ಶಿವು ಮುದ್ದಿನ ತಂಗಿ ರಾಣಿ ವಯ್ಯಾರ ನೋಡ್ರಿ.. ಅಣ್ಯಯ್ಯ ಸೀರಿಯಲ್​ನಲ್ಲಿ ಏನಾಗ್ತಿದೆ?

author-image
Veena Gangani
Updated On
ಶಿವು ಮುದ್ದಿನ ತಂಗಿ ರಾಣಿ ವಯ್ಯಾರ ನೋಡ್ರಿ.. ಅಣ್ಯಯ್ಯ ಸೀರಿಯಲ್​ನಲ್ಲಿ ಏನಾಗ್ತಿದೆ?
Advertisment
  • ಪೆದ್ದನನ್ನು ಮದುವೆ ಆಗುತ್ತಿರೋ ರಾಣಿ ಗತಿ ಏನಾಗುತ್ತೆ?
  • ಶಿವು ಮನೆಯಲ್ಲಿ ಮುದ್ದು ತಂಗಿ ರಾಣಿ ಮದುವೆ ಸಂಭ್ರಮ
  • ಇಷ್ಟಪಟ್ಟ ಹುಡುಗನನ್ನೇ ಮದುವೆ ಆಗುತ್ತಿರೋ ಖುಷಿ ರಾಣಿಗೆ

ಅಣ್ಣಯ್ಯ ಧಾರಾವಾಹಿ ಮಹಾ ತಿರುವು ಪಡೆದುಕೊಳ್ತಿದೆ. ಕಳೆದ ವಾರ ಶಿವಣ್ಣನ ಹೊಸ ಅವತಾರದ ಪ್ರೋಮೋ ನೋಡಿ ವೀಕ್ಷಕರಿಗೆ ಶಾಕ್ ನೀಡಲಾಗಿತ್ತು. ಇದೀಗ ಶಿವು ಮುದ್ದಿನ ತಂಗಿ ರಾಣಿ ಮದುವೆ ಸಂಭ್ರಮ ಜೋರಾಗಿ ನಡೀತಿದೆ.

ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್​ ದಾಖಲು

publive-image

ಸುಳ್ಳಿನ ಮಂಟಪದಲ್ಲಿ ರಾಜಾ-ರಾಣಿ ವಧು-ವರರಾಗಿದ್ದಾರೆ. ಹೌದು, ಮನು ಬಗ್ಗೆ ಸಾವಿರ ಕನಸು ಕಂಡಿರೋ ರಾಣಿಗೆ ಅವನೊಬ್ಬ ಪೆದ್ದ ಅನ್ನೋ ಅರಿವಿಲ್ಲ. ಆಸ್ತಿಗಾಗಿ ಸಂಚು ರೂಪಿಸಿರೋ ವಿಲನ್​ಗಳು ರಾಣಿ ಮುಗ್ಧ ಹುಡುಗಿ ಅನ್ಕೊಂಡಿದ್ದರೆ. ಆದ್ರೇ, ಸಿಡಿದೆದ್ರೇ ರಾಣಿ ಮಿಷನ್​ಗನ್ನು ಅನ್ನೋ ಸತ್ಯ ಮನು ಅಮ್ಮನಿಗೆ ಮಾತ್ರ ಗೊತ್ತು. ಈ ಸತ್ಯ-ಸುಳ್ಳಿನ ಕಣ್ಣಾಮುಚ್ಚಾಲೆ ನಡುವೆ ಮತ್ತೊಂದು ರೋಚಕ ತಿರುವು ಎದುರಾಗ್ತಿದೆ.

publive-image

ಪೆದ್ದು ಮನು ಗೌಡನ ಪೂರ್ವಪಾರ ತೆರೆದುಕೊಳ್ತಿದೆ. ಮನು ಯಾಕೆ ಹೀಗಾದ? ಯಾವ ರಾಜವಂಶಸ್ಥದ ಕುಡಿ ಇವನು? ಈ ರಹಸ್ಯದ ಸಂಚಿಕೆಗಳು ರೋಮಾಂಚನ ಸೃಷ್ಟಿಸಲಿವೆ. ರಾಣಿ-ಮನು ಮದುವೆ ಆಗೋದಂತು ಫಿಕ್ಸು. ಆದ್ರೆ ಆ ತಯಾರಿ, ಅಲ್ಲಿ ಬರೋ ಪರಿಸ್ಥಿತಿ, ದೃಶ್ಯಗಳು ಮಹಾ ಮನರಂಜನೆಯ ಹಬ್ಬ ತರಲಿವೆ.

ಇನ್ನೂ, ತಾನು ಇಷ್ಟ ಪಟ್ಟ ಹುಡುಗನನ್ನೇ ಮದುವೆಯಾಗುತ್ತಿರೋ ಖುಷಿಯಲ್ಲಿದ್ದಾಳೆ ರಾಣಿ. ಆದ್ರೆ, ರಾಣಿಗೆ ತಾನು ಮದುವೆ ಆಗುತ್ತಿರೋನು ಪೆದ್ದ ಅಂತ ಗೊತ್ತೇ ಇಲ್ಲ. ಮದುವೆಯಾದ ಬಳಿಕ ರಾಣಿ ಲೈಫ್​ನಲ್ಲಿ ಏನೆಲ್ಲಾ ಅದಲು-ಬದಲು ಆಗುತ್ತೆ ಅಂತ ಕಾದು ನೋಡಬೇಕಿದೆ. ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿ ಹೆಸರು ರಾಘವಿ ಅರಳಗುಂಡಗಿ. ಇವರು ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದ ಹುಡುಗಿ. ಸ್ಟಾರ್ ಸುವರ್ಣ ವಾಹಿನಿಯ ಜೇನುಗೂಡು ಸೀರಿಯಲ್‌ನಲ್ಲಿ ನಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅಂತರಪಟ ಸೀರಿಯಲ್‌ನಲ್ಲಿ ದಿಶಾ ಅಭಿನಯಿಸಿದ್ದಾರೆ. ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಚಿನ್ಮಯಿ ಆಗಿ ರಾಘವಿ ನಟಿಸಿದ್ದಾರೆ. ಸದ್ಯ ಅಣ್ಣಯ್ಯ ಸೀರಿಯಲ್‌ನಲ್ಲಿ ರಾಣಿಯಾಗಿ ನಟಿಸಿದ್ದಕ್ಕೆ ಬೆಸ್ಟ್‌ ಸಹೋದರಿ ಪ್ರಶಸ್ತಿ ಕೂಡ ರಾಘವಿ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment