/newsfirstlive-kannada/media/post_attachments/wp-content/uploads/2024/11/ANNAPURNA_HANUMANTH.jpg)
ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಗೆಲ್ಲುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಸೋಲೋಪ್ಪಿಕೊಂಡಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಸುತ್ತು ಮತ ಎಣಿಕೆ ನಡೆಯಬೇಕಿದೆ. ಇದರಲ್ಲಿ ಈಗಾಗಲೇ 16 ಸುತ್ತುಗಳ ಮತ ಎಣಿಕೆ ಆಗಿದೆ. ಇನ್ನೇನು 3 ಸುತ್ತುಗಳು ಮಾತ್ರ ಇದೆ. ಆದರೆ 16 ಸುತ್ತುಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಮೈತ್ರಿ ಲೆಕ್ಕಾಚಾರ ಉಲ್ಟಾ; ನಿಖಿಲ್ಗೆ ಭಾರೀ ಹಿನ್ನಡೆ..!
ಚುನಾವಣೆ ಸಮೀಪ ಬರುತ್ತಿದ್ದಂತೆ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಹಣವನ್ನು ರಿಲೀಸ್ ಮಾಡಿದರು. ಹಣ ಬಲ ಸಂಡೂರಿನಲ್ಲಿ ಕೆಲಸ ಮಾಡಿದೆ. ಈ ಸೋಲಿನ ಹೊಣೆ ನಾನೇ ಹೊರುವೆ. ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ದುಡಿದ ಕಾರ್ಯಕರ್ತರಿಗೆ ಧನ್ಯವಾದಗಳು. ಕಾಂಗ್ರೆಸ್ ಹಣ ಹಂಚಿಕೆ ಮಾಡದೆ ಇದ್ರೆ ಗೆದ್ದುತ್ತಿದ್ದೆ. ಸಿಎಂ ಅವರ ಕಾರ್ಯಕ್ರಮಕ್ಕೆ 500 ರೂಪಾಯಿ ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಇದು ನಮಗೆ ಪೆಟ್ಟು ಕೊಟ್ಟಿತು. ನನ್ನ ಸೋಲನ್ನು ಯಾರ ಮೇಲೂ ಹಾಕಲ್ಲ. ನನ್ನ ಸೋಲನ್ನು ನಾನೇ ಒಪ್ಪಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾನು ಅಥವಾ ದಿವಕರ್ ಆಗಲಿ ಮತ್ತೆ ಸ್ಪರ್ಧೆ ಮಾಡುತ್ತೇವೆ ಎಂದು ಬಂಗಾರು ಹನುಮಂತು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ