೆ ತೂಗಿಸುತ್ತಾಳೆ. ಹೀಗೆ ನಿಕೇನ್ ಸಲಿಂದ್ರಿ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡು ಮತ್ತಷ್ಟು ಫೇಮಸ್​ ಆಗಿಬಿಟ್ಟಿದ್ದಾಳೆ.
/newsfirstlive-kannada/media/post_attachments/wp-content/uploads/2025/03/viral-song4.jpg)
2023ರ ಟೈಮ್​ಗೆ ನಿಕೆನ್ ಸಲಿಂಡ್ರಿ.. ಡೆನ್ನಿ ಕಾಕ್ನಾನ್, ಸೂಪರ್ಡಿ ಆಯೆ,"ಕಲಿಹ್ ವೆಲಾಸ್ಕು" ಹೀಗೆ ಸಾಲು ಸಾಲು ಹಿಟ್​ ಸಾಂಗ್​ಗಳನ್ನ ಹಾಡೋಕೆ ಶುರು ಮಾಡಿದ್ದಳು. ಆಗ ಈಕೆಗೆ ಅಂಬಾಯರ್ ಪ್ರಶಸ್ತಿ ಜೊತೆಗೆ, ಅತ್ಯಂತ ಜನಪ್ರಿಯ ಗೀತೆಗಳ ಅತ್ಯುತ್ತಮ ಕವರ್ ಸಿಂಗರ್ ಪ್ರಶಸ್ತಿಯನ್ನೂ ಕೊಟ್ಟಿದ್ರಂತೆ. ಇನ್ನೂ ಇವ್ಳು ಕೆಂಬಾರ್ ಮ್ಯೂಸಿಕ್ ಡಿಜಿಟಲ್ ಚಾನೆಲ್‌ನಲ್ಲಿ ಮಿಲಿಯನ್​ ಗಟ್ಲೇ ವೀವ್ಸ್​ ಗಳಿಸೋ ಸ್ಟಾರ್​ ಆಗಿದಾಳೆ. ಒಂದು ಟೈಮ್​ನಲ್ಲಿ ಜನ ಕೊಟ್ಟ ನೋಟುಗಳನ್ನ ಪ್ಯಾಂಟ್​ ಜೇಬಲ್ಲಿ ಇಟ್ಕೊಳ್ತಿದ್ದಾಕೆ. ಈಗ ಅವ್ಳ ಸ್ಟೈಲೇ ಚೇಂಚಾಗಿದೆ. ಮಿಲಿಯನ್​ ಗಟ್ಟಲೇ ಫ್ಯಾನ್ಸ್​ ಇದಾರೆ. ಮಾಡ್ರನ್​ ಆಗಿನೂ ಸಾಂಗ್ಸ್​ನ ಧೂಳೆಬ್ಬಿಸ್ತಿದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us