Advertisment

ಧರ್ಮಸ್ಥಳ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು..?

author-image
Ganesh
Updated On
ಧರ್ಮಸ್ಥಳ ಕೇಸ್​ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?
Advertisment
  • ಅನಾಮಿಕ ದೂರುದಾರನಿಂದ ನಿವೃತ್ತ ಅಧಿಕಾರಿ ಬಗ್ಗೆ ಮಾಹಿತಿ
  • ನಿನ್ನೆಯಿಂದ ಬುರುಡೆ ರಸಹ್ಯ ಅಗೆಯುತ್ತಿರುವ SIT ತಂಡ
  • ದೂರುದಾರನ ಮಾಹಿತಿ ಆಧರಿಸಿ ತನಿಖೆ ತೀವ್ರಗೊಳಿಸಲು ಪ್ಲಾನ್

ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು ಹಾಕಿಕೊಂಡಿದೆ. ವಿಚಾರಣೆ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿಯ ಬಗ್ಗೆ ಅನಾಮಿಕ ದೂರುದಾರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

Advertisment

ಎರಡು ದಿನಗಳ ಕಾಲ ನಡೆದ ಎಸ್ಐಟಿ ವಿಚಾರಣೆಯಲ್ಲಿ ದೂರುದಾರ ಹಲವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಇದೆ. ದೂರುದಾರ ನೀಡಿದ್ದ ಮಾಹಿತಿ ಪ್ರಕಾರ ಧರ್ಮಸ್ಥಳ ಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: 15 ಅಡಿ ಅಗಲ, 8 ಅಡಿ ಆಳ ಅಗೆದ್ರೂ ಸಿಗದ ಅಸ್ತಿಪಂಜರ.. ಇವತ್ತು ಮತ್ತೆ ಸಮಾಧಿ ರಹಸ್ಯಕ್ಕಾಗಿ ಹುಡುಕಾಟ..!

ದೂರುದಾರ ಉಲ್ಲೇಖಿಸಿರುವ ಹಲವರನ್ನು ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಜೊತೆಗೆ ಆ ಪೊಲೀಸ್ ಅಧಿಕಾರಿಯನ್ನೂ ಎಸ್​ಐಟಿ ವಿಚಾರಣೆ ಮಾಡುವ ಸಾಧ್ಯತೆ ಇದೆ. ಮತ್ತೊಂದು ಕಡೆ ತನಿಖಾಧಿಕಾರಿಗಳು ಆರೋಪಕ್ಕೆ ಸಂಬಂಧಿಸಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಮೊನ್ನೆಯ ದಿನ ಹೂತಿಡಲಾಗಿದೆ ಎನ್ನಲಾಗಿರುವ ಶ*ವಗಳ ಸ್ಥಳಗಳನ್ನ ಮಾರ್ಕ್​ ಮಾಡಲಾಗಿತ್ತು. ನಿನ್ನೆ ಮಾರ್ಕ್​ ಮಾಡಿದ್ದ ಮೊದಲ ಜಾಗವನ್ನು ಅಗೆದು ಅಸ್ತಿಗಾಗಿ ಹುಡುಕಾಟ ನಡೆದಿತ್ತು. ಆದರೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಇಂದು ಎಸ್​ಐಟಿ ಕೂಡ ಆ ಪ್ರಕ್ರಿಯೆ ಮುಂದುವರಿಯಲಿದೆ.

Advertisment

ಇದನ್ನೂ ಓದಿ: ಐದನೇ ಟೆಸ್ಟ್​ಗೂ ಮುನ್ನವೇ ಕಿತ್ತಾಟ.. ಕೋಚ್ ಗಂಭೀರ್​​ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ..? Video

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment