ಅಣ್ಣಯ್ಯ ಸೀರಿಯಲ್​ ಗುಂಡಮ್ಮ ಮದುವೆ ಆಗೋ ಹುಡುಗ ಹೀಗೆ ಇರಬೇಕಂತೆ ಗೊತ್ತಾ?.. ನೀವೇ ಕೇಳಿ!

author-image
Veena Gangani
Updated On
ಅಣ್ಣಯ್ಯ ಸೀರಿಯಲ್​ ಗುಂಡಮ್ಮ ಮದುವೆ ಆಗೋ ಹುಡುಗ ಹೀಗೆ ಇರಬೇಕಂತೆ ಗೊತ್ತಾ?.. ನೀವೇ ಕೇಳಿ!
Advertisment
  • ಒಂದು ಕಡೆ ಪಾರು- ಶಿವು, ಮತ್ತೊಂದು ಗುಂಡಮ್ಮ ಜೋಡಿ ಮಾಡ್ತಾ ಇದೆ ಮೋಡಿ
  • ವೀಕ್ಷಕರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ ಅಣ್ಣಯ್ಯ ಸೀರಿಯಲ್
  • ಗುಂಡಮ್ಮ ರಶ್ಮಿ ಪಾತ್ರಧಾರಿ ಅಪೇಕ್ಷಾ ಅವರು ತಮ್ಮ ರಿಯಲ್​ ಗಂಡ ಹೇಗಿರಬೇಕು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಣ್ಣಯ್ಯ ಸೀರಿಯಲ್ ವೀಕ್ಷಕರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ವಿಕ್ಷಕರ ಹೃದಯ ಗೆದ್ದುಕೊಂಡು ಮುಂದೆ ಸಾಗುತ್ತಿದೆ.

ಇದನ್ನೂ ಓದಿ:ಅಣ್ಣಯ್ಯ ಸೀರಿಯಲ್ ಶಿವು, ಪಾರು ರಿಯಲ್​ ಲೈಫ್​ನಲ್ಲೂ ಕಪಲ್​ ಆಗ್ತಾರಾ?

publive-image

ಒಂದು ಕಡೆ ಪಾರು ಹಾಗೂ ಶಿವು ಜೋಡಿ ಮೋಡಿ ಮಾಡುತ್ತಿದ್ದರೇ, ಮತ್ತೊಂದು ಕಡೆ ಗುಂಡಮ್ಮ ರಶ್ಮಿ ಮುಂದಿನ ಜೀವನದ ಹೇಗಿರುತ್ತದೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇನ್ನೂ ಅಣ್ಣಯ್ಯ ಸೀರಿಯಲ್​ನಲ್ಲಿ ಗುಂಡಮ್ಮ ರಶ್ಮಿ ಪಾತ್ರಧಾರಿ ಅಪೇಕ್ಷಾ ಅವರು ತಮ್ಮ ರಿಯಲ್​ ಗಂಡ ಹೇಗಿರಬೇಕು ಅಂತ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಹೇಳಿದ್ದಾರೆ.

publive-image

ಸೀರಿಯಲ್​ನಲ್ಲಿ ಮದ್ವೆಯಾಗಿದೆ. ಇನ್ನು ರಿಯಲ್​ ಲೈಫ್​ನಲ್ಲಿ ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ, ಹೇಗಿರಬೇಕು ಎಂದು ಇಂದಿಗೂ ಯೋಚನೆ ಮಾಡಿಲ್ಲ. ನನಗೆ ಪೇಷನ್ಸ್​ ಇಲ್ಲ, ಆದ್ದರಿಂದ ಅವನಿಗೆ ತುಂಬಾ ಪೇಷನ್ಸ್​ ಇರಬೇಕು.   ಬೇರೆಯವ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಇರಬೇಕು. ಇಗೋ (EGO) ಪಕ್ಕಕ್ಕೆ ಇಟ್ಟು ತನ್ನ ತಪ್ಪು ಒಪ್ಪಿಕೊಳ್ಳಬೇಕು. ಇದರಿಂದ ನಮ್ಮ ಸಂಸಾರಕ್ಕೂ, ಸಮಾಜಕ್ಕೂ ಒಳ್ಳೆಯದು ಎಂದಿದ್ದಾರೆ.

ಇದಾದ ಬಳಿಕ ಸೀರಿಯಲ್​ ಬಗ್ಗೆ ಮಾತಾಡಿದ ಅವರು, ನನಗೆ ಸೀರೆ ಉಡುವುದು ಎಂದರೆ ಅಲರ್ಜಿ. ಈಗಲೂ ನನಗೆ ಸೀರೆ ಉಡೋಕೆ ಬರೋದಿಲ್ಲ. ಆದರೆ ಸೀನನ ಜೊತೆ ಮದುವೆಯಾದ ಮೇಲೆ ದಿನವೂ ಸೀರೆಯೇ ಉಡಬೇಕಿದೆ. ಅದನ್ನು ಮ್ಯಾನೇಜ್​ ಮಾಡಬೇಕಿದೆ. ಮದುವೆ ಸೀನ್​ ಸಂದರ್ಭದಲ್ಲಿ ಅಣ್ಣಯ್ಯನ ಕಣ್ಣೀರು ನೋಡಿ, ನಿಜಕ್ಕೂ ಅಲ್ಲೊಂದು ಭಾವುಕ ಸನ್ನಿವೇಶ ಸೃಷ್ಟಿಯಾಗಿತ್ತು. ಶೂಟಿಂಗ್ ಸೆಟ್​ನಲ್ಲಿ ಎಮೋಷನ್​ ಕ್ರಿಯೇಟ್​ ಆಗಿತ್ತು. ಈ ಸೀನ್​ ಮಾಡುವಾಗ ಕೆಲವು ಸಲ ಕಟ್​ ಕಟ್​ ಎಂದು ರೀಶೂಟ್​ ಮಾಡಿದ್ದರೂ, ಎಮೋಷನ್​ ಮಾತ್ರ ತುಂಬಾ ಆಗಿತ್ತು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment