/newsfirstlive-kannada/media/post_attachments/wp-content/uploads/2025/06/Air-India.jpg)
ಜೂನ್ 12ರಂದು ಅಹ್ಮದಾಬಾದ್ ಏರ್‌ಪೋರ್ಟ್ ಬಳಿಯ ಮೇಘಾನಿ ನಗರದಲ್ಲಿ ನಡೆದ ದುರಂತ ಇನ್ನೂ ಎಲ್ಲರ ಕಣ್ ಮುಂದೆಯೇ ಇದೆ. ನೂರಾರು ಜನರ ಮಾರಣಹೋಮದ ಮಧ್ಯೆ ಅಹ್ಮದಾಬಾದ್‌ನಲ್ಲಿ ಅದೃಷ್ಟವಶಾತ್ ಅನಾಹುತವೊಂದು ತಪ್ಪಿದೆ.
ಅಹ್ಮದಾಬಾದ್‌ನಿಂದ ಲಂಡನ್ಗೆ ತೆರಳಬೇಕಿದ್ದ ಏರ್ ಇಂಡಿಯಾ 159 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ತಾಂತ್ರಿಕ ಕಾರಣದಿಂದಾಗಿ ಏರ್ ಇಂಡಿಯಾ ವಿಮಾನದ ಹಾರಾಟವನ್ನು ರದ್ದು ಮಾಡಲಾಗಿದೆ.
ದೆಹಲಿಯಲ್ಲಿ ಏರ್ ಇಂಡಿಯಾದ ಮತ್ತೊಂದು ವಿಮಾನದ ಸಂಚಾರ ಕೂಡ ರದ್ದಾಗಿದೆ. ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣದಿಂದ ದೆಹಲಿಯಿಂದ ಪ್ಯಾರಿಸ್‌ಗೆ ತೆರಳಬೇಕಿದ್ದು AI 143 ವಿಮಾನ ಸಂಚಾರ ರದ್ದು ಮಾಡಲಾಗಿದೆ. ಇದು ಕೂಡ ಬೋಯಿಂಗ್ 787 ವಿಮಾನ ಆಗಿತ್ತು.
ಇದನ್ನೂ ಓದಿ: Thug Life: ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಸುಪ್ರೀಂ ಗ್ರೀನ್ ಸಿಗ್ನಲ್
ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್!
ಮಹಾರಾಷ್ಟ್ರದ ನಾಗಪುರದಲ್ಲಿ ಇಂದು ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ ಕೊಚ್ಚಿಯಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ತೆರವುಗೊಳಿಸಲಾಗಿದೆ.
ವಿಮಾನ ಟೇಕಾಫ್ ಆದ 20 ನಿಮಿಷದ ಬಳಿಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ತಕ್ಷಣವೇ ಕೊಚ್ಚಿಯಿಂದ ಹೊರಟಿದ್ದ ವಿಮಾನವನ್ನು ನಾಗಪುರಕ್ಕೆ ಡೈವರ್ಟ್ ಮಾಡಲಾಗಿದೆ. ದೆಹಲಿ ತಲುಪದೇ ನಾಗಪುರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದ್ದು, ವಿಮಾನದ ತೀವ್ರ ತಪಾಸಣೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ