/newsfirstlive-kannada/media/post_attachments/wp-content/uploads/2024/08/Annu-rani.jpg)
2024ರ ಒಲಿಂಪಿಕ್ಸ್​ ಪ್ಯಾರಿಸ್​ನಲ್ಲಿ ನಡೆಯುತ್ತಿದೆ. ಪುರುಷರ ಜಾವೆಲಿನ್​ ವಿಭಾಗದಲ್ಲಿ ನೀರಜ್​ ಚೋಪ್ರಾ ಸ್ಪರ್ಧಿಸಿ ಫೈನಲ್​ಗೆ ತಲುಪಿದ್ದಾರೆ. ಅತ್ತ ಮಹಿಳಾ ಎ ವಿಭಾಗದಲ್ಲಿ ಮೀರತ್​ ಮೂಲದ ಅಣ್ಣು ರಾಣಿ ಇಂದು ಅರ್ಹತಾ ಸುತ್ತಿಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಬಹುತೇಕರಿಗೆ ಆಕೆಯ ಜೀವನ, ಸಾಧನೆ ಬಗ್ಗೆ ತಿಳಿದಿಲ್ಲ.
/newsfirstlive-kannada/media/post_attachments/wp-content/uploads/2024/08/Annu-rani-1.jpg)
ಕೃಪಿಕನ ಮಗಳು ಅಣ್ಣು ರಾಣಿ
31 ವರ್ಷದ ಅಣ್ಣು ರಾಣಿ ಮೀರತ್​ನ ಬಹದರ್​ಪುರ ಗ್ರಾಮದವರು. ಕೃಷಿ ಕುಟುಂಬದಲ್ಲಿ ಜನಿಸಿದ ಈಕೆಗೆ ಕ್ರಿಕೆಟ್​ ಆಟದ ಬಗ್ಗೆ ಹೆಚ್ಚು ಒಲವು. ಪ್ರಾರಂಭದಲ್ಲಿ ಬೌಲಿಂಗ್​ ಮಾಡುವ ಮೂಲಕ ಗುರುತಿಸಿಕೊಂಡ ಅಣ್ಣುಗೆ ಆಕೆಯ ಸಹೋದರ ಜಾವೆಲಿನ್​ ಎಸೆಯಲು ಹೇಳಿದರು. ಬಳಿಕ ಆಕೆ ತನ್ನ ದಿಕ್ಕನ್ನು ಜಾವೆಲಿನ್​ ಎಸೆತಕ್ಕೆ ಒತ್ತು ನೀಡಲು ಮುಂದಾದಳು.
/newsfirstlive-kannada/media/post_attachments/wp-content/uploads/2024/08/Annu-rani-2.jpg)
ಅಣ್ಣು ರಾಣಿ ಕುಟುಂಬ ಕೃಷಿಕರಾಗಿದ್ದು, ಕಬ್ಬು ಬೆಳೆಯುತ್ತಾರೆ. ಪ್ರಾರಂಭದಲ್ಲಿ ತೋಟದಲ್ಲಿ ಕಬ್ಬನ್ನು ಎಸೆಯುವ ಮೂಲಕ ಜಾವೆಲಿನ್​ ಅಭ್ಯಾಸ ಮಾಡುತ್ತಿದ್ದ ಅಣ್ಣು ರಾಣಿ 2019ರಲ್ಲಿ ಅದಕ್ಕೆ ಹೆಚ್ಚು ಒತ್ತು ನೀಡಿದಳು.
ಪಿಯುಸಿವರೆಗೆ ವಿದ್ಯಾಭ್ಯಾಸ
ಹಳ್ಳಿ ಹುಡುಗಿಯಾದ ಅಣ್ಣು ರಾಣಿಗೆ ಮದುವೆ ಮಾಡಿಸುವುದು ಆಕೆಯ ತಂದೆಯ ಕನಸಾಗಿತ್ತು. ಆದರೆ ಸಹೋದರ ಬೆಂಬಲದೊಂದಿಗೆ ಓದಿದ ಆಕೆ ಪಿಯುಸಿವರೆಗೆ ವಿದ್ಯಾಭ್ಯಾಸ ಪೂರ್ತಿಗೊಳಿಸಿದಳು. ಓದಿನ ಬಳಿಕ ಕೃಷಿ ತೋಟದಲ್ಲಿ ಸಮಯ ಕಳೆಯುತ್ತಿದ್ದಳು. ಆಗಾಗ ಕ್ಲಾಸ್​ ತಪ್ಪಿಸಿ ಕಬ್ಬಿನ ತೋಟದಲ್ಲಿ ಪ್ರಾಕ್ಟೀಸ್​ ಮಾಡುತ್ತಿದ್ದಳು.
2014ರಲ್ಲಿ ಲಕ್ನೋದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್​ ಚಾಂಪಿಯನ್​​ಶಿಪ್​ನಲ್ಲಿ ಅಣ್ಣು ರಾಣಿ ಸ್ಪರ್ಧಿಸಿ 58.83 ಮೀಟರ್​​​ ಜಾವೆಲಿನ್​​​ ಎಸೆದಿದ್ದಳು. ಆ ಮೂಲಕ 14 ವರ್ಷಗಳ ಹಿಂದಿನ ದಾಖಲೆಗಳನ್ನು ಆಕೆ ಮುರಿದು ಚಿನ್ನದ ಪದಕ ಗೆದ್ದಳು. ಅಲ್ಲಿಂದ ಆಕೆಯ ದಿಕ್ಕು ಬದಲಾಯಿತು.
/newsfirstlive-kannada/media/post_attachments/wp-content/uploads/2024/08/Annu-rani-3.jpg)
ತಂದೆಗೆ ಮಗಳ ಸಾಧನೆಯಿಂದ ಹೆಮ್ಮೆ
ಬಳಿಕ ಕಾಮೆನ್​ ವೆಲ್ತ್​​ ಕ್ರೀಡಾಕೂಟದಲ್ಲಿ ಅರ್ಹತೆ ಪಡೆದಳು. ಎಂಟನೇ ಸ್ಥಾನ ಗಿಟ್ಟಿಸಿಕೊಂಡಳು. ಬಳಿಕ ಆಕೆಯ ತಂದೆಗೆ ಮಗಳ ಸಾಧನೆ ಹೆಮ್ಮೆ ಪಡಿಸಿತು.
ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ
2022ರಲ್ಲಿ ಜಮೈಡ್​​ಪುರದಲ್ಲಿ ನಡೆದ ಇಂಡಿಯನ್​​ ಓಪನ್​​ ಜಾವೆಲಿನ್​​ ಸ್ಪರ್ಧೆಯಲ್ಲಿ ಅಣ್ಣು 63.82 ಮೀಟರ್​​​ಗಳ ಸಾಧನೆ ಬರೆಯುತ್ತಾಳೆ. 2023ರಲ್ಲೂ ಏಷ್ಯನ್​ ಗೇಮ್ಸ್​ನಲ್ಲಿ ಇತಿಹಾಸ ನಿರ್ಮಿಸುತ್ತಾಳೆ. 62. 92 ಮೀಟರ್​​ ಜಾವೆಲಿನ್​ ಎಸೆಯುವ ಮೂಲಕ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಮ್ಮೆಗೆ ಪಾತ್ರರಾಗುತ್ತಾಳೆ.
ಇಂದು ಆಕೆಯ ಸಾಧನೆ ಪ್ಯಾರಿಸ್​ ಒಲಿಂಪಿಕ್ಸ್​ನತ್ತ ಕೊಂಡೊಯ್ದಿದೆ. ಇಂದು ಮಧ್ಯಾಹ್ನ ನಡೆಯಲಿರುವ ಜಾವೆಲಿನ್​ ಸ್ಪರ್ಧೆಯಲ್ಲಿ ಅಣ್ಣು ರಾಣಿ ಭಾಗವಹಿಸುತ್ತಿದ್ದಾರೆ. ಕೃಷಿಕನ ಮಗಳು ಪ್ಯಾರಿಸ್​ನಲ್ಲಿಯೂ ಭಾರತದ ಕೀರ್ತಿ ಪತಾಕೆ ಹಾರಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಡಲಿ ಎಂಬದು ನಮ್ಮ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us