ಸಖತ್​ ಬೋಲ್ಡ್​ ಕಣ್ರಿ ಅಣ್ಣಯ್ಯನ ತಂಗಿ ರಾಧಾ.. ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ರಾಘವಿ ಅರಳಗುಂಡಗಿ!

author-image
Veena Gangani
Updated On
ಸಖತ್​ ಬೋಲ್ಡ್​ ಕಣ್ರಿ ಅಣ್ಣಯ್ಯನ ತಂಗಿ ರಾಧಾ.. ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ರಾಘವಿ ಅರಳಗುಂಡಗಿ!
Advertisment
  • ಶಿವಣ್ಣನ ಎರಡನೇ ಮುದ್ದು ತಂಗಿಯಾಗಿ ರಾಧಾ ಪಾತ್ರದಲ್ಲಿ ನಟನೆ
  • ಅಂತರಪಟ, ಮಂಗಳಗೌರಿ ಧಾರಾವಾಹಿಗಳಲ್ಲಿ ನಟಿ ಅಭಿನಯ
  • ರಾಘವಿ ಅರಳಗುಂಡಗಿ ಬೋಲ್ಡ್​​ ಫೋಟೋಗೆ ಫ್ಯಾನ್ಸ್​ ಫಿದಾ

ಅಣ್ಣಯ್ಯ ಸ್ಟೋರಿಗೆ ಹೊಸ ಟ್ವಿಸ್ಟ್​ ಸಿಗುತ್ತಿದೆ. ಶಿವುಗೆ ಕೊನೆಗೂ ಪಾರು ಪ್ರೇಮ ನಿವೇದನೆ ಮಾಡಿದ್ದಾಳೆ. ಪಾರು ಬಾಯಲ್ಲಿ ಆ ಮೂರು ಮ್ಯಾಜಿಕಲ್​ ವರ್ಡ್​ ಕೇಳಿ ಹಳ್ಳಿ ಹೈದನ ಎದೆ ಬಡಿತ ಜೋರಾಗಿದೆ. ಪಾರು.. ಶಿವು ಪ್ರೀತಿಯ ಪಲ್ಲಕ್ಕಿಲಿ ಮೈಮರೆಯೋ ಶುಭ ಮೂಹೂರ್ತ ಹತ್ತಿರ ಬಂದಿದೆ.

ಇದನ್ನೂ ಓದಿ:MLA ಮಗನ ಜೊತೆ ಭಾರ್ಗವಿ​ ರೊಮ್ಯಾಂಟಿಕ್‌ ಡ್ಯಾನ್ಸ್​.. ಇಲ್ಲಿದೆ ತೆರೆ ಹಿಂದಿನ ಸಖತ್​ ವಿಡಿಯೋ!

publive-image

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ 'ಅಣ್ಣಯ್ಯ' ಧಾರಾವಾಹಿ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದೆ. ಅಣ್ಣಯ್ಯ ಸೀರಿಯಲ್​ನಲ್ಲಿ ಮೂಡಿ ಬರುತ್ತಿರೋ ಪ್ರತಿಯೊಂದು ಪಾತ್ರವು ತನ್ನದೇ ಆದ ತೂಕವನ್ನು ಹೊಂದಿದೆ. ಅದರಲ್ಲೂ ಜನಸಾಮಾನ್ಯರಿಗೆ ತುಂಬಾ ಹತ್ತಿರವಾಗಿರೋ ಸೀರಿಯಲ್​ನಲ್ಲಿ ಪಾರು ಹಾಗೂ ಶಿವು ಪಾತ್ರಕ್ಕೆ ಹೆಚ್ಚು ರೆಸ್ಪಾನ್ಸ್ ಸಿಕ್ಕಿದೆ.

publive-image

ಅದರ ಜೊತೆಗೆ ಶಿವಣ್ಣ ಮುದ್ದು ತಂಗಿಯರ ಕೂಡ ಅಷ್ಟೇ ಫೇಮಸ್​ ಆಗಿದ್ದಾರೆ. ಅಣ್ಣಯ್ಯನ ಎರಡನೇ ತಂಗಿ ರಾಧಾ ಪಾತ್ರದಲ್ಲಿ ನಟಿ ರಾಘವಿ ಅರಳಗುಂಡಗಿ ಅಭಿನಯಿಸುತ್ತಿದ್ದಾರೆ. ತೆರೆ ಮೇಲೆ ಚೂಡಿದಾರ್, ತಲೆಗೆ ಹೂವು, ಹಣೆಗೆ ಕುಂಕುಮ ಇಟ್ಟುಕೊಂಡು ಅಷ್ಟು ಚಂದವಾಗಿ ಕಾಣಿಸಿಕೊಳ್ಳುವ ನಟಿ ರಾಘವಿ ಅರಳಗುಂಡಗಿ ತೆರೆ ಹಿಂದೆ ಅಷ್ಟೇ ಬೋಲ್ಡ್​ ಆಗಿದ್ದಾರೆ.

publive-image

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೊಂಚ ಆಕ್ಟೀವ್ ಆಗಿದ್ದಾರೆ ನಟಿ ರಾಘವಿ. ಹೊಸ ಹೊಸ ಫೋಟೋಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ತಮ್ಮ ಅಭಿಮಾನಿಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿದ್ದಾರೆ. ಟ್ರೆಡಿಷನಲ್​ಗೂ ಸೈ, ಇತ್ತ ಮಾಡ್ರನ್​ಗೂ ಸೈ ಅಂತಿರೋ ನಟಿಯ ಬೋಲ್ಡ್​ ಫೋಟೋಸ್ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈಗಾಗಲೇ ನಟಿ ರಾಘವಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೇನುಗೂಡು, ಮಂಗಳಗೌರಿ ಮದುವೆ, ಅಂತರಪಟ ಧಾರಾವಾಹಿಯಲ್ಲೂ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment