/newsfirstlive-kannada/media/post_attachments/wp-content/uploads/2025/07/Tejas-Gowda.jpg)
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ಹೀರೋ ಇವರು. 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಸೀರಿಯಲ್ನಲ್ಲಿ ಭೈರವ ಪಾತ್ರವನ್ನು ತೇಜಸ್ ಅವರು ಅಭಿನಯಿಸುತ್ತಿದ್ದರು. ಇದೇ ಭೈರವನಿಂದಾಗಿ ಎಲ್ಲಮ್ಮನ ಜೀವನದಲ್ಲಿ ಸಾಕಷ್ಟು ತಿರುವು ಪಡೆದುಕೊಂಡಿದ್ದವು. ಇದೇ ಸೀರಿಯಲ್ ಮೂಲಕ ಖ್ಯಾತಿ ಪಡೆದು ಮಿಂಚುತ್ತಿದ್ದಾರೆ ನಟ ತೇಜಸ್.
ಸದ್ಯ ಅಣ್ಣಯ್ಯ ಧಾರಾವಾಹಿಗೆ ವರ್ಷ ತುಂಬುತ್ತಿದೆ. ಇವತ್ತಿನವರೆಗೂ ಸೀರಿಯಲ್ ಟಾಪ್ 3 ಲಿಸ್ಟ್ನಲ್ಲಿ ರಾರಾಜಿಸ್ತಿದೆ. ಪಾರು ಶಿವು ಜೋಡಿಯ ಮೋಡಿ, ಸೀನ ಗುಂಡಮ್ಮನ ಕಾಮಿಡಿ ಕಿಕ್, ಮಾದಪ್ಪಣ್ಣನ ಸೆಂಟಿಮೆಂಟ್ ಹಾಗೂ ವೀರಭದ್ರ ಕುತಂತ್ರಗಳ ಜಾಲದ ಮಸಾಲಾ ಭರಿತ ಸಂಚಿಕೆಗಳು ವೀಕ್ಷಕರಿಗೆ ಮಜಾ ನೀಡ್ತಿವೆ.
ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ರಾವಣ ಆದ್ರೆ.. ಹನುಮಾನ್, ಲಕ್ಷ್ಮಣ, ಸೂರ್ಪನಕಿ ಪಾತ್ರ ಮಾಡ್ತಿರೋದು ಯಾರು?
ಸದ್ಯ ಶಿವು ಮೂರನೇ ತಂಗಿ ರಾಣಿ ಮದುವೆ ಹಿಂದೆ ನಡೀತಿರೋ ಪಿತೂರಿ ಕುರಿತು ಸ್ಟೋರಿ ಸಾಗ್ತಿದೆ. ರಾಣಿ ಮದುವೆ ಆಗುತ್ತಾ? ವೀರಭದ್ರನ ಲೆಕ್ಕಾಚಾರ ಉಲ್ಟಾ ಹೊಡುಯುತ್ತಾ? ಎಂಬ ಕೌತುಕದ ಜೊತೆ ಸಂಚಿಕೆಗಳು ಮೂಡಿಬರ್ತಿವೆ. ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪಾರ್ವತಿ ಪಾತ್ರದಲ್ಲಿ ನಿಶಾ ರವಿಕೃಷ್ಣನ್, ರಶ್ಮಿ ಗುಂಡಮ್ಮ ಪಾತ್ರ ಪ್ರತೀಕ್ಷಾ, ಜಿಮ್ ಸೀನ ಪಾತ್ರದಲ್ಲಿ ಸುಷ್ಮಿತ್ ಜೈನ್, ಪರಶು ಪಾತ್ರದಲ್ಲಿ ಚಿರಂಜೀವಿ, ರತ್ನಾ ಪಾತ್ರದಲ್ಲಿ ನಾಗಶ್ರೀ, ರಾಣಿ ಪಾತ್ರದಲ್ಲಿ ರಾಘವಿ ಹಾಗೂ ಕೊನೆಯ ತಂಗಿ ಪಾತ್ರದಲ್ಲಿ ಅಂಕಿತಾ ಅಭಿನಯಿಸ್ತಿದ್ದಾರೆ.
ಅಷ್ಟೇ ಅಲ್ಲದೇ ರಾಣಿಯನ್ನು ಮದುವೆ ಆಗಲಿರೋ ಪೆದ್ದ ಹುಡುಗ ಮನು ಪಾತ್ರದಲ್ಲಿ ನಟ ತೇಜಸ್ ಗೌಡ ಅಭಿನಯಿಸುತ್ತಿದ್ದಾರೆ. ಸೀರಿಯಲ್ನಲ್ಲಿ ಪದ್ದು, ಮುದ್ದು ಮುದ್ದಾಗಿ ಕಾಣಿಸಿಕೊಳ್ಳು ಈ ನಟ ರಿಯಲ್ ಲೈಫ್ನಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ. ನಟ ತೇಜಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ವೀವ್ ಆಗಿದ್ದಾರೆ. ಸಖತ್ ಆಗಿರೋ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಆದ್ರೆ ಸೀರಿಯಲ್ ಪೆದ್ದು ಮನು ಆಗಿರೋ ನಟ ತೇಜಸ್ ಗೌಡ ರಿಯಲ್ ಆಗಿ ಸಖತ್ ಹ್ಯಾಂಡ್ಸಮ್ ಆಗಿದ್ದಾರೆ. ಇನ್ನೂ, ನಟ ತೇಜಸ್ ಗೌಡ, ಅಣ್ಣಯ್ಯ ಸೀರಿಯಲ್ ಮುಂಚೆ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಹಾಗೂ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸದ್ಯ ಶಿವು ತಂಗಿ ರಾಣಿಯನ್ನು ಮದುವೆ ಆಗ್ತಾರಾ? ಅಥವಾ ಸೀರಿಯಲ್ ಹೊಸ ರೂಪ ಪಡೆದುಕೊಳ್ಳುತ್ತಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ