/newsfirstlive-kannada/media/post_attachments/wp-content/uploads/2025/03/annaya.jpg)
ಗಟ್ಟಿಮೇಳ ರೌಡಿ ಬೇಬಿಗೆ ಲವ್ ಆಗಿದ್ಯಾ? ಅಭಿಮಾನಿಗಳಲ್ಲಿ ಡೌಟ್ ಶುರುವಾಗಿದೆ. ಪಾರು ಶಿವು ಕೆಮೇಸ್ಟ್ರಿ ಆನ್ ಸ್ಕ್ರೀನ್ ಎಷ್ಟೂ ಚಂದವಾಗಿದಿಯೋ.. ಆಫ್ ಸ್ಕ್ರೀನ್ ಕೂಡ ಇಬ್ಬರ ನಡುವೆ ಸಮ್ಥಿಂಗ್ ಸಮ್ಥಿಂಗ್ ಏನೋ ಇದೆ ಅನ್ನೋದು ಫ್ಯಾನ್ಸ್ಗೆ ಎದ್ದು ಕಾಣ್ತಿದ್ದಾರೆ. ಈ ಸುದ್ದಿ ನಿಶಾ ಗುಂಗಲ್ಲಿದ್ದ ಹುಡ್ಗರ್ ಹಾರ್ಟ್ನ ಬ್ರೇಕ್ ಮಾಡಿದೆ.
ಇದನ್ನೂ ಓದಿ: ಅಯ್ಯೋ! ಇದೇನಿದು ಬಾಂಬೆ ಬ್ಲಡ್ ಗ್ರೂಪ್; ಈ ಅಪರೂಪದ ರಕ್ತ ಯಾರಲ್ಲಿ ಇರುತ್ತೆ..?
ಗಟ್ಟಿಮೇಳ ಧಾರಾವಾಹಿ ಮೂಲಕ ವೀಕ್ಷಕರ ಮನೆ ಮಾತಾಗಿದ್ದಾರೆ ನಟಿ ನಿಶಾ ರವಿಕೃಷ್ಣ. ಮುದ್ದು ಮುದ್ದಾಗಿರೋ ಚಲುವೆಯನ್ನು ಕಂಡರೆ ಅಭಿಮಾನಿಗಳಿಗೆ ಬಲು ಪ್ರೀತಿ. ಗಟ್ಟಿಮೇಳ ಟೈಮ್ನಲ್ಲಿ ನಿಶಾ ಹಾಗೂ ರಕ್ಷ್ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ ಪೇಜ್ಗಳು ಹುಟ್ಟಿಕೊಂಡಿದ್ವು. ಈ ಜೋಡಿನ ಬೀಟ್ ಮಾಡ್ತಿದೆ ಅಣ್ಣಯ್ಯ. ಈಗ ಶಿವು-ಪಾರ್ವತಿ ಜೋಡಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಅಣ್ಣಯ್ಯ ಧಾರಾವಾಹಿ ಸೂಪರ್ ಹಿಟ್ ಆಗಿದೆ. ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸ್ತಿದೆ. ಪ್ರತಿಯೊಂದು ಪಾತ್ರ ವೀಕ್ಷಕರ ಮನಸ್ಸಲ್ಲಿ ರಿಜಿಸ್ಟರ್ ಆಗಿವೆ. ಸದ್ಯ ಟ್ರೆಂಡಿಂಗ್ನಲ್ಲಿರೋ ಜೋಡಿ ಅಂದರೆ ಜಿಮ್ ಸೀನ -ಗುಂಡಮ್ಮ. ಇವರ ಸೀನ್ಗಳಿಗೆ ವೀಕ್ಷಕರ ರೆಸ್ಪಾನ್ಸ್ ಸಖತ್ ಆಗಿದೆ. ಇನ್ನು ಅಣ್ಣ ಅತ್ತಿಗೆ ಅಂತೂ ಸೂಪರ್ ಜೋಡಿ. ಪಾರು-ಶಿವು ಕೆಮಿಸ್ಟ್ರಿಗೆ ಏನೋ ಏನೋ ಇದೆ ಅಂತಿದ್ದಾರೆ ಪ್ಯಾನ್ಸ್. ತೆರೆ ಮೇಲೆ ಈ ಜೋಡಿ ಅಷ್ಟೊಂದು ಕ್ಲೋಸ್ ಆಗಿದ್ಯೂ ನಿಜ ಜೀವನದಲ್ಲೂ ಅಷ್ಟೇ ಕ್ಲೋಸ್ ಬಾಂಡಿಂಗ್ ಹೊಂದಿದೆ ಅನ್ನೋದು ಎದ್ದು ಕಾಣ್ತಿದೆ.
ನಿಶಾ ಹಾಗೂ ವಿಕಾಶ್ ಫ್ಯಾನ್ಸ್ಗಳಲ್ಲೇ ಈ ಡೌಟ್ ಶುರುವಾಗಿದೆ. ಅಣ್ಣಯ್ಯ ಶೂಟಿಂಗ್ ವೇಳೆ ಇಬ್ಬರೂ ಒಬ್ಬರನ್ನೋಬ್ಬರು ಕೇರ್ ಮಾಡೋ ರೀತಿ. ಶೂಟಿಂಗ್ ನಂತರ ಸ್ವತಹ ವಿಕಾಶ್ ನಿಶಾನ ಮನೆಯವರೆಗೂ ಡ್ರಾಪ್ ಮಾಡ್ತಾರಂತೆ. ವರ್ಷದ ಆರಂಭದಲ್ಲಿ ಜೀ ಕನ್ನಡ ಕಾರ್ಯಕ್ರಮದಲ್ಲಿ ಸ್ವತಹ ನಿಶಾ ಅವ್ರ ತಾಯಿನೇ ಈ ವಿಷ್ಯ ಹೇಳಿದ್ರು. ಇದಿಷ್ಟೇ ಆಗಿದ್ರೇ ಓಕೆ ಇತ್ತು. ವಿಕಾಶ್ ಸಿನಿಮಾ ಹಾಡಿಗೆ ಇಬ್ಬರೂ ರೋಮ್ಯಾಂಟಿಕ್ ಆಗಿ ರೀಲ್ಸ್ ಮಾಡಿದ್ರು. ಇದರ ಬೆನ್ನಲ್ಲೇ ಇತ್ತಿಚೆಗೆ ಸಿನಿಮಾ ರಿಲೀಸ್ ಟೈಮ್ನಲ್ಲಿ ನಿಶಾ ಕೈಹಿಡಿದು ತುಂಬಾ ಕ್ಲೋಸ್ ಆಗಿ ನಿಂತಿದ್ರು ವಿಕಾಶ್. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ಜೋಡಿ ರಿಯಲ್ ಆಗಿಯೇ ಕನೆಕ್ಟ್ ಆಗಿರಬಹುದಾ ಎಂಬ ಡೌಟ್ನಲ್ಲಿದ್ದವ್ರಿಗೆ ಮತ್ತೊಂದು ಹೊಸ ವಿಚಾರ ಕಣ್ಣಿಗೆ ಬಿತ್ತು. ಅದೇ ಸಂದರ್ಶನ ಒಂದರಲ್ಲಿ ವಿಕಾಶ್ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ರು ನಿಶಾ. ಮಾತು ಮಾತಲ್ಲೇ ಕಣ್ ಕಣ್ಣ ಸಲುಗೆ ಇತ್ತು. ಇಬ್ಬರ ಕೆನ್ನೆ ಕಾಶ್ಮೀರದ ಆ್ಯಪಲ್ ಥರಹ ಕೆಂಪಾಗಿತ್ತು. ಈ ಎಲ್ಲಾ ಕ್ಯೂಟ್ ಕ್ಯೂಟ್ ಕ್ಷಣಗಳನ್ನ ಫ್ಯಾನ್ಸ್ ಎಂಜಾಯ್ ಮಾಡ್ತಿರ್ಬೇಕಾದ್ರೆ ಬಂತೂ ನೋಡಿ ಡ್ಯುಯೆಟ್ ರೋಮಾಂಟಿಕ್ ರೀಲ್ಸ್. ಫ್ಯಾನ್ ಪೇಜ್ಗಳಿಗೆ ಈ ಸ್ಪೆಷಲ್ ಗಿಫ್ಟ್ ಅಂತ ಬರೆದು ಚಂದದ ವಿಡಿಯೋ ಹರಿಬಿಟ್ಟಿದ್ದಾರೆ ನಿಶಾ-ವಿಕಾಶ್.
ಈ ಜೋಡಿ ಕೆಮೆಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಖಂಡಿತ ಇದು ಕ್ಯಾಮರಾಗೋಸ್ಕರ, ಫ್ಯಾನ್ಸ್ಗೋಸ್ಕರ ವಿಡಿಯೋ ಮಾಡಿದಂತಿಲ್ಲ. ಇಲ್ಲೇನೋ ಇದೆ. ಖಂಡಿತ ಸಮ್ಥಿಂಗ್ ಸಮ್ಥಿಂಗ್ ನಡೀತಿದೆ. ಪಕ್ಕಾ ಇದು ನಿಜವಾದ ಲವ್ ಸ್ಟೋರಿನೇ ಅಂತ ಕಾಮೆಂಟ್ಸ್ ಸುರಿಮಳೆನೆ ಸುರಿಸಿದ್ದಾರೆ. ಅಷ್ಟು ಕನೆಕ್ಟ್ ಆಗಿದೆ ವಿಡಿಯೋ. ಇನ್ನೂ ಹುಡ್ಗರಂತೂ ರೌಡಿ ಬೇಬಿ ಈ ವಿಡಿಯೋ ನೋಡಿದ್ಮೇಲೆ ಎಲ್ಲಾ ಅರ್ಥ ಆಯ್ತು ಬಿಡಿ. ಹಾರ್ಟ್ ಅಂತೂ ಬ್ರೇಕ್ ಆಯ್ತು. ಹೋಗಲಿ ನೀವಿಬ್ರೂ ಚನ್ನಾಗಿರಿ ಅಂತ ದೇವ್ದಾಸ್ ರೇಂಜ್ಗೆ ಮನಸ್ಸಿನ ನೋವನ್ನ ಕಮೆಂಟ್ಗಳಲ್ಲಿ ತೋಡಿಕೊಳ್ತಿದ್ದಾರೆ. ಒಟ್ಟಿನಲ್ಲಿ ನಿಶಾ-ವಿಕಾಶ್ ಇಬ್ಬರೂ ಬೇಗ ಗುಡ್ ನ್ಯೂಸ್ ಕೊಡಿ ಅನ್ನೋದು ಫ್ಯಾನ್ಸ್ ಆಸೆ. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಇಲ್ಲ. ಸ್ನೇಹ ಮೀರಿದ ಬಾಂಧವ್ಯನ ಕಾಲವೇ ಉತ್ತರ ಕೊಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ