newsfirstkannada.com

ನ್ಯೂಸ್ ಫಸ್ಟ್‌ ಹಿರಿಮೆಗೆ ಮತ್ತೊಂದು ಗರಿ.. ಅತ್ಯುತ್ತಮ ತನಿಖಾ ವರದಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ

Share :

Published February 4, 2024 at 6:22pm

Update February 4, 2024 at 7:16pm

    ತನಿಖಾ ವರದಿ ನಡೆಸಿದ ಹಿರಿಯ ವರದಿಗಾರ ಪ್ರಕಾಶ್ ನೂಲ್ವಿ

    ವರದಿಗಾರರನ್ನು ಸನ್ಮಾನಿಸಿದ ಸಭಾಪತಿ ಬಸವರಾಜ ಹೊರಟ್ಟಿ

    ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ಗೆ ಮತ್ತೊಂದು ಪ್ರಶಸ್ತಿಯ ಗರಿ

ದಾವಣಗೆರೆ: ಸದಾ ನಿರ್ಭೀತಿಯಿಂದ ಜನರ ಪರವಾಗಿ ಕಾರ್ಯ ನಿರ್ವಹಿಸುವ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ಗೆ ಮತ್ತೊಂದು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ತನಿಖಾ ವರದಿಗೆ ಕಾರ್ಯ ನಿರತ ಪತ್ರಕರ್ತ ಸಂಘದಿಂದ ವಾರ್ಷಿಕ ಮಾಧ್ಯಮ ಪ್ರಶಸ್ತಿ ಸಿಕ್ಕಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

ದಾವಣಗೆರೆಯ ಶಿವಪಾರ್ವತಿ ಚೌಟ್ರಿಯಲ್ಲಿ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕಾರ್ಯ ನಿರತ ಪತ್ರಕರ್ತರ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.

ತನಿಖಾ ವರದಿ ನಡೆಸಿದ ನ್ಯೂಸ್ ಫಸ್ಟ್ ಹಿರಿಯ ವರದಿಗಾರ ಪ್ರಕಾಶ್ ನೂಲ್ವಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಹೊರಟ್ಟಿ ಹಾಗೂ ಶಿವಾನಂದ ತಗಡೂರು ಅವರು ನ್ಯೂಸ್ ಫಸ್ಟ್ ವರದಿಗಾರ ಪ್ರಕಾಶ್ ನೂಲ್ವಿ ಕೆಲಸಕ್ಕೆ ಬೆನ್ನು ತಟ್ಟಿ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ನ್ಯೂಸ್ ಫಸ್ಟ್ ಸುದ್ದಿ ವಾಹಿನಿಗೆ ಅಭಿನಂದಿಸಿದರು. ನ್ಯೂಸ್ ಫಸ್ಟ್ ಎಲ್ಲದರಲ್ಲೂ ಸದಾ ಮುಂದಿರುತ್ತೆ. ಪತ್ರಕರ್ತರ ಕೆಲಸ ತಪ್ಪುಗಳನ್ನ ಹೊರತರುವುದು. ಈ ಕೆಲಸವನ್ನ ಮಾಡಿ ಮನೆಗೆ ಕಳುಹಿಸುವ ಕೆಲಸ ಮಾಡಿದ್ದೀರಿ ಎಂದು ನ್ಯೂಸ್ ಫಸ್ಟ್ ಕಾರ್ಯವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಶ್ಲಾಘಿಸಿದರು.

ನ್ಯೂಸ್ ಫಸ್ಟ್‌ ತನಿಖಾ ವರದಿ ಏನು?
ಬಡ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ತಂದಿದೆ. ಅದುವೇ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಬ್ಬರು ನೇರವಾಗಿ ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕದ್ದು ತಿಂತಾ ಇದ್ರು. ಕೊಟ್ಯಾಂತರ ರೂಪಾಯಿ ಹಗರಣ ಕೇವಲ ಮೊಟ್ಟೆಯಿಂದಲೇ ನಡೆಯುತ್ತಿತ್ತು. ಅಪೌಷ್ಟಿಕತೆ ಹೋಗಲಾಡಿಸ್ತಿವಿ ಅನ್ನೋ ಸರ್ಕಾರದ ಮಾತು ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿತ್ತು. ಸರಕಾರ ಬದಲಾದರೂ ಮೊಟ್ಟೆ ಹಗರಣ ನಿಂತಿರಲಿಲ್ಲ. ಎರಡೂ ಸರಕಾರದಲ್ಲಿ ಸಚಿವರು ಮೊಟ್ಟೆ ಹಗರಣದಲ್ಲಿ ಭಾಗಿಯಾಗಿದ್ದರು

ದೊಡ್ಡ ಮಟ್ಟದಲ್ಲಿ ಅತ್ಯಂತ ಗುಟ್ಟಾಗಿ ನಡೆಯುತ್ತಿದ್ದ ಮೊಟ್ಟೆ ಹಗರಣವನ್ನು ನ್ಯೂಸ್ ಫಸ್ಟ್ ರಹಸ್ಯ ಕಾರ್ಯಾಚರಣೆಯ ಮೂಲಕ ಸಚಿವರ ಮುಖವಾಡ ಕಳಚಿತ್ತು. ಸಚಿವರಿಬ್ಬರೂ ಲಂಚ ತೆಗೆದುಕೊಳ್ಳುವ ದೃಶ್ಯವನ್ನು ನ್ಯೂಸ್ ಫಸ್ಟ್ ಸೆರೆ ಹಿಡಿದು ರಾಜ್ಯದ ಜನತೆಯ ಮುಂದಿಟ್ಟಿತ್ತು. ನ್ಯೂಸ್ ಫಸ್ಟ್ ಯಾವಾಗಲೂ ಬಡವರ ಧಮನಿತರ ನೊಂದವರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿತ್ತು. ದೊಡ್ಡ ಹಗರಣವನ್ಬು ಬಯಲಿಗೆಳೆದ ನ್ಯೂಸ್ ಫಸ್ಟ್‌ನ ಅತ್ಯುತ್ತಮ ತನಿಖಾ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಯ ಗರಿ ಲಭಿಸಿದೆ. ನ್ಯೂಸ್ ಫಸ್ಟ್‌ ನಿರ್ಭೀತಿಯಿಂದ, ನೊಂದವರ, ದಮನಿತರ, ಗಟ್ಟಿ ಧ್ವನಿ ಅನ್ನೋದು ಈ ಪ್ರಶಸ್ತಿಯಿಂದ ಮತ್ತೊಮ್ಮೆ ರುಜುವಾತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಸ್ ಫಸ್ಟ್‌ ಹಿರಿಮೆಗೆ ಮತ್ತೊಂದು ಗರಿ.. ಅತ್ಯುತ್ತಮ ತನಿಖಾ ವರದಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ

https://newsfirstlive.com/wp-content/uploads/2024/02/davanagere-6.jpg

Load More