ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಸಖತ್ ವೈರಲ್ ಆದ ಥಾಯ್ ಸಾಂಗ್‌; ಯಾರು ಈ ಸುಂದರಿ?

author-image
Veena Gangani
Updated On
ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಎಲ್ಲರನ್ನೂ ಕುಣಿಸೋ ಈ ವೈರಲ್‌ ಹಾಡಿನ ಅರ್ಥ ಏನು ಗೊತ್ತಾ?
Advertisment
  • ಎಲ್ಲಿ ನೋಡಿದ್ರೂ, ಎಲ್ಲರ ಬಾಯಲ್ಲೂ ಇದೇ ಸಾಂಗ್​ ಗುಣುಗು
  • ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ ಈ ಹಾಡು​
  • ‘ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಹಾಡಿದ್ಯಾರು?

ಈ ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೇ. ಜನಕ್ಕೆ ಏನಾದರೂ ಇಷ್ಟ ಆಯ್ತು ಅಂದ್ರೆ ಮುಗಿತು ವೈರಸ್​ ಥರಾ ಎಲ್ಲಿ ನೋಡಿದರೂ ಇದರದ್ದೇ ಹಾವಳಿ ಇರುತ್ತೆ. ಅದರಲ್ಲೂ ರೀಲ್ಸ್​ ಮಾಡೋರಿಗೆ ಹಬ್ಬನೇ ಹಬ್ಬ. ಈಗ ಯಾವುದೇ ರೀಲ್ಸ್​ ನೋಡಿದರೂ ನಮಗೆ ಕೇಳೋಕೆ, ನೋಡೋಕೆ ಸಿಗೋದು ಒಂದೇ ಒಂದು ಅದುವೇ ‘ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು.

ಇದನ್ನೂ ಓದಿ:MLA ಮಗನ ಜೊತೆ ಭಾರ್ಗವಿ​ ರೊಮ್ಯಾಂಟಿಕ್‌ ಡ್ಯಾನ್ಸ್​.. ಇಲ್ಲಿದೆ ತೆರೆ ಹಿಂದಿನ ಸಖತ್​ ವಿಡಿಯೋ!

publive-image

ಹೌದು, ಅನ್ನನ ಪಾಥಿಯ ಅಪಾ ತಿ ತೇ ತೇನಾ ಅನ್ನೋ ವೈರಲ್ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ನೆಟ್ಟಿಗರು ರೀಲ್ಸ್ ಮಾಡಿದ್ದಾರೆ. ಈ ಹಾಡಿಗೆ ರೀಲ್ಸ್​​ ಮಾಡೋರಂತೂ ಫುಲ್ ಹಬ್ಬ ಮಾಡ್ತಾ ಇದ್ದಾರೆ. ಟ್ರೋಲ್ ಪೇಜ್​ಗಳು ಅಂತೂ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಈ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡು ಮೋಡಿ ಮಾಡಿದೆ. ಈಗ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹವಾ ಎಷ್ಟರ ಮಟ್ಟಗೆ ಹಬ್ಬಿದೆ ಅಂದ್ರೆ  ಯಾರತ್ರ ಮಾತಾಡಿದ್ರು ಅನ್ನನ ಪಾಥಿಯ ಅಪಾ ತಿ ತೇ ತೇನಾ ಅದೇ ಟ್ಯೂನ್​, ಅದೇ ಮ್ಯೂಸಿಕ್ ಹಾಡುತ್ತಾ ಇರುತ್ತಿದ್ದಾರೆ. ಆದ್ರೆ ಜನಕ್ಕೆ ಅನ್ನನ ಪಾಥಿಯ ಅಪಾ ತಿ ತೇ ತೇನಾ ಈ ಹಾಡಿನ ಅರ್ಥ ಗೊತ್ತಿಲ್ಲ. ಆದ್ರೆ ಭಾಷೆ ಯಾವುದಾದ್ರೇ ಏನು, ಅರ್ಥ ಆಗ್ದೇ ಇದ್ರೂ ಆ ಟ್ಯೂನ್​ಗೆ ಕನೆಕ್ಟ್​ ಆಗಿ ಬಿಡ್ತಾರೆ. ಹಾಗೇ ಈ ಹಾಡಿಗೂ ಜನ ಅಷ್ಟೊಂದು ಕನೆಕ್ಟ್​ ಆಗಿದ್ದಾರೆ.

publive-image

ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಅಬ್ಬರ ಸೃಷ್ಟಿಸಿರೋ ಅನ್ನನ ಪಾಥಿಯ ಅಪಾ ತಿ ತೇ ತೇನಾ ಸದ್ಯ ಒಂದು ಟ್ರೆಂಡ್​​​​ ಸೆಟ್ ಮಾಡಿದೆ​. ಈ ಪೀಸ್​​ ಸಾಂಗ್ ಥಾಯ್​​ ಭಾಷೆಯ ನುಡಿಗಟ್ಟು ಆಗಿದೆ. ಜೊತೆಗೆ ಆ ಸಿಂಗರ್​​ನ ಬೆಸ್ಟ್​ ಪರ್ಫಾರ್ಮೆನ್ಸ್​ಗಳಿರೋ​​ ಕ್ಯೂಟ್​​ ಸ್ಟೋರಿ ಇದು. ಇನ್ನೂ, ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡನ್ನು ಹಾಡಿರೋ ಸುಂದರಿ ಹೆಸರು ನಿಕೇನ್ ಸಲಿಂದ್ರಿ (Niken salindry). ಈ ನಿಕೇನ್ ಸಲಿಂದ್ರಿ 2008ರಲ್ಲಿ ಜನಿಸಿದ್ದಾಳೆ. ನಿಕೇನ್ ಸಲಿಂದ್ರಿ ಬಡ ಕುಟುಂಬದ ಹುಡುಗಿಯಾಗಿದ್ದಾಳೆ.

ಈಕೆಯ ತಂದೆ ಕೂಡ ಒಬ್ಬ ಇಂಡೋನೇಷ್ಯಾದ ಡ್ಯಾಂಗ್‌ಡಟ್ ಗಾಯಕನಂತೆ. ಗಾಯನ ಮನೆಯಲ್ಲಿ ತುಂತುರಂತೆ ಬೀಳ್ತಾ ಇರುವಾಗ 2 ವರ್ಷದ ಈ ಪೋರಿಗೆ ಸಾಂಗ್​ ಸೋನೆಯಂತೆ ಸೋಕಿತ್ತಂತೆ. 4ನೇ ವಯಸ್ಸಿಗೆ ತಂದೆ ಜೊತೆ ಸ್ಟೇಜ್​ ಹತ್ತಿ ಹಾಡುತ್ತಿದ್ದಳಂತೆ. ಇದಾದ ಬಳಿಕ ನಿಕೇನ್ ಸಲಿಂದ್ರಿ ಆರ್ಕೆಸ್ಟ್ರಾಗಳಂಥ ಬ್ಯಾಂಡ್​ನಲ್ಲಿ ಸೇರಿ ಊರೂರು ಸುತ್ತುತ್ತಾ ಹಾಡುಗಳನ್ನ ಹಾಡುತ್ತಿದ್ದಳಂತೆ. ಥೈಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಯೆಲ್ಲಾ ಈಕೆ ಹಾಡು ಹಾಡುತ್ತಲೇ ಇದ್ದಳು. ಹಾಡಿನ ಜೊತೆಗೆ ಪ್ರತಿ ಸಾಂಗ್​ನಲ್ಲೂ ಒಂದು ಹುಕ್​ ಸ್ಟೆಪ್​ ಹಾಕುತ್ತಾಳೆ. ನಾಗರ ಹಾವಿನ ಹೆಡೆಯಂತೆ ತೂಗಿಸುತ್ತಾಳೆ. ಹೀಗೆ ನಿಕೇನ್ ಸಲಿಂದ್ರಿ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡು ಮತ್ತಷ್ಟು ಫೇಮಸ್​ ಆಗಿಬಿಟ್ಟಿದ್ದಾಳೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment