newsfirstkannada.com

ಭೂಮಾಲೀಕನಿಂದ ತಕಾರರು, ಶಾಲೆ ಖಾಲಿ ಮಾಡುವಂತೆ ಕಿರಿಕಿರಿ; ಸಿಎಂ ಸಿದ್ದರಾಮಯ್ಯರ ಮೊರೆ ಹೋದ ವಿದ್ಯಾರ್ಥಿಗಳು

Share :

Published February 14, 2024 at 6:44am

    ಶಾಲೆಗೆ ಇದೀಗ ಭೂಮಾಲೀಕನಿಂದ ತಲೆನೋವು

    ಮೂಲ ಸೌಕರ್ಯಗಳಿಂದ ವಂಚಿತವಾದ ಶಾಲೆ

    ಶಾಲೆ ಖಾಲಿ ಮಾಡಿ ಅಂತ ಭೂ ಮಾಲೀಕನ ಕಿರಿಕಿರಿ

ಅದು ಬರದನಾಡು ಕೊಪ್ಪಳ ಜಿಲ್ಲೆಯ ಗಡಿ ಗ್ರಾಮದ ಸ್ವಾತಂತ್ರ್ಯ ಪೂರ್ವದ ಶಾಲೆ, ಅತ್ಯಂತ ಅನುಭವಿ ಹಾಗೂ ಹಿರಿಯ ಕಾಂಗ್ರೆಸ್ ರಾಜಕಾರಣಿ ಬಸವರಾಜ ರಾಯರೆಡ್ಡಿ ಕ್ಷೇತ್ರದಲ್ಲಿರುವ ಶಾಲೆ, ಆ ಶಾಲೆಗೆ ಇದೀಗ ಭೂಮಾಲೀಕನಿಂದ ತಕಾರರು ಶುರುವಾಗಿದ್ದು, ಶಾಲೆಯನ್ನು ಖಾಲಿ ಮಾಡಿ ಎಂದು ಭೂಮಾಲೀಕ ಕಿರಿಕಿರಿಮಾಡುತ್ತಿದ್ದು, ಶಾಲೆ ಅಭಿವೃದ್ಧಿಯಾಗದೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ನಮ್ಮೂರು ಸರ್ಕಾರಿ ಶಾಲೆಯನ್ನು ಉಳಿಸಿಕೊಡಿ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಗ್ರಾಮದ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಶತಮಾನದ ಶಾಲೆಗೆ ಭೂಮಾಲೀಕರಿಂದ ತಕರಾರು!

ಗಡಿ ಭಾಗದ ಸರ್ಕಾರಿ ಶಾಲೆಗಳು ಉಳಿಬೇಕು, ಅಭಿವೃದ್ಧಿ ಆಗಬೇಕು, ಗ್ರಾಮೀಣ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅಂತ ಸರ್ಕಾರ ಹತ್ತು ಹಲವು ಯೋಜನೆಗಳನ್ನು ತರುತ್ತೆ. ಆದರೆ ಅವು ಜಾರಿಗೆ ಬರೋದು ಅಷ್ಟಕಷ್ಟೆ. ಕೊಪ್ಪಳದ ಕುಕನೂರು ತಾಲೂಕಿನ ಸೋಂಪೂರು ಗ್ರಾಮದ ಸ್ವಾತಂತ್ರ್ಯ ಪೂರ್ವ ಸರ್ಕಾರಿ ಶಾಲೆಗೆ ಇದೀಗ ಭೂಮಾಲೀಕನಿಂದ ತಲೆನೋವಾಗಿದ್ದು, ಶಾಲೆಯೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

8 ದಶಕಗಳ ಹಿಂದೆ ನಿರ್ಮಾಣವಾದ ಈ ಶಾಲೆಗೆ ಅಂದಿನ ತಲೆಮಾರಿನ ಕಾಟೆವಾಡಿ ಎನ್ನುವವರ ಕುಟುಂಬ ಭೂಮಿ ದಾನ ಮಾಡಿತ್ತು. ಆದರೆ ಅದು ಶಾಲೆಯ ಹೆಸರಿಗೆ ಆಗಿರಲಿಲ್ಲ, ಅಜ್ಜನ ಕಾಲದಲ್ಲಿ ಸರ್ಕಾರಿ ಶಾಲೆಗೆ ಕೊಟ್ಟ ಭೂಮಿಯನ್ನು ಇದೀಗ ಮೊಮ್ಮಗ ಭೂಮಾಲೀಕರಾದ ಮಾರುತೆಪ್ಪ ಮಲ್ಲಪ್ಪ ಕಾಟೆವಾಡಿ ಎನ್ನುವವರು ತನ್ನ ಹೆಸರಿಗೆ ಮಾಡಿಕೊಂಡಿದ್ದು, ಶಾಲೆಯನ್ನು ಅಭಿವೃದ್ಧಿ ಮಾಡಲು ಕೊಡುತ್ತಿಲ್ಲ. ಇದರಿಂದ ಶಾಲಾ ಕೊಠಡಿಗಳು ಶಿಥಿಲವಾಗಿವೆ. ಶೌಚಾಲಯವಿಲ್ಲ, ಅಡುಗೆ ಕೊಣೆಯಿಲ್ಲ, ತಡೆಗೋಡೆ ಬಿದ್ದು ಹೋಗಿದೆ. ಅನುದಾನ ಬಂದ್ರೂ ಭೂಮಾಲೀಕನ ತಕರಾರಿನಿಂದ ಮರಳಿ ಹೋಗುತ್ತಿದೆ. ಅಲ್ಲದೇ ಶಾಲೆ ಖಾಲಿ ಮಾಡಿ ಅಂತ ಕಿರಿಕಿರಿ ಮಾಡುತ್ತಿದ್ದಾನೆ ಎಂದು ಗ್ರಾಮದ ಮುಖಂಡರು, ಶಿಕ್ಷಕರು ಆರೋಪಿಸಿದ್ದಾರೆ.

ಇನ್ನು ಶಾಲೆಯ ಭೂವಿವಾದ ಬಗೆಹರಿಸಲು ಈಗಾಗಲೇ ಸಂಬಂಧಪಟ್ಟ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣ ಅಧಿಕಾರಿ, ಎಸಿಗೆ ಪತ್ರ ಬರೆದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿ ಗಮನಕ್ಕೂ ತರಲಾಗಿದೆ. ಆದ್ರೆ ಪ್ರಯೋಜನ ಶೂನ್ಯ. ಸುಮಾರು 210 ಮಕ್ಕಳು ಓದುವ ಈ ಶಾಲೆಯಲ್ಲಿ ಇದೀಗ 6 ಕೊಠಡಿಗಳಿವೆ. ಉಳಿದಿರುವ ಹಳೇ ಕಟ್ಟಡ ಶಿಥಿಲವಾಗಿದೆ. ಈ ಶಾಲೆ ನಿಜಾಮರ ಕಾಲದಲ್ಲಿ ನಿರ್ಮಾಣವಾಗಿದ್ದು ಹತ್ತಾರು ಹಳ್ಳಿಗಳಿಗೆ ವಿದ್ಯಾಕೇಂದ್ರವಾಗಿತ್ತು. 1935ರಲ್ಲಿ ಆರಂಭವಾಗಿದ್ದ ಈ ಶಾಲೆಯನ್ನು ಖಾಲಿ ಮಾಡಿಸಲು ಮಾರುತೆಪ್ಪ ಮುಂದಾಗಿದ್ದಾರೆ. ಆದ್ರೆ ಶಾಲೆ ಉಳಿಸುವಂತೆ ಸಿಎಂ, ಡಿಸಿಎಂ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸಮಸ್ಯೆ ಬಗೆಹರಿಯದಿದ್ರೆ ಜಿಲ್ಲಾಡಳಿತದ ಎದುರು ವಿದ್ಯಾರ್ಥಿಗಳ ಜೊತೆ ಧರಣಿ ಕೂರುವ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಶತಮಾನಗಳ ಶಾಲೆಯಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ ನಡೆಯುತ್ತಿದೆ. ಶಾಲೆ ಅಭಿವೃದ್ಧಿಗಾಗಿ ಇಲ್ಲಿನ ಗ್ರಾಮಸ್ಥರು, ಶಿಕ್ಷಕರು ಶ್ರಮಿಸುತ್ತಿದ್ದಾರೆ. ಆದ್ರೆ ಭೂಮಾಲೀಕ ಮಾರುತೆಪ್ಪ ಮಾತ್ರ ಶಾಲೆಗೆ ಕಂಟಕವಾಗಿದ್ದು, ಶಾಲೆಯನ್ನು ಅಭಿವೃದ್ಧಿಯಿಂದ ವಂಚಿತಗೊಳಿಸಿದ್ದಾನೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಲೆ ಉಳಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂಮಾಲೀಕನಿಂದ ತಕಾರರು, ಶಾಲೆ ಖಾಲಿ ಮಾಡುವಂತೆ ಕಿರಿಕಿರಿ; ಸಿಎಂ ಸಿದ್ದರಾಮಯ್ಯರ ಮೊರೆ ಹೋದ ವಿದ್ಯಾರ್ಥಿಗಳು

https://newsfirstlive.com/wp-content/uploads/2024/02/School-2.jpg

Load More