ಚೀನಾಗೆ ಸಿಕ್ತು ಮತ್ತೊಂದು ಬಂಗಾರದ ನಿಕ್ಷೇಪ; ಅಲ್ಲಿರುವುದು ಎಷ್ಟು ಟನ್ ಚಿನ್ನ ಗೊತ್ತಾ?

author-image
Gopal Kulkarni
Updated On
ಚೀನಾಗೆ ಸಿಕ್ತು ಮತ್ತೊಂದು ಬಂಗಾರದ ನಿಕ್ಷೇಪ; ಅಲ್ಲಿರುವುದು ಎಷ್ಟು ಟನ್ ಚಿನ್ನ ಗೊತ್ತಾ?
Advertisment
  • ಮತ್ತೊಮ್ಮೆ ಭಾರೀ ಚಾಕ್​ಪಾಟ್ ಹೊಡೆದ ನೆರೆಯ ದೇಶ ಚೀನಾ
  • ವಾಯುವ್ಯ ಚೀನಾದಲ್ಲಿ ಮತ್ತೊಂದು ಭಾರಿ ಬಂಗಾರದ ನಿಕ್ಷೇಪ ಪತ್ತೆ
  • 168 ಟನ್ ಮೌಲ್ಯದಷ್ಟು ಚಿನ್ನದ ನಿಕ್ಷೇಪ ಕಂಡು ಹಿಡಿದ ನೆರೆರಾಷ್ಟ್ರ ಚೀನಾ

ಮುಟ್ಟಿದ್ದೆಲ್ಲಾವೂ ಚಿನ್ನ ಆಗುವ ಕಾಲ ಅಂತಾರಲ್ಲ, ಅಂತಹದೊಂದು ಕಾಲ ಈಗ ಚೀನಾಗೆ ಪ್ರಾಪ್ತಿಯಾಗಿದೆ. ಚೀನಾಗೆ ಈಗ ಮತ್ತೊಂದು ಬಂಗಾರದ ನಿಕ್ಷೇಪ ದೊರಕಿದ್ದು ದೊಡ್ಡ ಜಾಕ್​ಪಾಟ್​ ಹೊಡೆದಂತಾಗಿದೆ. ಈ ಒಂದು ಬಂಗಾರದ ನಿಕ್ಷೇಪ ವಾಯುವ್ಯ ಚೀನಾದ ಗನ್ಸು ಅನ್ನೊ ಪ್ರದಶದಲ್ಲಿ ದೊರಕಿದೆ. ಇದು ಮಂಗೋಲಿಯಾದ ಪಕ್ಕದಲ್ಲಿಯೇ ಇದೆ. ಮತ್ತು ಹೈಲಿಂಗಜಿಯಾಂಗ್ ಪ್ರದೇಶದಲ್ಲಿಯೂ ಕೂಡ ಬಂಗಾರದ ನಿಕ್ಷೇಪ ಪತ್ತೆಯಾಗಿದೆ.

ಸದ್ಯ ಪತ್ತೆಯಾಗಿರುವ ಈ ಹಳದಿ ಲೋಹದ ನಿಕ್ಷೇಪದ ಒಟ್ಟು ಮೌಲ್ಯ ಸುಮಾರು 168ಟನ್ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್​​ನಲ್ಲಿ ಇದೇ ಚೀನಾದಲ್ಲಿ ಹುನಾನ್ ಎಂಬ ಪ್ರಾಂತ್ಯದಲ್ಲಿ ವಿಶ್ವದ ಅತ್ಯಂತ ಭಾರೀ ಬಂಗಾರದ ನಿಕ್ಷೇಪ ದೊರಕಿತ್ತು.ಸುಮಾರು 1 ಸಾವಿರ ಮೆಟ್ರಿಕ್ ಟನ್​ನಷ್ಟು ಬಂಗಾರದ ನಿಕ್ಷೇಪ ದಕ್ಕಿದ್ದು ಈಗ ಎರಡನೇ ಬಾರಿ ಚೀನಾಗೆ ಬಂಗಾರದ ನಿಕ್ಷೇಪ ದೊರಕಿದೆ. ಅದರ ಶ್ರೀಮಂತಿಕೆಯ ಗತ್ತು ಇನ್ನಷ್ಟು ಮೇಲೇರುವ ಸಂಭವವಿದೆ.

ಇದನ್ನೂ ಓದಿ: ವಿಮಾನಯಾನ ಕೆಲಸಕ್ಕೆ ಬೈ ಬೈ.. ಸ್ವಯಂ ಉದ್ಯೋಗ ಹಿಡಿದ ಜಸ್ಟ್ 2 ತಿಂಗಳಲ್ಲೇ ಲಕ್ಷ ಲಕ್ಷ ಎಣಿಸಿದ ಸುಂದ್ರಿ..!

ಫೋರ್ಬ್ಸ್​ ಪಟ್ಟಿಯ ವರದಿ ಮಾಡಿರುವ ಪ್ರಕಾರ ಪ್ರಪಂಚದಲ್ಲಿ ಅತಿಹೆಚ್ಚು ಬಂಗಾರದ ನಿಕ್ಷೇಪ ಹೊಂದಿರುವ ಮೂರು ದೇಶಗಳಿವೆ. ಅದರಲ್ಲಿ ಮೊದಲ ಸಾಲಿನಲ್ಲಿ ಬಂದು ನಿಲ್ಲುವುದು ಯುನೈಟೆಡ್​ ಸ್ಟೇಟ್, ಜರ್ಮನಿ ಹಾಗೂ ಇಟಲಿ. ಯುಎಸ್​​ನಲ್ಲಿ ಅತಿಹೆಚ್ಚು ಬಂಗಾರದ ನಿಕ್ಷೇಪವಿದೆ. ಅದನ್ನೂ ಬಿಟ್ಟರ ಜರ್ಮನಿ, ಇಟಲಿ ಹಾಗೂ ಫ್ರಾನ್ಸ್​ನಲ್ಲಿ ನಾವು ಹೆಚ್ಚು ಬಂಗಾರದ ನಿಕ್ಷೇಪವನ್ನು ಕಾಣಬಹುದು.

ಇದನ್ನೂ ಓದಿ: 13 ವರ್ಷದ ವಿದ್ಯಾರ್ಥಿ ಜತೆ ಮಲಗಿ ಮಗು ಮಾಡಿಕೊಂಡ ಶಿಕ್ಷಕಿ; ಬೆಡ್​ರೂಮ್​​ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

ಚೀನಾ ಈ ವಿಚಾರದಲ್ಲಿ ಆರನೇ ಸ್ಥಾನದಲ್ಲಿದೆ ಇದರ ಬಳಿ ಸುಮಾರು 2264.32 ಟನ್​ನಷ್ಟು ಬಂಗಾರದ ನಿಕ್ಷೇಪವಿದೆ, ಇನ್ನು ಭಾರತದ ವಿಚಾರಕ್ಕೆ ಬಂದರೆ ಸುಮಾರು 840.76 ಟನ್​​ನಷ್ಟು ಭಾರತದ ಬಳಿ ಬಂಗಾರದ ನಿಕ್ಷೇಪವಿದೆ. ಇದೆಲ್ಲದರ ನಡುವೆ ಚೀನಾ ಜಗತ್ತಿನದ ಅತಿದೊಡ್ಡ ಚಿನ್ನದ ಉತ್ಪಾದಕ ದೇಶ ಎನಿಸಿಕೊಳ್ಳಬೇಕು ಎಂಬ ಹಪಾಹಪಿಯಲ್ಲಿದೆ. 375 ಟನ್​​ಗಳಷ್ಟು ಬಂಗಾರದ ನಿಕ್ಷೇಪವನ್ನು ಬಳಸಿಕೊಂಡು ಚೀನಾ 2022ರಲ್ಲಿ ಜಗತ್ತಗೆ ಚಿನ್ನದ ಉತ್ಪಾದನೆಯಲ್ಲಿ ಶೇಕಡಾ 10 ರಷ್ಟು ಉತ್ಪಾದನೆ ಚೀನಾವೇ ನೀಡಿತ್ತು. ಈಗ ಅದು ತನ್ನ ಚಿನ್ನದ ಗಣಿಗಾರಿಕೆಯನ್ನು ಮತ್ತಷ್ಟು ಏರಿಕೆ ಮಾಡಿಕೊಂಡಿದೆ. ಚಿನ್ನದ ಉತ್ಪಾದನೆಯಲ್ಲಿ ತಾನೇ ಮುಂಚೂಣಿಯಲ್ಲಿ ನಿಲ್ಲಬೇಕು ಎಂಬ ಹವಣಿಕೆಗೆ ಬಿದ್ದಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment